ಮೂಲಕ: ಅಂಕಿತಾ ಕುಲಕರ್ಣಿ
ಜುಲೈ 18 2023
ಫಣೀಂದ್ರ ಅವರು ಹಿಂದೂ ಧರ್ಮದರ್ಶಿ ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲ. ಪೊಲೀಸರು ಸಹ ಈ ಕೋಮು ನಿರೂಪಣೆಯನ್ನು ತಳ್ಳಿಹಾಕಿದ್ದಾರೆ.
ಸಂದರ್ಭ
ಮಂಗಳವಾರ, ಜುಲೈ ೧೧ ರಂದು, ಫಣೀಂದ್ರ ಸುಬ್ರಮಣ್ಯಂ ಮತ್ತು ವಿನು ಕುಮಾರ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳನ್ನು ಕರ್ನಾಟಕದ ಬೆಂಗಳೂರಿನಲ್ಲಿರುವ ಅವರ ಕಚೇರಿಯಲ್ಲಿ ಮೂವರು ವ್ಯಕ್ತಿಗಳು ಚಾಕುವಿನಿಂದ ಇರಿದು ಕೊಂದರು. ಸುಬ್ರಮಣ್ಯಂ ಮತ್ತು ಕುಮಾರ್ ಅವರು ಏರೋನಿಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಎಂಡಿ ಮತ್ತು ಸಿಇಒ ಆಗಿದ್ದರು.
ಈ ಘಟನೆಯ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಪೋಷ್ಟ್ ಗಳು ಸುಬ್ರಹ್ಮಣ್ಯಂ ಒಬ್ಬ "ಹಿಂದೂ ಧರ್ಮದರ್ಶಿ" ಎಂದು ಸೂಚಿಸಿವೆ ಮತ್ತು ಘಟನೆಯು ಕೋಮುಗಲಭೆಯ ಕೃತ್ಯವಾಗಿದೆ ಎಂದು ಹಂಚಿಕೊಳ್ಳಲಾಗಿದೆ.
ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯದರ್ಶಿ ಸುನಿಲ್ ದೇವಧರ್ ಸೇರಿದಂತೆ ಹಲವಾರು ಟ್ವಿಟರ್ ಬಳಕೆದಾರರು ಈ ಹೇಳಿಕೆಯನ್ನು ಶೇರ್ ಮಾಡಿದ್ದಾರೆ. ದೇವಧರ್ ಅವರ ಪೋಷ್ಟ್ ನ ಶೀರ್ಷಿಕೆ, "ಬೆಂಗಳೂರಿನಲ್ಲಿ ಹಿಂದೂ ಧರ್ಮದರ್ಶಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. #ಪನೀಂದ್ರ_ಸುಬ್ರಮಣ್ಯಂ ಇನ್ನಿಲ್ಲ. ಕ್ರೂರಿ #ಟಿಪ್ಪುಸುಲ್ತಾನನನ್ನು ಆರಾಧಿಸುವ ಸರ್ಕಾರದಿಂದಾಗಿ #ಕರ್ನಾಟಕದಲ್ಲಿ ಆತಂಕಕಾರಿ ಪರಿಸ್ಥಿತಿ ಬಂದಿದೆ. ಎಲ್ಲರೂ ಬಲವಾಗಿ ಪ್ರತಿಭಟಿಸಬೇಕು! #CongressHaiToKillingsHai (sic)” ಎಂದು ಹೇಳುತ್ತದೆ.
ಅವರ ಪೋಷ್ಟ್ ನಲ್ಲಿ ಸುಬ್ರಹ್ಮಣ್ಯಂ ಅವರು ಸಾಂಪ್ರದಾಯಿಕ ಹಿಂದೂ ಉಡುಪಿನಲ್ಲಿರುವ ಚಿತ್ರವನ್ನು ಒಳಗೊಂಡಿದೆ ಮತ್ತು ಒಂದು ತೋಳಿನ ಮೇಲೆ ಹಿಂದೂ ಚಿಹ್ನೆ 'ಓಂ' ಮತ್ತು ತ್ರಿಶೂಲಿನ ಹಚ್ಚೆ ಕಾಣಿಸುತ್ತಿದೆ .
ಆದರೆ, ಘಟನೆಯು ಯಾವುದೇ ಕೋಮು ಕೋನವನ್ನು ಹೊಂದಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಪೊಲೀಸರು ಇದುವರೆಗೆ ಫಿಲಿಕ್ಸ್ (ಫೆಲಿಕ್ಸ್ ಅಲಿಯಾಸ್ ಶಬರೀಶ್), ಸಂತು ಅಲಿಯಾಸ್ ಸಂತೋಷ್, ವಿನಯ್ ರೆಡ್ಡಿ ಮತ್ತು ಅರುಣ್ ಕುಮಾರ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ ಮತ್ತು ಇದು ವ್ಯಾಪಾರದ ಪೈಪೋಟಿಯ ಪ್ರಕರಣ ಎಂದು ಸ್ಪಷ್ಟಪಡಿಸಿದ್ದಾರೆ. ಸುಬ್ರಮಣ್ಯಂ ಅವರು ಹಿಂದೂ ಧರ್ಮದರ್ಶಿಯಾಗಿರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ವಾಸ್ತವವಾಗಿ
ಸಂತ್ರಸ್ತರು ನಡೆಸುತ್ತಿರುವ ಕಂಪನಿಯ ಹಿರಿಯ ಮಾರಾಟ ವ್ಯವಸ್ಥಾಪಕ ಶಂಕರ್ ನಾರಾಯಣ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಬೆಂಗಳೂರು ಪೊಲೀಸರು ದಾಖಲಿಸಿದ ಪ್ರಥಮ ಮಾಹಿತಿ ವರದಿಯ (ಎಫ್‌ಐಆರ್) ಪ್ರತಿಯನ್ನು ಲಾಜಿಕಲಿ ಫ್ಯಾಕ್ಟ್ಸ್ ಕಂಡುಕೊಂಡಿತು. ವ್ಯವಹಾರದಲ್ಲಿನ ದ್ವೇಷವು ಕೊಲೆಗೆ ಕಾರಣ ಎಂದು ದೂರುದಾರರು ಆರೋಪಿಸಿದ್ದಾರೆ. ನಾರಾಯಣ್ ಅವರು ಜಿನೆಟ್ (GNET ) ನ ಮಾಲೀಕ ಅರುಣ್ ಕುಮಾರ್ ಅವರು ಈ ಪ್ರಕರಣದಲ್ಲಿ ಹೆಸರಿಸಿದ್ದಾರೆ. ಇಬ್ಬರೂ ಸಂತ್ರಸ್ತರು ತಮ್ಮ ಕಂಪನಿಯನ್ನು ತೆರೆಯುವ ಮೊದಲು ಜಿನೆಟ್ ನಲ್ಲಿ ಉದ್ಯೋಗ ಮಾಡುತ್ತಿದ್ದರು.
ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಜುಲೈ ೧೧, ೨೦೨೩ ರಂದು ದಾಖಲಿಸಲಾದ ಎಫ್‌ಐಆರ್ ನಲ್ಲಿ ಫಿಲಿಕ್ಸ್ (ಫೆಲಿಕ್ಸ್ ಅಲಿಯಾಸ್ ಶಬರೀಶ್), ಸಂತು (ಸಂತೋಷ್) ಮತ್ತು ಅಪರಿಚಿತ ವ್ಯಕ್ತಿಯನ್ನು ಆರೋಪಿಗಳೆಂದು ಗುರುತಿಸಲಾಗಿದೆ. ಇದು ಅರುಣ್ ಕುಮಾರ್ ಅವರನ್ನು ಶಂಕಿತ ಎಂದು ಹೆಸರಿಸಿದೆ. ಎಫ್‌ಐಆರ್ ನಾಲ್ಕನೇ ಆರೋಪಿಯನ್ನು ಗುರುತಿಸದಿದ್ದರೂ, ಲಾಜಿಕಲಿ ಫ್ಯಾಕ್ಟ್ಸ್ ಪೊಲೀಸರಿಗೆ ಸಂಪರ್ಕಿಸಿದ್ದು ಅವನನ್ನು ವಿನಯ್ ರೆಡ್ಡಿ ಎಂದು ಗುರುತಿಸಿದ್ದಾರೆ. ನಾಲ್ವರನ್ನು ಬಂಧಿಸಲಾಗಿದ್ದು, ಐಪಿಸಿ ಸೆಕ್ಷನ್ ೩೦೨ (ಕೊಲೆ), ೧೨೦ಬಿ (ಅಪರಾಧ ಸಂಚು) ಮತ್ತು ೩೪ (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರಿನ ಅಡಿಷನಲ್ ಕಮಿಷನರ್ ಆಫ್ ಪೊಲೀಸ್ (ಈಸ್ಟ್) ರಮಣ್ ಗುಪ್ತಾ ಅವರೊಂದಿಗೆ ಮಾತನಾಡಿದಾಗ, "ಕೊಲೆಯಲ್ಲಿ ಯಾವುದೇ ಕೋಮು ಕೋನವಿಲ್ಲ. ಇದು ವ್ಯಾಪಾರದ ಪೈಪೋಟಿಯಾಗಿತ್ತು. ಸಂತ್ರಸ್ತ ಸುಬ್ರಮಣ್ಯಂ ಹಿಂದೂ ರಾಷ್ಟ್ರೀಯವಾದಿ ಆದರೆ ಅವನು ಒಬ್ಬ ಧರ್ಮದರ್ಶಿ ಎಂದು ತೋರಿಸಲು ಏನೂ ಇಲ್ಲ," ಎಂದು ಹೇಳಿದರು
ಈ ಪೋಷ್ಟ್ ಗಳು ವೈರಲ್ ಆದ ನಂತರ ಬೆಂಗಳೂರು ಪೊಲೀಸರು ಜುಲೈ ೧೨ ರಂದು ಟ್ವಿಟರ್‌ನಲ್ಲಿ ಈ ವಿಚಾರದ ಮೇಲೆ ಸ್ಪಷ್ಟೀಕರಣವನ್ನು ಪ್ರಕಟಿಸಿದ್ದಾರೆ.
"ಈ ಘಟನೆಗೆ ಸಂಬಂಧಿಸಿದಂತೆ, ಆರೋಪಿಗಳನ್ನು ಬಂಧಿಸಲಾಗಿದೆ ಮತ್ತು @amruthahallips ನಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ತನಿಖೆ ನಡೆಯುತ್ತಿರುವಾಗ ಈ ಘಟನೆಯನ್ನು ಮತ್ತಷ್ಟು ಹಂಚಿಕೊಳ್ಳುವುದನ್ನು ತಡೆಯಲು ನಾವು ನಮ್ಮ ಸಾರ್ವಜನಿಕರನ್ನು ವಿನಂತಿಸುತ್ತೇವೆ."
ಫಣೀಂದ್ರ ಸುಬ್ರಮಣ್ಯಂ ಯಾರು?
ನಾವು ಸುಬ್ರಹ್ಮಣ್ಯಂ ಅವರ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳನ್ನು ಹುಡುಕಿದೆವು ಮತ್ತು ಫೇಸ್‌ಬುಕ್ ಪುಟವನ್ನು ನೋಡಿದೆವು. ಅಲ್ಲಿನ "ಅಬೌಟ್" ವಿಭಾಗದಲ್ಲಿ 'ವರ್ಕ್ಸ್ ಅಟ್ ಹಿಂದೂ ನ್ಯಾಶನಲಿಸ್ಟ್ ಕಾಸ್' ಎಂದು ಬರೆಯಲಾಗಿದೆ. ಬಿಜೆಪಿ ಮತ್ತು ಹಿಂದೂ ದೇವರುಗಳನ್ನು ಬೆಂಬಲಿಸುವ ಹಲವಾರು ಪೋಷ್ಟ್ ಗಳಿದ್ದರೂ ಅನೇಕರು ಹೇಳಿಕೊಂಡಂತೆ ಅವರು 'ಹಿಂದೂ ಧರ್ಮದರ್ಶಿ' ಎಂದು ತೋರಿಸಲು ಯಾವುದೇ ಪುರಾವೆಗಳಿಲ್ಲ.
ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಅವರ ಹೇಳಿಕೆಯನ್ನು ನ್ಯೂಸ್ ಮಿನಿಟ್ ಉಲ್ಲೇಖಿಸಿದೆ. ಅದರ ಪ್ರಕಾರ ಸಂತ್ರಸ್ತ ಸುಬ್ರಹ್ಮಣ್ಯಂ ಅವರು ಆರ್‌ಎಸ್‌ಎಸ್ ಸದಸ್ಯರಾಗಿದ್ದರು ಆದರೆ ಈ ಕೊಲೆಯು ವ್ಯಾಪಾರದಲ್ಲಿದ್ದ ದ್ವೇಷದಿಂದ ಮಾಡಲಾಗಿದೆ ಅವರ ಧರ್ಮಕ್ಕೆ ಸಂಬಂಧಿಸಿಲ್ಲ ಎಂದು ಹೇಳಿದ್ದಾರೆ.
ಈ ಪೋಷ್ಟ್ ಗಳಲ್ಲಿ ಕಂಡು ಬಂದ ಚಿತ್ರವನ್ನು ನಾವು ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಏಪ್ರಿಲ್ ೩೦, ೨೦೨೩ ರಂದು ‘ಫಣೀಂದ್ರ ಸುಬ್ರಹ್ಮಣ್ಯಂ’ ಹೆಸರಿನ ಖಾತೆಯಿಂದ ಅಪ್‌ಲೋಡ್ ಮಾಡಲಾಗಿತ್ತು ಎಂದು ಕಂಡುಕೊಂಡೆವು.
ತೀರ್ಪು
ಬೆಂಗಳೂರಿನ ಜೋಡಿ ಕೊಲೆ ಪ್ರಕರಣದಲ್ಲಿ ಬಲಿಯಾದವರು ಹಿಂದೂ ಧರ್ಮದರ್ಶಿ ಎಂದು ಸೂಚಿಸಲು ಯಾವುದೇ ಪುರಾವೆಗಳಿಲ್ಲ. ಪೊಲೀಸರು ಕೋಮು ಕೋನವನ್ನು ತಳ್ಳಿಹಾಕಿದ್ದಾರೆ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ನಾಲ್ವರನ್ನು - ಎಲ್ಲಾ ಹಿಂದೂಗಳನ್ನು - ಬಂಧಿಸಿದ್ದಾರೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತಿದ್ದೇವೆ.