ಮುಖಪುಟ ಬಿಜೆಪಿಗೆ ಮತ ನೀಡಿ ಎಂದು ರಾಹುಲ್ ಗಾಂಧಿಯವರು ಜನರಿಗೆ ಕೇಳಿಕೊಂಡಿದ್ದಾರೆ ಎಂದು ಹೇಳಲು ಎಡಿಟ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಬಿಜೆಪಿಗೆ ಮತ ನೀಡಿ ಎಂದು ರಾಹುಲ್ ಗಾಂಧಿಯವರು ಜನರಿಗೆ ಕೇಳಿಕೊಂಡಿದ್ದಾರೆ ಎಂದು ಹೇಳಲು ಎಡಿಟ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರಾಜೇಶ್ವರಿ ಪರಸ

ಮೇ 22 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಬಿಜೆಪಿಗೆ ಮತ ನೀಡಿ ಎಂದು ರಾಹುಲ್ ಗಾಂಧಿಯವರು ಜನರಿಗೆ ಕೇಳಿಕೊಂಡಿದ್ದಾರೆ ಎಂದು ಹೇಳಲು ಎಡಿಟ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ ರಾಹುಲ್ ಗಾಂಧಿಯವರು ಚುನಾವಣೆಗೆ ಮುನ್ನ ಸೋಲನ್ನು ಒಪ್ಪಿಕೊಂಡಿದ್ದಾರೆ ಮತ್ತು ಬಿಜೆಪಿಗೆ ಮತ ಹಾಕುವಂತೆ ಜನರಲ್ಲಿ ಮನವಿ ಮಾಡುತ್ತಿರುವ ಹೇಳಿಕೆಯ ಸ್ಕ್ರೀನ್‌ಶಾಟ್ ವೀಡಿಯೋದಲ್ಲಿದೆ. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಮೂಲ ದೃಶ್ಯಾವಳಿಗಳಲ್ಲಿ ರಾಹುಲ್ ಗಾಂಧಿ ಕಾಂಗ್ರೆಸ್ ಅನ್ನು ಅನುಮೋದಿಸುತ್ತಿದ್ದಾರೆ, ಬಿಜೆಪಿ ಅಲ್ಲ. ಮೂಲ ಕ್ಲಿಪ್‌ನಲ್ಲಿ ಅವರು ತಮ್ಮ ಪಕ್ಷವನ್ನು ಟೀಕಿಸಿಲ್ಲ.

 ಹೇಳಿಕೆ ಏನು?

ನಡೆಯುತ್ತಿರುವ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಮತ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಳುತ್ತಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ವೈರಲ್ ಕ್ಲಿಪ್‌ನಲ್ಲಿ, ಅವರು ತಮ್ಮ ಪಕ್ಷ ಮತ್ತು ಅವರ ಪಕ್ಷದ ನೇತೃತ್ವದ INDIA ಮೈತ್ರಿ "ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

ವೀಡಿಯೋದಲ್ಲಿ ಗಾಂಧಿ, "ನಮಸ್ಕಾರ್, ಇದು ರಾಹುಲ್ ಗಾಂಧಿ. ಈ ಚುನಾವಣೆ ಪ್ರಜಾಪ್ರಭುತ್ವ ಮತ್ತು ಅದರ ತತ್ವಗಳನ್ನು ಉಳಿಸಲು" ಎಂದು ಹೇಳುವುದನ್ನು ಕೇಳಬಹುದು. ಒಂದೆಡೆ, ಕಾಂಗ್ರೆಸ್ ಪಕ್ಷ ಮತ್ತು INDIA ಮೈತ್ರಿಕೂಟ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಾಶಮಾಡಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಪ್ರಯತ್ನಗಳನ್ನು ಮಾಡುತ್ತಿದೆ (ಹಿಂದಿಯಿಂದ ಅನುವಾದಿಸಲಾಗಿದೆ).”

“ಕಾಂಗ್ರೆಸ್ ಪಕ್ಷ ೨೨-೨೫ ಜನರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಿದ್ದರೆ, ಬಿಜೆಪಿ ಪಕ್ಷವು ಕೋಟಿಗಟ್ಟಲೆ ಮಹಿಳೆಯರು ಮತ್ತು ಯುವಕರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ಅನ್ನು ಬೆಂಬಲಿಸಿ, ಸಂವಿಧಾನವನ್ನು ರಕ್ಷಿಸಿ ಮತ್ತು ನರೇಂದ್ರ ಮೋದಿಯವರ ಗುಂಡಿಯನ್ನು ಒತ್ತಿ (ಮತದಾನ ಮಾಡಿ),” ಎಂದು ಅವರು ಹೇಳಿದ್ದಾರೆ. ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಯೂಟ್ಯೂಬ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ವೀಡಿಯೋವನ್ನು ಎಡಿಟ್ ಮಾಡಲಾಗಿದೆ. ಒರಿಜಿನಲ್ ಕ್ಲಿಪ್ ನಲ್ಲಿ ರಾಹುಲ್ ಗಾಂಧಿಯವರು ಬಿಜೆಪಿಗೆ ಅಲ್ಲ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕೇಳುತ್ತಿದ್ದಾರೆ. 

ವಾಸ್ತವಾಂಶಗಳೇನು?

ರಿವರ್ಸ್ ಇಮೇಜ್ ಸರ್ಚ್ ನ ಮೂಲಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡ ಮೂಲ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ - ಇನ್ಸ್ಟಾಗ್ರಾಮ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಮತ್ತು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಏಪ್ರಿಲ್ ೨೫ ರಂದು ಹಂಚಿಕೊಂಡಿದ್ದಾರೆ. 

ಇನ್‌ಸ್ಟಾಗ್ರಾಮ್ ಮತ್ತು ಎಕ್ಸ್ ಪೋಷ್ಟ್‌ನ ಶೀರ್ಷಿಕೆಯಲ್ಲಿ, "ಈ ಚುನಾವಣೆಯಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು, ಈ ಚುನಾವಣೆಯಲ್ಲಿ 'ಮಿತ್ರ ಕಾಲ (ಸ್ನೇಹ ಯುಗ) ಬಿಟ್ಟು 'ಭಾರತೀಯರ ಸರ್ಕಾರ' ರಚಿಸಲು, ನಿಮ್ಮ ಪ್ರಜಾಸತ್ತಾತ್ಮಕ ಕರ್ತವ್ಯವನ್ನು ಮಾಡಿ. ಕಾಂಗ್ರೆಸ್ ಜೊತೆ ನಿಲ್ಲಿ. ಕೈ ಗುಂಡಿಯನ್ನು ಒತ್ತಿ! ಜೈ ಹಿಂದ್ (ಹಿಂದಿಯಿಂದ ಅನುವಾದಿಸಲಾಗಿದೆ).” ಪೋಷ್ಟ್ ಅನ್ನು ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ಪಿನ್ ಮಾಡಲಾಗಿದೆ.

ಈ ವೀಡಿಯೋದಲ್ಲಿ ಗಾಂಧಿ, "ನಮಸ್ಕಾರ, ಇದು ರಾಹುಲ್ ಗಾಂಧಿ. ಈ ಚುನಾವಣೆ ಪ್ರಜಾಪ್ರಭುತ್ವ ಮತ್ತು ತತ್ವಗಳನ್ನು ಉಳಿಸುವ ಚುನಾವಣೆಯಾಗಿದೆ. ಒಂದೆಡೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ನಾಶ ಮಾಡಲು ಯತ್ನಿಸುತ್ತಿದೆ. ಮತ್ತೊಂದೆಡೆ, ಕಾಂಗ್ರೆಸ್ ಪಕ್ಷ ಮತ್ತು ಭಾರತ ಒಕ್ಕೂಟವು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಪ್ರಯತ್ನಗಳನ್ನು ಮಾಡುತ್ತಿದೆ.

ಈ ವೀಡಿಯೋದಲ್ಲಿ ಹೇಳಲಾದ ಕೆಲವು ಪದಗಳನ್ನು ತಪ್ಪು ಹೇಳಿಕೆ ಮಾಡಲು ಪರಸ್ಪರ ಬದಲಾಯಿಸಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಉದಾಹರಣೆಗೆ: ೦:೦೭-೦:೧೩ ರ ಟೈಮ್‌ಸ್ಟ್ಯಾಂಪ್‌ನ ಸುತ್ತಲೂ, "ಬಿಜೆಪಿ ಮತ್ತು ಆರ್‌ಎಸ್‌ಎಸ್" ಮತ್ತು "ಕಾಂಗ್ರೆಸ್ ಪಕ್ಷ ಮತ್ತು INDIA ಮೈತ್ರಿ" ಪದಗಳನ್ನು ಗಾಂಧಿಯವರು ತಮ್ಮ ಪಕ್ಷದ ವಿರುದ್ಧ ಮಾತನಾಡಿದ್ದಾರೆ ಎಂದು ತೋರಲು ಪರಸ್ಪರ ಬದಲಾಯಿಸಲಾಗಿದೆ.

ಅದೇ ರೀತಿ, ಗಾಂಧಿಯವರು ೦:೩೭ ಮಾರ್ಕ್‌ನಲ್ಲಿ ಅವರು "ನರೇಂದ್ರ ಮೋದಿ ೨೨-೨೫ ಜನರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷವು ಕೋಟಿಗಟ್ಟಲೆ ಮಹಿಳೆಯರು ಮತ್ತು ಯುವಕರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ" ಎಂದು ಹೇಳಿರುವುದನ್ನು"ಕಾಂಗ್ರೆಸ್ ಪಕ್ಷವು ೨೨-೨೫ ಜನರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಿತು, ಆದರೆ ಬಿಜೆಪಿಯು ಕೋಟಿಗಟ್ಟಲೆ ಮಹಿಳೆಯರು ಮತ್ತು ಯುವಕರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ" ಎಂದು ಗಾಂಧಿ ಹೇಳಿದ ಹಾಗೆ ಎಡಿಟ್ ಮಾಡಲಾಗಿದೆ.

'ಬಿಜೆಪಿ,' 'ಆರ್‌ಎಸ್‌ಎಸ್,' 'ಸಂವಿಧಾನ,' ಮತ್ತು 'ನರೇಂದ್ರ ಮೋದಿ' ನಂತಹ ಪದಗಳನ್ನು ಆಯ್ಕೆ ಮಾಡಿ ಎಡಿಟ್ ಮಾಡಲಾಗಿದೆ ಮತ್ತು ರಾಹುಲ್ ಗಾಂಧಿಯವರು ಆಡಳಿತಾರೂಢ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅನ್ನು ಬೆಂಬಲಿಸುವಂತೆ ಜನರನ್ನು ಕೇಳಿದ್ದಾರೆ ಅನ್ನೋ ಹಾಗೆ ತೋರಿಸಲಾಗಿದೆ.

ಏಪ್ರಿಲ್ ೨೫ ರಂದು ದಿ ಎಕನಾಮಿಕ್ ಟೈಮ್ಸ್ ಪ್ರಕಟಿಸಿದ ವರದಿಯಿಂದ ಮೂಲ ವೀಡಿಯೋವನ್ನು ಸಹ ಉಲ್ಲೇಖಿಸಲಾಗಿದೆ. ಲೋಕಸಭೆ ಚುನಾವಣೆಯ ಎರಡನೇ ಹಂತದ ಮೊದಲು, ಗಾಂಧಿ ಈ ವೀಡಿಯೋವನ್ನು ಬಿಡುಗಡೆ ಮಾಡಿದ್ದು, ಕಾಂಗ್ರೆಸ್‌ಗೆ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದ್ದಾರೆ ಎಂದು ಫೈನಾನ್ಸಿಯಲ್ ಡೈಲಿ ಹೇಳಿದೆ. ಕಾಂಗ್ರೆಸ್‌ನ ಚುನಾವಣಾ ಚಿಹ್ನೆಯಾಗಿರುವ ಕೈ ಚಿಹ್ನೆಗೆ ಮತ ನೀಡುವಂತೆ ಗಾಂಧಿ ಅವರು ಮತದಾರರನ್ನು ಕೋರಿದ್ದರು.

ಗಾಂಧಿಯವರು ಬಿಜೆಪಿ, ಆರ್‌ಎಸ್‌ಎಸ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಹಲವಾರು ಸಂದರ್ಭಗಳಲ್ಲಿ ಮಾತನಾಡಿದ್ದಾರೆ.

ತೀರ್ಪು

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬಿಜೆಪಿಗೆ ಮತ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುವಂತೆ ಮಾಡಲು ಬಿಡುಗಡೆ ಮಾಡಿರುವ ವೀಡಿಯೋದ ಭಾಗಗಳನ್ನು ಎಡಿಟ್ ಮಾಡಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆ ತಪ್ಪು ಎಂದು ಗುರುತಿಸುತ್ತೇವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ