ಮುಖಪುಟ ೨೦೨೧ ರಲ್ಲಿ ಬೆಳಗಾವಿಯ ಸ್ಥಳೀಯ ಚುನಾವಣೆಯಲ್ಲಿ ಉಚಿತ ಶವಸಂಸ್ಕಾರ ನೀಡುವುದಾಗಿ ಬಿಜೆಪಿ ನೀಡಿದ ಭರವಸೆಯನ್ನು ಕರ್ನಾಟಕ ಚುನಾವಣೆಗೆ ಪಕ್ಷದ ಯೋಜನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

೨೦೨೧ ರಲ್ಲಿ ಬೆಳಗಾವಿಯ ಸ್ಥಳೀಯ ಚುನಾವಣೆಯಲ್ಲಿ ಉಚಿತ ಶವಸಂಸ್ಕಾರ ನೀಡುವುದಾಗಿ ಬಿಜೆಪಿ ನೀಡಿದ ಭರವಸೆಯನ್ನು ಕರ್ನಾಟಕ ಚುನಾವಣೆಗೆ ಪಕ್ಷದ ಯೋಜನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ

ಜುಲೈ 18 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೨೧ ರಲ್ಲಿ ಬೆಳಗಾವಿಯ ಸ್ಥಳೀಯ ಚುನಾವಣೆಯಲ್ಲಿ ಉಚಿತ ಶವಸಂಸ್ಕಾರ ನೀಡುವುದಾಗಿ ಬಿಜೆಪಿ ನೀಡಿದ ಭರವಸೆಯನ್ನು ಕರ್ನಾಟಕ ಚುನಾವಣೆಗೆ ಪಕ್ಷದ ಯೋಜನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು False

೨೦೨೩ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿಯು ರಾಜ್ಯದಲ್ಲಿ ಉಚಿತ ಶವಸಂಸ್ಕಾರವನ್ನು ನೀಡುವ ಬಗ್ಗೆ ಯಾವುದೇ ಘೋಷಣೆಯೂ ಮಾಡಿಲ್ಲ.

ಸಂದರ್ಭ
ಕರ್ನಾಟಕ ರಾಜ್ಯ ವಿಧಾನಸಭೆಯ ೨೨೪ ಸ್ಥಾನಗಳಿಗೆ ಮೇ ೧೦ ರಂದು ಚುನಾವಣೆ ನೆಡೆಯಿತು. ಚುನಾವಣೆಗೆ ಮುನ್ನ, ಹಲವು ಪಕ್ಷಗಳು ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಜಾರಿಗೆ ತರಲು ನಿರ್ಧರಿಸುವ ಆಯೋಜನೆಗಳನ್ನು ಪ್ರಸ್ತಾಪಿಸಿ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿವೆ. ಈ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಣಾಳಿಕೆಯು ಸತ್ತವರಿಗೆ ಉಚಿತ ಶವಸಂಸ್ಕಾರದ ಭರವಸೆ ನೀಡುತ್ತದೆ ಎಂದು ಹೇಳುವ ಹಲವಾರು ಪೋಷ್ಟ್ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಪೋಷ್ಟ್ ಗಳು ಕೆಲವು ನಾಯಕರು ಪಾಣಾಳಿಕೆಯನ್ನು ಹಿಡಿದ ಛಾಯಾಚಿತ್ರವನ್ನು ಹೊಂದಿವೆ ಮತ್ತು ಸುದ್ದಿ ಪ್ರಕಟಣೆಯ ಸ್ಕ್ರೀನ್‌ಶಾಟ್ ವೊಂದನ್ನು ಒಳಗೊಂಡಿದೆ. ಅದರ ಶೀರ್ಷಿಕೆ, "ಸತ್ತರೆ ಉಚಿತವಾಗಿ ಶವ ಸಂಸ್ಕಾರ: ಬಿಜೆಪಿ ಪ್ರಣಾಳಿಕೆ ಕಂಡು ಗಾಬರಿ ಬಿದ್ದ ಜನರು" ಎಂದು ಬರೆಯಲಾಗಿದೆ. ಈ ಚಿತ್ರವನ್ನು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಫೇಸ್‌ಬುಕ್ ಪೇಜ್ ನಲ್ಲಿಯೂ ಸಹ ಹಂಚಿಕೊಂಡಿದ್ದಾರೆ.


ವಾಸ್ತವವಾಗಿ
ಸ್ಕ್ರೀನ್‌ಶಾಟ್ ಹಂಚಿಕೊಂಡಿರುವ ಪೋಷ್ಟ್ ಗಳಲ್ಲಿ ಬೆಂಗಳೂರು ಮೂಲದ ಮಾಧ್ಯಮ ಸಂಸ್ಥೆಯಾದ ನ್ಯೂಸ್ ಫಸ್ಟ್‌ನ ಲೋಗೋ ಮತ್ತು ಅದರ ವೆಬ್‌ಸೈಟ್ ವಿಳಾಸವನ್ನು ನಾವು ನೋಡಬಹುದು. ಅದರಲ್ಲಿ ಕಂಡ ಶೀರ್ಷಿಕೆಯನ್ನು ಕೀವರ್ಡ್ ಆಗಿ ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ ವೈರಲ್ ಪೋಷ್ಟ್ ನಲ್ಲಿ ಕಂಡ ಶೀರ್ಷಿಕೆಯನ್ನು newsfristlive.com ಪ್ರಕಟಿಸಿದ ಆಗಸ್ಟ್ ೨೯, ೨೦೨೧ರ ವರದಿಯಲ್ಲಿ ನಾವು ಕಾಣಬಹುದು. ವರದಿಯು ಸೆಪ್ಟೆಂಬರ್ ೩ ರಂದು ನಡೆದ ಬೆಳಗಾವಿಯ ಮಹಾನಗರ ಪಾಲಿಕೆ ಚುನಾವಣೆಗೆಂದು ಬಿಡುಗಡೆಯಾದ ಬಿಜೆಪಿಯ ಪ್ರಣಾಳಿಕೆಯ ಬಗ್ಗೆ ಚರ್ಚಿಸಿದೆ. ವೈರಲ್ ಪೋಷ್ಟ್ ಗಳಲ್ಲಿ ಕಂಡಂತೆ ರಾಜಕಾರಣಿಗಳು ಪಕ್ಷದ ಪ್ರಣಾಳಿಕೆ ಹಿಡಿದು ನಿಂತಿರುವ ಚಿತ್ರವನ್ನು ನ್ಯೂಸ್ ಫಸ್ಟ್ ವರದಿಯಲ್ಲಿಯೂ ಗುರುತಿಸಬಹುದು. ಕರ್ನಾಟಕ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ಮಧ್ಯದಲ್ಲಿ ಪ್ರಣಾಳಿಕೆಯನ್ನು ಹಿಡಿದಿರುವುದನ್ನು ಚಿತ್ರ ತೋರಿಸುತ್ತದೆ - ಈ ಪುರಾವೆಯು ನ್ಯೂಸ್ ಫಸ್ಟ್ ನ ಲೇಖನವು ಹಳೆಯದು ಎಂದು ಸಾಬೀತುಪಡಿಸುತ್ತದೆ, ಏಕೆಂದರೆ ಸವದಿ ಅವರು ಇತ್ತೀಚೆಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ಕಾರಣದಿಂದ ಬಿಜೆಪಿಯ ಪ್ರತಿಸ್ಪರ್ಧಿಯಾದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.


ಸೆಪ್ಟೆಂಬರ್ ೧, ೨೦೨೧ ರಂದು ಬಿಜೆಪಿ ಕರ್ನಾಟಕದ ಅಧಿಕೃತ ಪೇಜ್ ನಿಂದ ಬೆಳಗಾವಿಯ ಪ್ರಣಾಳಿಕೆಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಪ್ರಣಾಳಿಕೆಯ ಒಂದು ಅಂಶವು ಸ್ಪಷ್ಟವಾಗಿ ಹೇಳಿದೆ, "ಬೆಳಗಾವಿ ಮಹಾನಗರ ಪಾಲಿಕೆ ವತಿಯಿಂದ ಶವ ಸಂಸ್ಕಾರಕ್ಕೆ ಉಚಿತ ವ್ಯವಸ್ಥೆಗೆ ಕ್ರಮ." ಆಗಸ್ಟ್ ೩೦, ೨೦೨೧ ರಂದು ನ್ಯೂಸ್ ೧೮ ಕನ್ನಡ ಪ್ರಕಟಿಸಿದ ಲೇಖನವು ಬೆಳಗಾವಿಯ ಸ್ಥಳೀಯ ಚುನಾವಣೆಗೆ ಉಚಿತ ಶವಸಂಸ್ಕಾರವನ್ನು ಒದಗಿಸುವ ನಿಬಂಧನೆಯನ್ನು ಬಿಜೆಪಿ ಉಲ್ಲೇಖಿಸಿತ್ತು ಎಂದು ದೃಢಪಡಿಸುತ್ತದೆ. ಈ ನಿಬಂಧನೆಯನ್ನು ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ) ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದರು. ಉಚಿತ ಶವಸಂಸ್ಕಾರದ ಭರವಸೆಯನ್ನು ಬಿಜೆಪಿ ೨೦೨೧ರಲ್ಲಿ ಬೆಳಗಾವಿ ಚುನಾವಣೆಗೆ ನೀಡಿತ್ತು ಮತ್ತು ಇದು ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಿದ್ದಲ್ಲ ಎಂದು ಸಾಬೀತುಪಡಿಸುತ್ತದೆ.

ಆದರೆ, ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿಯು ತನ್ನ ಪ್ರಣಾಳಿಕೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ಲಾಜಿಕಲಿ ಫ್ಯಾಕ್ಟ್ಸ್ ಬೆಂಗಳೂರಿನ ಬಿಜೆಪಿ ಕಚೇರಿಗೆ ಸಂಪರ್ಕಿಸಿದಾಗ, ಬಿಜೆಪಿ ಪ್ರಣಾಳಿಕೆ ಇನ್ನೂ ಹೊರಬಂದಿಲ್ಲ ಮತ್ತು ಮುಂದಿನ ಕೆಲವು ದಿನಗಳಲ್ಲಿ ಅದು ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿತು.

ತೀರ್ಪು

ಬೆಳಗಾವಿಯಲ್ಲಿ ೨೦೨೧ ರ ಸ್ಥಳೀಯ ಚುನಾವಣೆಗೆ ಬಿಡುಗಡೆ ಮಾಡಲಾದ ಬಿಜೆಪಿ ಪ್ರಣಾಳಿಕೆಯನ್ನು ೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸಂಬಂಧಿಸುತ್ತಾ ತಪ್ಪಾಗಿ ಉಲ್ಲೇಖಿಸಲಾಗಿದೆ. ಮುಂಬರುವ ಚುನಾವಣೆಗೆ ಪಕ್ಷವು ತನ್ನ ಅಧಿಕೃತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿಲ್ಲ. ಆದ್ದರಿಂದ, ನಾವು ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ