ಮುಖಪುಟ ಬಿಜೆಪಿಯ ಕಂಗನಾ ರನೌತ್ ಜೊತೆ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಗ್ಯಾಂಗ್‌ಸ್ಟರ್ ಅಬು ಸಲೇಂ ಅಲ್ಲ, ಅವರು ಪತ್ರಕರ್ತ ಮಾರ್ಕ್ ಮ್ಯಾನುಯೆಲ್

ಬಿಜೆಪಿಯ ಕಂಗನಾ ರನೌತ್ ಜೊತೆ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಗ್ಯಾಂಗ್‌ಸ್ಟರ್ ಅಬು ಸಲೇಂ ಅಲ್ಲ, ಅವರು ಪತ್ರಕರ್ತ ಮಾರ್ಕ್ ಮ್ಯಾನುಯೆಲ್

ಮೂಲಕ: ಉಮ್ಮೆ ಕುಲ್ಸುಮ್

ಮೇ 30 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಬಿಜೆಪಿಯ ಕಂಗನಾ ರನೌತ್ ಜೊತೆ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಗ್ಯಾಂಗ್‌ಸ್ಟರ್ ಅಬು ಸಲೇಂ ಅಲ್ಲ, ಅವರು ಪತ್ರಕರ್ತ ಮಾರ್ಕ್ ಮ್ಯಾನುಯೆಲ್ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ ಅವರು ಗ್ಯಾಂಗ್‌ಸ್ಟರ್ ಅಬು ಸಲೇಂನೊಂದಿಗೆ ನಿಂತಿರುವುದನ್ನು ಈ ಚಿತ್ರವು ತೋರಿಸುತ್ತದೆ ಎಂದು ಹೇಳುವ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಚಿತ್ರವು ೨೦೧೭ ರದ್ದು, ಮತ್ತು ಅದರಲ್ಲಿ ಕಂಡುಬರುವ ವ್ಯಕ್ತಿ ಮಾಜಿ ಪತ್ರಕರ್ತ ಮಾರ್ಕ್ ಮ್ಯಾನುಯೆಲ್. ೧೯೯೩ ರ ಮುಂಬೈ ಸ್ಫೋಟದ ಅಪರಾಧಿಯೊಂದಿಗೆ ರನೌತ್ ಚಿತ್ರಕ್ಕೆ ಪೋಸ್ ನೀಡಲಿಲ್ಲ.

ಹೇಳಿಕೆ ಏನು?

ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕಿ ಮತ್ತು ನಟಿ ಕಂಗನಾ ರನೌತ್ ಗ್ಯಾಂಗ್‌ಸ್ಟರ್ ಅಬು ಸಲೇಂ ಅವರೊಂದಿಗೆ ಛಾಯಾಚಿತ್ರಕ್ಕೆ ಪೋಸ್ ನೀಡಿದ್ದಾರೆ ಎಂಬ ಹೇಳಿಕೆಯೊಂದಿಗೆ ರನೌತ್ ಅವರು ಒಬ್ಬ ವ್ಯಕ್ತಿಯೊಂದಿಗೆ ನಿಂತಿರುವ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. 

ರನೌತ್ ಮತ್ತು ಪ್ರಸ್ತುತ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ೧೯೯೩ ರ ಮುಂಬೈ ಸ್ಫೋಟದ ಅಪರಾಧಿ ನಡುವಿನ ಸಂಪರ್ಕವನ್ನು ಸೂಚಿಸಲು ಹಲವಾರು ಬಳಕೆದಾರರು ಈ  ಚಿತ್ರವನ್ನು ಹಂಚಿಕೊಂಡಿದ್ದಾರೆ. ವೈರಲ್ ಚಿತ್ರದ ಮೇಲೆ ಹಿಂದಿಯಲ್ಲಿ ಬರೆದಿರುವ ಪಠ್ಯವನ್ನು ಹೊಂದಿದ್ದು, "ದೇಶದ ಶತ್ರು ಅಬು ಸಲೇಂನೊಂದಿಗೆ ಭಕ್ತರ ಸಿಂಹಿಣಿಯ (ರನೌತ್ ಅನ್ನು ಉಲ್ಲೇಖಿಸಿ) ಕೆಲವು ಸ್ಮರಣೀಯ ಕ್ಷಣಗಳು (ಅನುವಾದಿಸಲಾಗಿದೆ)" ಎಂದು ಹೇಳುತ್ತದೆ. ಭಾರತದ ಲೋಕಸಭೆ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದಲ್ಲಿ ಜೂನ್ ೧ ರಂದು ಮತದಾನ ನಡೆಯಲಿರುವ ಉತ್ತರ ಭಾರತದ ರಾಜ್ಯವಾದ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ರನೌತ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. 

ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ ಹೀಗಿದೆ, "ಅಂಧ ಭಕ್ತರ ಸಹೋದರಿ, 'ಅಬು ಸಲೇಂ' ಜೊತೆ ಕೆಲವು ಸ್ಮರಣೀಯ ಕ್ಷಣಗಳನ್ನು ಕಳೆಯುತ್ತಿದ್ದಾರೆ... (ಹಿಂದಿಯಿಂದ ಅನುವಾದಿಸಲಾಗಿದೆ)." ಈ ಫ್ಯಾಕ್ಟ್ಬ-ಚೆಕ್ ಅನ್ನು ಬರೆಯುವ ಸಮಯದಲ್ಲಿ ಪೋಷ್ಟ್ ೫೭,೦೦೦ ವೀಕ್ಷಣೆಗಳನ್ನು ಹೊಂದಿದೆ.  ಇದೇ ರೀತಿಯ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಆನ್‌ಲೈನ್‌ನಲ್ಲಿ  ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಚಿತ್ರದಲ್ಲಿರುವ ವ್ಯಕ್ತಿ ಮಾಜಿ ಪತ್ರಕರ್ತ, ಅಪರಾಧಿ ಗ್ಯಾಂಗ್‌ಸ್ಟರ್ ಅಬು ಸಲೇಂ ಅಲ್ಲ.

ವಾಸ್ತವಾಂಶಗಳೇನು?

ಇನ್‌ಸ್ಟಾಗ್ರಾಮ್‌ನಲ್ಲಿ ಕಂಗನಾ ರನೌತ್ ಅವರ ಇತ್ತೀಚಿನ ಸ್ಪಷ್ಟೀಕರಣದ ಕುರಿತು ಹಲವಾರು ಸುದ್ದಿವಾಹಿನಿಗಳು ವರದಿ ಮಾಡಿವೆ,  ಮಾಜಿ ಪತ್ರಕರ್ತ ಮಾರ್ಕ್ ಮ್ಯಾನುಯೆಲ್ ಅವರೊಂದಿಗಿನ ಅವರ ಫೋಟೋವನ್ನು ಗ್ಯಾಂಗ್‌ಸ್ಟರ್ ಅಬು ಸಲೇಂ ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸುಳಿವನ್ನು ತೆಗೆದುಕೊಂಡು, ನಾವು 'ಮಾರ್ಕ್ ಮ್ಯಾನುಯೆಲ್' ಅವರ ಚಿತ್ರಕ್ಕಾಗಿ ಗೂಗಲ್ ಹುಡುಕಾಟವನ್ನು ನಡೆಸಿದೆವು ಮತ್ತು ಅವರ ಇನ್‌ಸ್ಟಾಗ್ರಾಮ್ ಹಾಗು  ಫೇಸ್‌ಬುಕ್‌ ಖಾತೆಗಳನ್ನು ಪರಿಶೀಲಿಸಿದೆವು. ಮ್ಯಾನುಯೆಲ್ ಅವರು ಟೈಮ್ಸ್ ಆಫ್ ಇಂಡಿಯಾದಲ್ಲಿ ಮಾಜಿ ಸಂಪಾದಕರಾಗಿದ್ದಾರೆ ಎಂದು ನಾವು ಕಂಡುಕೊಂಡೆವು. ಅವರು ಮಿಡ್-ಡೇಗಾಗಿ ಪತ್ರಕರ್ತರಾಗಿಯೂ ಕೆಲಸ ನಿರ್ವಹಿಸಿದ್ದಾರೆ ಮತ್ತು ಹಿಂದೂಸ್ತಾನ್ ಟೈಮ್ಸ್ ಹಾಗು ಹಫ್ ಪೋಷ್ಟ್ ನಲ್ಲಿ ಅಂಕಣಕಾರರಾಗಿ ಸೇವೆ ಸಲ್ಲಿಸಿದ್ದಾರೆ.

ಮ್ಯಾನುಯೆಲ್ ಅವರು ಸೆಪ್ಟೆಂಬರ್ ೧೫, ೨೦೧೭ ರಂದು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) "ಕಂಗನಾ ರನೌತ್... ಪ್ರೀತಿ, ಲೈಂಗಿಕತೆ ಮತ್ತು ದ್ರೋಹ. ನನ್ನ ಫೇಸ್‌ಬುಕ್ ಪುಟದಲ್ಲಿ ಓದಿ" ಎಂಬ ಶೀರ್ಷಿಕೆಯೊಂದಿಗೆ ಈಗ ವೈರಲ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅವರು ಅದೇ ದಿನ ಅದೇ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು (ಇಲ್ಲಿ ಆರ್ಕೈವ್ ಮಾಡಲಾಗಿದೆ). ಶೀರ್ಷಿಕೆಯಲ್ಲಿ, ಮ್ಯಾನುಯೆಲ್ ಈ ಚಿತ್ರವನ್ನು "ಕೆಲವು ತಿಂಗಳ ಹಿಂದೆ ಖಾರ್‌ನಲ್ಲಿರುವ ಕಾರ್ನರ್ ಹೌಸ್" ನಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಬರೆದಿದ್ದಾರೆ. "ಇಂದು ಬಿಡುಗಡೆಯಾಗುವ ಕಂಗನಾ ಅವರ ಚಿತ್ರ 'ಸಿಮ್ರಾನ್' ಅನ್ನು ಆಚರಿಸಲು ಇದು ಶಾಂಪೇನ್ ಬ್ರಂಚ್‌ ಆಗಿದೆ" ಎಂದು ಅವರು ಬರೆದಿದ್ದಾರೆ.

ಅವರ ಫೇಸ್‌ಬುಕ್ ಖಾತೆಯ ಕುರಿತು ಹೆಚ್ಚಿನ ತನಿಖೆಯು ಅವರು ಅಕ್ಟೋಬರ್ ೨೦೨೩ ರಲ್ಲಿ ಕೆಲವು ಸುದ್ದಿ ಮುಖ್ಯಾಂಶಗಳ ಹಲವಾರು ಸ್ಕ್ರೀನ್‌ಶಾಟ್‌ಗಳ ಜೊತೆಗೆ ಅದೇ ಚಿತ್ರವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಹೊಂದಿರುವ ಪೋಷ್ಟ್ ಅನ್ನು ಹಂಚಿಕೊಂಡಿದ್ದರು ಎಂದು ತಿಳಿದುಬಂದಿದೆ. ಪ್ರಶ್ನೆಯಲ್ಲಿರುವ ಫೋಟೋ ೨೦೨೩ ರಲ್ಲಿ ಅದೇ ಹೇಳಿಕೆಯೊಂದಿಗೆ ವೈರಲ್ ಆಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

ಚಿತ್ರದ ಅಡಿಯಲ್ಲಿ ಸ್ಪಷ್ಟೀಕರಣದಲ್ಲಿ, ಮ್ಯಾನುಯೆಲ್ ಅವರು ೨೦೧೭ ರ ಹಫಿಂಗ್ಟನ್ ಪೋಷ್ಟ್ ಲೇಖನದಿಂದ ಕಂಗನಾ ರನೌತ್ ಅವರೊಂದಿಗಿನ ಫೋಟೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅವರು ಗ್ಯಾಂಗ್‌ಸ್ಟರ್ ಅಬು ಸಲೇಂ ಅವರೊಂದಿಗೆ ಕುಳಿತಿದ್ದಾರೆ ಎಂದು ಹೇಳಿಕೊಂಡಿದ್ದಾರೆ ಅನೇಕ ಕಾಂಗ್ರೆಸ್ ಸದಸ್ಯರು ಹಂಚಿಕೊಂಡಿದ್ದಾರೆ. ರನೌತ್ ಮತ್ತು ಆಕೆಯ ಬೆಂಬಲಿಗರು ೨೦೦೨ ರಿಂದ ಸೇಲಂ ಜೈಲಿನಲ್ಲಿದ್ದಾರೆ ಎಂದು ಸೂಚಿಸಿ, ಸಮರ್ಥನೆಯನ್ನು ತ್ವರಿತವಾಗಿ ನಿರಾಕರಿಸಿದರು ಎಂದು ಅವರು ಹೇಳಿದರು.

ಅಕ್ಟೋಬರ್ ೧, ೨೦೨೩ ರಂದು, ರನೌತ್ ಎಕ್ಸ್ ನಲ್ಲಿ (ಇಲ್ಲಿ ಆರ್ಕೈವ್ ಮಾಡಲಾಗಿದೆ) ತಮ್ಮ  ಪಕ್ಕದಲ್ಲಿರುವ ವ್ಯಕ್ತಿ ಗ್ಯಾಂಗ್‌ಸ್ಟರ್ ಅಬು ಸಲೇಮ್ ಅಲ್ಲ, ಪತ್ರಕರ್ತ ಮಾರ್ಕ್ ಮ್ಯಾನುಯೆಲ್ ಎಂದು ಸ್ಪಷ್ಟಪಡಿಸಿದ್ದರು. "ಮುಂಬೈ ಬಾರ್‌ನಲ್ಲಿ ನನ್ನೊಂದಿಗೆ ಆಕಸ್ಮಿಕವಾಗಿ ಸುತ್ತಾಡುತ್ತಿರುವ ಭಯಾನಕ ಗ್ಯಾಂಗ್‌ಸ್ಟರ್ ಅಬು ಸಲೇಂ ಎಂದು ಕಾಂಗ್ರೆಸ್ ಜನರು ನಿಜವಾಗಿಯೂ ಭಾವಿಸುತ್ತಾರೆ ಎಂದು ನಾನು ನಂಬುವುದಿಲ್ಲ. ಅವರು ಮಾಜಿ ಟಿಓಐ ಮನರಂಜನಾ ಸಂಪಾದಕ, ಅವನ ಹೆಸರು ಮಾರ್ಕ್ ಮ್ಯಾನುಯೆಲ್ (sic)," ಎಂದು ಅವರು ಬರೆದಿದ್ದಾರೆ.

ಕೆಳಗಿನ ಕೊಲಾಜ್ ಮಾರ್ಕ್ ಮ್ಯಾನುಯೆಲ್ ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ಅಬು ಸಲೇಂನ  ಫೋಟೋಗಳನ್ನು ಒಳಗೊಂಡಿದೆ ಮತ್ತು ವೈರಲ್ ಫೋಟೋದಲ್ಲಿ ರನೌತ್ ಅವರೊಂದಿಗೆ ಫೋಟೊ ತೆಗೆದಿದ್ದನ್ನು ತೋರಿಸುತ್ತದೆ.

ಅಬು ಸಲೇಂ (ಎಡ), ಮಾರ್ಕ್ ಮ್ಯಾನುಯೆಲ್ (ಮಧ್ಯ) ಮತ್ತು ವೈರಲ್ ಚಿತ್ರ.
(ಮೂಲ: ದಿ ಇಂಡಿಯನ್ ಎಕ್ಸ್‌ಪ್ರೆಸ್/ಇನ್‌ಸ್ಟಾಗ್ರಾಮ್/ @markmanuel2609/ ಎಕ್ಸ್)

ತೀರ್ಪು

೨೦೧೭ ರ ನಟಿ-ರಾಜಕಾರಣಿ ಕಂಗನಾ ರನೌತ್ ಅವರು ಮನರಂಜನಾ ಪತ್ರಕರ್ತ ಮಾರ್ಕ್ ಮ್ಯಾನುಯೆಲ್ ಅವರೊಂದಿಗೆ ಪೋಸ್ ನೀಡುತ್ತಿರುವ ಫೋಟೋವನ್ನು ರಾನೌತ್ ಕುಖ್ಯಾತ ಗ್ಯಾಂಗ್‌ಸ್ಟರ್ ಅಬು ಸಲೇಂನೊಂದಿಗೆ "ಪಾರ್ಟಿ" ಮಾಡುವುದರ ಪುರಾವೆಯಾಗಿದೆ ಎಂದು ತಪ್ಪಾಗಿ ಹೇಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ