ಮೂಲಕ: ಅಂಕಿತಾ ಕುಲಕರ್ಣಿ
ಜುಲೈ 19 2023
ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ೧೧೫-೧೨೭ ಮತ್ತು ಬಿಜೆಪಿಗೆ ೬೮-೮೦ ಸ್ಥಾನಗಳನ್ನು ಸಮೀಕ್ಷೆ ಊಹಿಸಿದೆ. ಎಡಿಟ್ ಮಾಡಿದ ಚಿತ್ರದಲ್ಲಿ ಎಣಿಕೆಯನ್ನು ಪರಸ್ಪರ ಬದಲಾಯಿಸಲಾಗಿದೆ.
ಸಂದರ್ಭ
ಕರ್ನಾಟಕ ರಾಜ್ಯವು ಮೇ ೧೦, ೨೦೨೩ ರಂದು ೨೨೪ ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನೆಡೆಯಿತು. ಚುನಾವಣೆಗೆ ಮುನ್ನ, ಸುದ್ದಿ ವಾಹಿನಿಗಳು ಮತ್ತು ಇತರ ಸಂಸ್ಥೆಗಳು ಜನರ ಮನಸ್ಥಿತಿಯನ್ನು ಊಹಿಸಲು ರಾಜ್ಯಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಡೆಸುವುದು ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಇತ್ತೀಚೆಗೆ, ಈ ಸಮೀಕ್ಷೆಯ ಫಲಿತಾಂಶಗಳು ತಪ್ಪು ಮಾಹಿತಿಯ ಹರಡಲು ಮೂಲವಾಗಿದೆ. ಟ್ವಿಟ್ಟರ್ ನಲ್ಲಿನ ಇಂತಹ ಒಂದು ಪೋಷ್ಟ್ ಸಿ -ವೋಟರ್(ಸೆಂಟರ್ ಫಾರ್ ವೋಟಿಂಗ್ ಒಪೀನಿಯನ್ ಅಂಡ್ ಟ್ರೆಂಡ್ಸ್ ಇನ್ ಎಲೆಕ್ಷನ್ ರಿಸರ್ಚ್) ಸಮೀಕ್ಷೆಯನ್ನು ಪ್ರಸಾರ ಮಾಡುವ ಸುದ್ದಿ ವಾಹಿನಿಯ ಬುಲೆಟಿನ್‌ನ ಚಿತ್ರವನ್ನು ಒಳಗೊಂಡಿದೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ೧೧೫-೧೨೭ ಸ್ಥಾನಗಳನ್ನು ಗಳಿಸಲಿದೆ, ಕಾಂಗ್ರೆಸ್ ೬೮-೮೦, ಜೆಡಿಎಸ್ ಜನತಾ ದಳ (ಜಾತ್ಯತೀತ) ೨೩-೩೫ ಮತ್ತು ಇತರರು ೦-೨ ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ಬುಲೆಟಿನ್ ತೋರುತ್ತದೆ. ಈ ಪೋಷ್ಟ್ ಇದುವರೆಗೆ ಟ್ವಿಟರ್‌ನಲ್ಲಿ ೩೧೯,೧೦೦ ವೀಕ್ಷಣೆಗಳನ್ನು ಹೊಂದಿದೆ.
ವಾಸ್ತವವಾಗಿ
ಚಿತ್ರವನ್ನು ಎಚ್ಚರಿಕೆಯಿಂದ ವಿಶ್ಲೇಷಿಸುತ್ತಾ, ಭಾರತೀಯ ಹಿಂದಿ ಸುದ್ದಿ ವಾಹಿನಿಯಾಗಿರುವ ಎಬಿಪಿ ನ್ಯೂಸ್ ಅಂತಹ ಒಂದು ಪ್ರಕಟಣೆಯನ್ನು ಅಥವಾ ಬುಲೆಟಿನ್ ಪ್ರಸಾರ ಮಾಡಿದೆಯೇ ಎಂದು ಲಾಜಿಕಲಿ ಫ್ಯಾಕ್ಟ್ಸ್ ಪರಿಶೀಲಿಸಿತು. ನಾವು "ಎಬಿಪಿ ನ್ಯೂಸ್ ಸಿ -ವೋಟರ್ ಕರ್ನಾಟಕ ಎಲೆಕ್ಷನ್ " ಎಂಬ ಕೀವರ್ಡ್‌ನೊಂದಿಗೆ ಹುಡುಕಿದೆವು ಮತ್ತು ಸಮೀಕ್ಷೆಯ ಬಗ್ಗೆ ಎಬಿಪಿ ನ್ಯೂಸ್ ಮಾರ್ಚ್ ೨೯, ೨೦೨೩ ರಂದು ಪ್ರಕಟಿಸಿದ ಲೇಖನವನ್ನು ಕಂಡುಕೊಂಡಿದ್ದೇವೆ. "ಎಬಿಪಿ-ಸಿವೋಟರ್ ಕರ್ನಾಟಕ ಅಭಿಪ್ರಾಯ ಸಂಗ್ರಹವು ಕಾಂಗ್ರೆಸ್‌ಗೆ ೧೧೫-೧೨೭ ಸ್ಥಾನಗಳು, ಬಿಜೆಪಿಗೆ ೬೮-೮೦ ಸ್ಥಾನಗಳು ಮತ್ತು ಜೆಡಿಎಸ್‌ಗೆ ೨೩-೩೫ ಸ್ಥಾನಗಳನ್ನು ನಿರೀಕ್ಷಿಸುತ್ತದೆ" ಎಂದು ಅದು ಸ್ಪಷ್ಟವಾಗಿ ಹೇಳಿದೆ .
ಅದೇ ಲೇಖನವು ಎಬಿಪಿ ನ್ಯೂಸ್‌ನ ಟ್ವಿಟರ್ ಪೋಷ್ಟ್ ಸಹ ಒಳಗೊಂಡಿದೆ, ಇದು ಸಮೀಕ್ಷೆಯ ಫಲಿತಾಂಶಗಳನ್ನು ಲೈವ್ ಪ್ರಸಾರ ಮಾಡಿದ ವೀಡಿಯೋವನ್ನು ಒಳಗೊಂಡಿದೆ. ವೀಡಿಯೋದ ಥಂಬ್‌ನೇಲ್ ಸಮೀಕ್ಷೆಯ ಫಲಿತಾಂಶಗಳನ್ನು ಪ್ರದರ್ಶಿಸುವ ಬುಲೆಟಿನ್ ಅನ್ನು ನಾವು ನೋಡಬಹುದು; ‘ಬಿಜೆಪಿ ೬೮-೮೦ ಮತ್ತು ಕಾಂಗ್ರೆಸ್ ೧೧೫-೧೨೭’ ಸ್ಥಾನಗಳು.
ಬಿಜೆಪಿ ಮತ್ತು ಕಾಂಗ್ರೆಸ್‌ನ ನಿರೀಕ್ಷಿತ ಸ್ಥಾನಗಳ ಎಣಿಕೆಯನ್ನು ಬದಲಾಯಿಸಿ ಸುಳ್ಳು ಹೇಳಿಕೆಗಳೊಂದಿಗೆ ವೈರಲ್ ಆಗಿದೆ ಎಂದು ಸ್ಪಷ್ಟವಾಗುತ್ತದೆ. ಬುಲೆಟಿನ್ ನ ಬಲ ಮತ್ತು ಎಡಭಾಗದಲ್ಲಿ ಪ್ರದರ್ಶಿಸಲಾದ ಬಿಜೆಪಿ ಮತ್ತು ಕಾಂಗ್ರೆಸ್‌ನ ಇತರ ಎಣಿಕೆಗಳನ್ನೂ ಸಹ ವೈರಲ್ ಚಿತ್ರದಲ್ಲಿ ಎಡಿಟ್ ಮಾಡಲಾಗಿದೆ.
ದಿ ಕ್ವಿಂಟ್ ಪ್ರಕಟಿಸಿದ ಮೂಲ ಎಬಿಪಿ ಸಿ-ವೋಟರ್ ಫಲಿತಾಂಶಗಳು ಮತ್ತು ಹಲವಾರು ಟ್ವಿಟ್ಟರ್ ಬಳಕೆದಾರರಿಂದ ಹಂಚಿಕೊಳ್ಳಲಾಗಿದ್ದ ಎಣಿಕೆಯು ವೈರಲ್ ಟ್ವೀಟ್‌ನಲ್ಲಿ ಹೇಳಲಾದ ಎಣಿಕೆಯನ್ನು ತೋರುವುದಿಲ್ಲ. ವೈರಲ್ ಚಿತ್ರದಲ್ಲಿನ ಸಂಖ್ಯಾತ್ಮಕ ಊಹೆಗಳನ್ನು ಬದಲಾಯಿಸಲಾಗಿದೆ ಎಂದು ಇದು ಸಾಬೀತುಪಡಿಸುತ್ತದೆ.
ತೀರ್ಪು
ಚುನಾವಣೆಯ ಪೂರ್ವ ಸಮೀಕ್ಷೆಯು ಕರ್ನಾಟಕದಲ್ಲಿ ಬಿಜೆಪಿಯು ಬಹಿಮತದಿಂದ ಗೆಲ್ಲುವ ಸಾಧ್ಯತೆಗಳಿವೆ ಎಂದು ತಪ್ಪು ಮಾಹಿತಿಯನ್ನು ಹರಡಲು ಎಡಿಟ್ ಮಾಡಿದ ಚಿತ್ರವನ್ನು ಪ್ರಸಾರ ಮಾಡಲಾಗುತ್ತಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.