ಮುಖಪುಟ ಚೀನಾದಲ್ಲಿ ಮರಗಳಿಂದ ಬಿದ್ದ ಕ್ಯಾಟ್ಕಿನ್ ಹೂಗೊಂಚಲವನ್ನು ಹುಳುಗಳ ಮಳೆ ಎಂದು ತಪ್ಪಾಗಿ ಗ್ರಹಿಸಲಾಗಿದೆ

ಚೀನಾದಲ್ಲಿ ಮರಗಳಿಂದ ಬಿದ್ದ ಕ್ಯಾಟ್ಕಿನ್ ಹೂಗೊಂಚಲವನ್ನು ಹುಳುಗಳ ಮಳೆ ಎಂದು ತಪ್ಪಾಗಿ ಗ್ರಹಿಸಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ

ಮಾರ್ಚ್ 24 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಚೀನಾದಲ್ಲಿ ಮರಗಳಿಂದ ಬಿದ್ದ ಕ್ಯಾಟ್ಕಿನ್ ಹೂಗೊಂಚಲವನ್ನು ಹುಳುಗಳ ಮಳೆ ಎಂದು ತಪ್ಪಾಗಿ  ಗ್ರಹಿಸಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು False

ಚೀನಾದಲ್ಲಿ ವಸಂತ ಕಾಲದಲ್ಲಿ ಮರಗಳಿಂದ ಬೀಳುವ ಹೂಗೊಂಚಲವನ್ನು ಆಕಾಶದಿಂದ ಸುರಿಯುತ್ತಿರುವ ಹುಳುಗಳ ಮಳೆ ಎಂದು ತಪ್ಪಾಗಿ ಗ್ರಹಿಸಲಾಗಿದೆ.

ಸಂದರ್ಭ

ಮಾರ್ಚ್ ೨೦೨೩ರಲ್ಲಿ ಚೀನಾದ ಲಿಯಾನಿಂಗ್‌ನಲ್ಲಿ ಆಕಾಶದಿಂದ ಹುಳುಗಳ ಮಳೆ ಬೀಳುತ್ತಿರುವುದನ್ನು ತೋರಿಸುವ ವೀಡಿಯೋ ವೈರಲ್ ಆಗಿದೆ. ಸಿಲಿಂಡರ್ ಆಕಾರದಲ್ಲಿ ಕಂಡುಬರುವ ಸಣ್ಣದಾದ ಹುಳುಗಳಂತಹ ವಸ್ತುಗಳಿಂದ ಮುಚ್ಚಿದ ಕೆಲವು ನಿಂತಿರುವ ಕಾರುಗಳನ್ನು ನಾವು ವೀಡಿಯೋದಲ್ಲಿ ನೋಡಬಹುದು. ಅಂತಹ ಒಂದು ಪೋಷ್ಟ್ ಫೇಸ್ಬುಕ್ ನಲ್ಲಿ ವೈರಲ್ ಆಗಿದ್ದು ಅದರ ಶೀರ್ಷಿಕೆ ಹೇಗಿದೆ, "ಇಡೀ ಪ್ರಪಂಚಕ್ಕೆ ಕರೋನಾ ಬಿಟ್ಟು ಮೆರೆಯುತಿದ್ದ ಚೀನಾ ಅರ್ಧ ಸತ್ತೇ ಹೋಗಿದೆ, ಈಗ ಚೀನಾದಲ್ಲಿ ಈ ವಿಚಿತ್ರ ಕಾಣಿಸಿಕೊಂಡಿದೆ, ಹುಳುಗಳ ಮಳೆ, ಇನ್ನೂ ಅವರಿಗೆ ಬಹಳ ಕಾದಿದೆ." ಕರ್ನಾಟಕ ಡೈಲಿ ಮತ್ತು ವಿಜಯ ಕರ್ನಾಟಕದಂತಹ ವಿವಿಧ ಪ್ರಾದೇಶಿಕ ಮಾಧ್ಯಮಗಳೂ ಸಹ ವೈರಲ್ ವೀಡಿಯೋವನ್ನು ಇದೇ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆದರೆ ಈ ಹೇಳಿಕೆಗಳು ತಪ್ಪಾಗಿವೆ. 

ವಾಸ್ತವವಾಗಿ

ಹುಳುಗಳ ಮಳೆಯ ಕುರಿತು ಯಾವುದೇ ಸ್ಥಳೀಯ ಚೀನಾ ಮಾಧ್ಯಮಗಳು ವರದಿ ಮಾಡಿರಿವುದನ್ನು ನಾವು ಕಾಣಲಿಲ್ಲ. ವೀಡಿಯೋಗೆ ಸಂಬಂಧಿಸಿದ ಟ್ವೀಟ್‌ಗಳನ್ನು ಪರಿಶೀಲಿಸಿದಾಗ, ಇದು ಹುಳುಗಳ ಮಳೆಯಲ್ಲ, ಆದರೆ ಮರಗಳಿಂದ ಬೀಳುವ ನೈಸರ್ಗಿಕ ವಸ್ತು ಎಂದು ಹೇಳುವ ಕೆಲವು ಪೋಷ್ಟ್ ಗಳನ್ನು ನಾವು ಕಂಡುಕೊಂಡೆವು. 

ಇದು ಪಾಪ್ಲರ್ ಮರಗಳ ಹೂಗೊಂಚಲು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಸ್ಪಷ್ಟಪಡಿಸಿದ್ದಾರೆ. ವೀಡಿಯೋದಲ್ಲಿ ಕಂಡುಬರುವ ಹೂವುಗಳು "ಕ್ಯಾಟ್ಕಿನ್" ಎಂದು ವರ್ಗೀಕರಿಸಲಾಗಿದೆ, ಇದು ದೂರದಿಂದ ನೋಡಿದಾಗ ಹುಳವನ್ನು ಹೋಲುತ್ತದೆ. ಕ್ಯಾಟ್ಕಿನ್ ಹೂವುಗೊಂಚಲವನ್ನು ಹೊಂದಿರುವ ಇಂತಹ ಮರಗಳು ಚೀನಾದಲ್ಲಿ ಲಿಯಾನಿಂಗ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಕಂಡುಬರುತ್ತವೆ. ಬೀಜಿಂಗ್‌ನ ರಾಜಕೀಯ ನಿರೂಪಕ ಮತ್ತು ಪತ್ರಕರ್ತ ಶೆನ್ ಶಿವೈ, ರಿಯೊ ಟೈಮ್ಸ್ ಹಂಚಿಕೊಂಡ ಇದೇ ರೀತಿಯ ವೀಡಿಯೋಗೆ ಉತ್ತರಿಸಿದ್ದಾರೆ. ಅವರು ಕಳೆದ ಕೆಲವು ದಿನಗಳಿಂದ ಬೀಜಿಂಗ್‌ನಲ್ಲಿಯೇ ವಾಸವಾಗಿದ್ದು ಸ್ಥಳದಲ್ಲಿ ಇಂತಹ ಮಳೆ ಕಂಡುಬಂದಿಲ್ಲ ಹೀಗಾಗಿ ಇದು ನಕಲಿ ಎಂದು ಶಿವೈ ಗಮನಿಸಿದ್ದಾರೆ. ಅದರೊಂದಿಗೆ ವೈರಲ್ ಆಗಿರುವ ವೀಡಿಯೋದಲ್ಲಿ ತುಂತುರು ಮಳೆಯಾಗುತ್ತಿದ್ದರಿಂದ ಜನರು ಕೊಡೆ ಹಿಡಿದು ನಡೆಯುತ್ತಿದ್ದಾರೆ ಎಂದು ಅವರು ಸ್ಪಷ್ಟಿಕರಣೆ ನೀಡಿದ್ದಾರೆ. 

ಇದೇ ರೀತಿಯ ಹೂವುಗೊಂಚಲವನ್ನು ತೋರಿಸುವ ವೀಡಿಯೋಗಾಗಿ ನಾವು ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳನ್ನು ಹುಡುಕಿದಾಗ ಲಿಯಾನಿಂಗ್‌ನಲ್ಲಿ ತೆಗೆದ ಏಪ್ರಿಲ್ ೨೦೨೧ ವೀಡಿಯೋವೊಂದನ್ನು ನಾವು ಕಂಡುಕೊಂಡೆವು. ಇದರಲ್ಲಿ ವೈರಲ್ ವೀಡಿಯೋದಲ್ಲಿ ಕಂಡುಬರುವ ಅದೇ ರೀತಿಯ ವಸ್ತುಗಳು ನಿಂತಿರುವ ಕಾರುಗಳ ಮೇಲೆ ಬಿದ್ದಿರುವುದನ್ನು ಕಾಣಬಹುದು. ಚೀನಾದ ಸಾಮಾಜಿಕ ಮಾಧ್ಯಮ, ಡೌಯಿನ್‌ನಲ್ಲಿ ಪೋಷ್ಟ್ ಮಾಡಿದ ೨೦೨೧ರ ವೀಡಿಯೋದ ಶೀರ್ಷಿಕೆಯನ್ನು ಇಂಗ್ಲಿಷ್‌ಗೆ ಅನುವಾದಿಸಿದಾಗ, "ಲಿಯಾನಿಂಗ್ ಪ್ರದೇಶದ ಬೆಂಕ್ಸಿಯಲ್ಲಿ ಪಾಪ್ಲರ್ ಹೂವುಗಳ ಸ್ಪೈಕ್‌ಗಳು ಕಾರಿನ ಮೇಲ್ಛಾವಣಿಯನ್ನು ಆವರಿಸಿವೆ. ನೆಟ್ಟಿಗರು: ಕಾರನ್ನು ತೊಳೆದದ್ದು ವ್ಯರ್ಥವಾಯಿತು." ಎಂದು ಓದುತ್ತದೆ.

ಅದಲ್ಲದೆ, ಚೀನಾದ ಸಾರ್ವಜನಿಕ ಭದ್ರತಾ ಬ್ಯೂರೋ ಸಚಿವಾಲಯದ ಅಧಿಕೃತ ವೈಬೊ ಖಾತೆಯು ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುತ್ತಾ ಜನರು ಇಂತಹ ವಿಷಯಗಳನ್ನು ಹಂಚಿಕೊಳ್ಳುವ ಮೊದಲು ಹೆಚ್ಚುವರಿಯಾಗಿ ಓದಬೇಕು ಎಂದು ಹೇಳಿದ್ದಾರೆ. ಖಾತೆಯು ಹೂವುಗೊಂಚಲಿನ ಮರದ ಮತ್ತೊಂದು ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ರೀತಿಯ ಮರಗಳಿರುವ ಸ್ಥಳಗಳಲ್ಲಿ, ವಿಶೇಷವಾಗಿ ವಸಂತ ಕಾಲದಲ್ಲಿ ಇಂತಹ ದೃಶ್ಯಗಳು ಸಾಮಾನ್ಯವಾಗಿದೆ. ಹೀಗಾಗಿ, ಚೀನಾದಲ್ಲಿ ವಾಹನಗಳ ಮೇಲೆ ಬೀಳುವ ಹೂವುಗಳು ಅಥವಾ ಹೂಗೊಂಚಲುಗಳನ್ನು ಹುಳುಗಳು ಎಂದು ತಪ್ಪಾಗಿ ಗ್ರಹಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. 

ತೀರ್ಪು

ಚೀನಾದ ಲಿಯಾನಿಂಗ್‌ನಲ್ಲಿ ಹುಳುಗಳಂತೆ ಕಾಣುವ ವಸ್ತುಗಳಿಂದ ಮುಚ್ಚಿದ ವಾಹನಗಳ ವೀಡಿಯೋ ವಾಸ್ತವವಾಗಿ, ಮರಗಳಿಂದ ಬಿದ್ದ ಹೂಗೊಂಚಲು. ಕಾರುಗಳ ಮೇಲಿನ ವಸ್ತುಗಳು ಹುಳುಗಳಲ್ಲ, ಮತ್ತು ಆ ಪ್ರದೇಶದಲ್ಲಿ ಯಾವುದೇ ಹುಳುಗಳು ಮಳೆಯಾಗಲಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ