ಮುಖಪುಟ ಭಾರತೀಯ ಯುವ ಕಾಂಗ್ರೆಸ್ ನಾಯಕ ಶ್ರೀನಿವಾಸ್ ಬಿವಿ ಸ್ಮೃತಿ ಇರಾನಿ ಅವರನ್ನು 'ಮಾಟಗಾತಿ' ಎಂದು ಹೇಳುತ್ತಿರುವ ವೀಡಿಯೋ ಎಡಿಟ್ ಮಾಡಲಾಗಿದೆ.

ಭಾರತೀಯ ಯುವ ಕಾಂಗ್ರೆಸ್ ನಾಯಕ ಶ್ರೀನಿವಾಸ್ ಬಿವಿ ಸ್ಮೃತಿ ಇರಾನಿ ಅವರನ್ನು 'ಮಾಟಗಾತಿ' ಎಂದು ಹೇಳುತ್ತಿರುವ ವೀಡಿಯೋ ಎಡಿಟ್ ಮಾಡಲಾಗಿದೆ.

ಮೂಲಕ: ಅಂಕಿತಾ ಕುಲಕರ್ಣಿ

ಜುಲೈ 4 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಭಾರತೀಯ ಯುವ ಕಾಂಗ್ರೆಸ್ ನಾಯಕ ಶ್ರೀನಿವಾಸ್ ಬಿವಿ ಸ್ಮೃತಿ ಇರಾನಿ ಅವರನ್ನು 'ಮಾಟಗಾತಿ' ಎಂದು ಹೇಳುತ್ತಿರುವ ವೀಡಿಯೋ ಎಡಿಟ್ ಮಾಡಲಾಗಿದೆ.

ಫ್ಯಾಕ್ಟ್ ಚೆಕ್ಸ್

ತೀರ್ಪು False

ಐವೈಸಿ ಅಧ್ಯಕ್ಷ ಶ್ರೀನಿವಾಸ್ ಬಿವಿ ಹಣದುಬ್ಬರದ ಬಗ್ಗೆ ಮಾತನಾಡಿರುವ ವೀಡಿಯೋ ಎಡಿಟ್ ಮಾಡಿ ಅವರು ಸ್ಮೃತಿ ಇರಾನಿ ಬಗ್ಗೆ ಅನುಚಿತ ಟೀಕೆಗಳನ್ನು ಮಾಡಿದ್ದಾರೆ ಎಂದು ಹೇಳಲು ಬಳಸಲಾಗಿದೆ.

ಸಂದರ್ಭ
ಕಾಂಗ್ರೆಸ್ ನಾಯಕ ಮತ್ತು ಪಕ್ಷದ ಯುವ ಘಟಕ, ಭಾರತೀಯ ಯುವ ಕಾಂಗ್ರೆಸ್ ನ (ಐವೈಸಿ) ಅಧ್ಯಕ್ಷರಾದ ಶ್ರೀನಿವಾಸ್ ಬಿವಿ ಅವರ ೧೨ ಸೆಕೆಂಡುಗಳ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಶ್ರೀನಿವಾಸ್ ಬಿವಿ ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಸ್ಮೃತಿ ಇರಾನಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರನ್ನು "ಡಾಯೆನ್" (ಮಾಟಗಾತಿ) ಎಂದು ಉಲ್ಲೇಖಿಸಿ ಅವರನ್ನು "ಡಾರ್ಲಿಂಗ್" ಆಗಿ ನಿರೂಪಿಸಲಾಗಿದೆ ಎಂದು ವೀಡಿಯೋದ ಮೂಲಕ ಆರೋಪಿಸಲಾಗಿದೆ. "ಸ್ಮೃತಿ ಇರಾನಿ ಮೂಕ ಮತ್ತು ಕಿವುಡರಾಗಿದ್ದರೆ" ಮತ್ತು "ಹಣದುಬ್ಬರದ ಮಾಟಗಾತಿಯನ್ನು ಪ್ರಿಯತಮೆಯನ್ನಾಗಿ (ಡಾರ್ಲಿಂಗ್) ಮಾಡಿ ಮಲಗುವ ಕೋಣೆಯಲ್ಲಿ ಇರಿಸಲಾಗಿದೆ" ಎಂದು ಹಿಂದಿಯಲ್ಲಿ ಹೇಳುವುದರೊಂದಿಗೆ ವೀಡಿಯೋ ಪ್ರಾರಂಭವಾಗುತ್ತದೆ. ಬಿಜೆಪಿಗೆ ಸಂಬಂಧಿಸಿದ ಹಲವಾರು ಟ್ವಿಟ್ಟರ್ ಖಾತೆಗಳು, ಉದಾಹರಣೆಗೆ ಪಕ್ಷದ ಕರ್ನಾಟಕ ಸಂಘಟನೆ, ಬಿಜೆಪಿ ಐಟಿ (ಮಾಹಿತಿ ಮತ್ತು ತಂತ್ರಜ್ಞಾನ) ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಮತ್ತು ರಾಜಕೀಯ ವಿಮರ್ಶಕಿ ಪ್ರೀತಿ ಗಾಂಧಿ, ಈ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಶ್ರೀನಿವಾಸ್ ಅವರು ಹೇಳಿಕೆಯನ್ನು ಖಂಡಿಸುತ್ತಾ, ಇರಾನಿ ಅವರ ಬಗ್ಗೆ ಅಮಾನವೀಯ ಮತ್ತು ಸ್ತ್ರೀ ದ್ವೇಷದ ಮಾತುಗಳನ್ನು ಆಡಿದ್ದಾರೆ ಎಂದು ಆರೋಪಿಸಿದ್ದಾರೆ.

ವಾಸ್ತವವಾಗಿ
ಲಾಜಿಕಲಿ ಫ್ಯಾಕ್ಟ್ಸ್ ವೈರಲ್ ವೀಡಿಯೋದ ಮೂಲವನ್ನು ಕಂಡುಕೊಂಡಿದೆ. ಕಾಂಗ್ರೆಸ್ ಪಕ್ಷದ ಸಂಕಲ್ಪ್ ಸತ್ಯಾಗ್ರಹದ ಸಂದರ್ಭದಲ್ಲಿ ಮಾರ್ಚ್ ೨೬ ರಂದು ದೆಹಲಿಯ ರಾಜ್ ಘಾಟ್ ನಲ್ಲಿ ಶ್ರೀನಿವಾಸ್ ಬಿ.ವಿ ಯವರು ಅಲ್ಲಿನ ಜನರುನ್ನು ಉದ್ದೇಶಿಸಿ ಮಾತನಾಡಿದರು. ಈ ಭಾಷಣದ ಸುಮಾರು ೬ ನಿಮಿಷಗಳ ಸುದೀರ್ಘ ವೀಡಿಯೋವನ್ನು ಕಾಂಗ್ರೆಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ವೀಡಿಯೋದಲ್ಲಿ ಶ್ರೀನಿವಾಸ್ ಅವರು, "ಬಿಜೆಪಿ ಇರುವಲ್ಲೆಲ್ಲಾ ನಿರುದ್ಯೋಗ ಮತ್ತು ಹಣದುಬ್ಬರವಿದೆ" ಎಂದು ಹೇಳಿದನ್ನು ನಾವು ನೋಡಬಹುದು. ವೀಡಿಯೋದ ನಾಲ್ಕೂವರೆ ನಿಮಿಷಗಳಲ್ಲಿ, ೨೦೧೪ ರಲ್ಲಿ ಬಿಜೆಪಿ ಹಣದುಬ್ಬರವನ್ನು "ಮಾಟಗಾತಿ" ಎಂದು ಗುರುತಿಸಿತ್ತು ಎಂದು ಅವರು ಹೇಳುತ್ತಾರೆ. "ಸ್ಮೃತಿ ಇರಾನಿ ಈಗ ಮೂಕ ಮತ್ತು ಕಿವುಡ ವ್ಯಕ್ತಿಯಾಗಿದ್ದಾರೆ" (ಅಂದರೆ ನಡೆಯುತ್ತಿರುವ ಸಮಸ್ಯೆಗಳನ್ನು ನಿರ್ಲಕ್ಷಿಸುವ ಕಾರ್ಯ) ಮತ್ತು "ಅದೇ ಮಾಟಗಾತಿ, ಮೆಹೆಂಗಾಯಿ (ಹಣದುಬ್ಬರ) ಮಾಟಗಾತಿಯನ್ನು ಪ್ರಿಯತಮೆಯನ್ನಾಗಿ ಮಾಡಲಾಗಿದೆ ಮತ್ತು ಮಲಗುವ ಕೋಣೆಯಲ್ಲಿ ಇರಿಸಲಾಗಿದೆ," ಎಂದು ಹೇಳಿದರು. ವೈರಲ್ ಕ್ಲಿಪ್ ಅನ್ನು ಮಧ್ಯದಿಂದ ಎಡಿಟ್ ಮಾಡಿ ತಪ್ಪಾದ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಶ್ರೀನಿವಾಸ್ ಅವರು ವಾಸ್ತವವಾಗಿ ಹಣದುಬ್ಬರವನ್ನು "ಮಾಟಗಾತಿ" ಎಂದು ಉಲ್ಲೇಖಿಸಿದ್ದಾರೆ ಇರಾನಿಯವರನ್ನು ಅಲ್ಲ. 

ಮಾರ್ಚ್ ೨೭, ೨೦೨೩ ರಂದು, ಐವೈಸಿ ಲೀಗಲ್ ಸೆಲ್‌ನ ಅಧಿಕೃತ ಟ್ವಿಟ್ಟರ್ ಖಾತೆಯು ,"ಐವೈಸಿ ಅಧ್ಯಕ್ಷರು (ಶ್ರೀನಿವಾಸ್ ಬಿ.ವಿ) ಮಾಡಿದ ಭಾಷಣವನ್ನು ತಪ್ಪಾಗಿ ನಿರೂಪಿಸಲಾದ ಕ್ಲಿಪ್ಪಿಂಗ್" ಕುರಿತು ಪತ್ರಿಕಾ ಪ್ರಕಟಣೆಯನ್ನು ಹಂಚಿಕೊಂಡಿದೆ. ಪ್ರಕಟಣೆಯ ಪ್ರಕಾರ ವೈರಲ್ ಕ್ಲಿಪ್ ಅನ್ನು ಎಡಿಟ್ ಮಾಡಲಾಗಿದೆ ಮತ್ತು "ತಪ್ಪಾಗಿ ನಿರೂಪಿಸಿ, ಸತ್ಯಗಳ ಕಟ್ಟುಕಥೆ ಮತ್ತು ಸಂಸ್ಥೆಯ ಪ್ರತಿಷ್ಠೆಗೆ ಕಳಂಕ ತರುವ ಉದ್ದೇಶವಿದೆ" ಎಂದು ಹೇಳುತ್ತದೆ. ಕೇಂದ್ರದಲ್ಲಿ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ಅಧಿಕಾರದಲ್ಲಿದ್ದಾಗ, ಬಿಜೆಪಿ ನಾಯಕರು ಹಣದುಬ್ಬರ ಮತ್ತು ಬೆಲೆ ಏರಿಕೆಯನ್ನು (ಮೆಹೆಂಗಾಯಿ)" ಎಂದು ಉಲ್ಲೇಖಿಸುತ್ತಿದ್ದರು ಮತ್ತು ಐವೈಸಿ ಅಧ್ಯಕ್ಷರು ಅದೇ ಉಲ್ಲೇಖಗಳನ್ನು ಮಾತ್ರ ಬಳಸುತ್ತಿದ್ದರು ಎಂದು ಅದು ವಿವರಿಸಿದೆ. 

ಇದಲ್ಲದೆ, ಶ್ರೀನಿವಾಸ್ ಅವರೇ ತಮ್ಮ ಭಾಷಣದ ಎಡಿಟ್ ಮಾಡದ ಕ್ಲಿಪ್ ಅನ್ನು ಅವರ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡು, "ಜನರು ಅವರ ಸಂಪೂರ್ಣ ಹೇಳಿಕೆಯನ್ನು ಹಂಚಿಕೊಳ್ಳಲು ಕೇಳಿದರು, ಕ್ಲಿಪ್ ಮಾಡಿದ ಆವೃತ್ತಿಗಳನ್ನು ಅಲ್ಲ." ಎಂದು ತಿಳಿಸಿದ್ದಾರೆ. ಅವರ ಹೇಳಿಕೆಗೆ ಸ್ಪಷ್ಟನೆಯನ್ನು ನೀಡುತ್ತಾ, ಅವರು ಆಗ ₹ ೪೦೦ ಬೆಲೆಯಿದ್ದ ಎಲ್‌ಪಿಜಿ ಸಿಲಿಂಡರ್‌ನ ಹಣದುಬ್ಬರವನ್ನು "ಮಾಟಗಾತಿ" ಎಂದು ಕರೆದಿದ್ದ ಬಿಜೆಪಿ ನಾಯಕರ ಹಳೆಯ ಹೇಳಿಕೆಯೊಂದನ್ನು ಉಲ್ಲೇಖಿಸಿದ್ದೇನೆ ಎಂದು ಹೇಳಿದರು ಮತ್ತು ಇಂದು ಎಲ್‌ಪಿಜಿ ಸಿಲಿಂಡರ್‌ನ ಬೆಲೆ ₹ ೧,೧೦೦ಕ್ಕೆ ತಲುಪಿರುವುದರಿಂದ ಅದೇ ಬಿಜೆಪಿಯವರು ಅದೇ ‘ಮಾಟಗಾತಿ’ಯನ್ನು ತಮ್ಮ ‘ಡಾರ್ಲಿಂಗ್’ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ತೀರ್ಪು
ಐವೈಸಿ ಅಧ್ಯಕ್ಷ ಶ್ರೀನಿವಾಸ್ ಬಿವಿ ಅವರು ಹಣದುಬ್ಬರವನ್ನು ಕುರಿತು ಮಾಡಿದ ಭಾಷಣವನ್ನು ಎಡಿಟ್ ಮಾಡಿ ಅವರು ಸ್ಮೃತಿ ಇರಾನಿಯವರ ಬಗ್ಗೆ ಅನುಚಿತ ಮಾತುಗಳನ್ನು ಆಡಿದರು ಎಂದು ತಪ್ಪಾದ ಹೇಳಿಕೆಯೊಂದಿಗೆ ಹಂಚ್ಕೊಳ್ಳಲಾಗಿದೆ. ಹೀಗಾಗಿ ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ