ಮೂಲಕ: ವಿವೇಕ್ ಜೆ
ಆಗಸ್ಟ್ 4 2023
ಬ್ಯಾನರ್‌ನಲ್ಲಿ ಪಕ್ಷದ ಹೆಸರನ್ನು ಮಾತ್ರ ನಮೂದಿಸಲಾಗಿದೆ ಮತ್ತು ಅದಕ್ಕೆ 'ಚೋರ್ ಗ್ರೂಪ್ ಮೀಟಿಂಗ್' ಎಂಬ ಪಠ್ಯವನ್ನು ಡಿಜಿಟಲ್ ಆಗಿ ಸೇರಿಸಲಾಗಿದೆ.
ಸಂದರ್ಭ
ಹಿನ್ನೆಲೆಯಲ್ಲಿ ತಪ್ಪಾಗಿ ಬರೆಯಲಾದ ಬ್ಯಾನರ್‌ನೊಂದಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕೋರ್ ಕಮಿಟಿ ಸಭೆಯನ್ನು ತೋರಿಸುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಚಿತ್ರದಲ್ಲಿನ ಬ್ಯಾನರ್ ಪಕ್ಷದ ಹೆಸರಿನ ಕೆಳಗೆ "ಚೋರ್ ಗ್ರೂಪ್ ಮೀಟಿಂಗ್" ಎಂಬ ಪದಗಳನ್ನು ತೋರಿಸುತ್ತದೆ. ಚಿತ್ರದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಎಕೆ ಆಂಟನಿ, ಕೆಸಿ ವೇಣುಗೋಪಾಲ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬ್ಯಾನರ್ ಮುಂದೆ ಕುಳಿತಿದ್ದಾರೆ. ಒಬ್ಬ ಟ್ವಿಟ್ಟರ್ ಬಳಕೆದಾರರು "ಚೋರ್ ಗುಂಪಿನ ಸಭೆ" ಎಂಬ ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. “ಚಿತ್ರದ ಮೇಲೆ "ಕೋರ್ ಗ್ರೂಪ್ ಮೀಟಿಂಗ್” ಅನ್ನು ಬರೆಯುವ ಬದಲು, ಈ ಜನರು ಚೋರ್ ಗ್ರೂಪ್ ಮೀಟಿಂಗ್ ಎಂದು ಬರೆದಿದ್ದಾರೆ (ಹಿಂದಿಯಿಂದ ಅನುವಾದಿಸಲಾಗಿದೆ)" ಎಂಬ ಪಠ್ಯವನ್ನು ಸಹ ಬರೆಯಲಾಗಿದೆ. 'ಚೋರ್ (चोर)' ಪದವು ಹಿಂದಿಯಲ್ಲಿ ಕಳ್ಳ ಎಂಬ ಅರ್ಥ ಬರುತ್ತದೆ.
ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಚಿತ್ರವನ್ನು 'ತಪ್ಪಾದ' ಬ್ಯಾನರ್ ಹೊಂದಿದೆ ಎಂದು ಹೇಳಿಕೊಂಡು ಹಂಚಿಕೊಂಡಿದ್ದಾರೆ. ಆದರೆ, ಆಪಾದಿತ ಕಾಗುಣಿತ ದೋಷವನ್ನು ಸೇರಿಸಲು ಫೋಟೋವನ್ನು ಡಿಜಿಟಲ್ ಆಗಿ ಎಡಿಟ್ ಮಾಡಲಾಗಿದೆ.
ವಾಸ್ತವವಾಗಿ
ನಾವು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಈ ಚಿತ್ರವು ಕನಿಷ್ಠ ೨೦೨೧ ರಿಂದ ಅದೇ ಹೇಳಿಕೆಗಳೊಂದಿಗೆ ಪ್ರಸಾರವಾಗುತ್ತಿದೆ ಎಂದು ಕಂಡುಕೊಂಡಿದ್ದೇವೆ. ಈ ಚಿತ್ರದಲ್ಲಿನ ಹೇಳಿಕೆಗಳು ಬಹು ಆವೃತ್ತಿಗಳು ವಿವಿಧ ಭಾರತೀಯ ಭಾಷೆಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿದೆ. ಚಿತ್ರದೊಂದಿಗೆ ಕೆಲವು ಪೋಷ್ಟ್ ಗಳು ಇದು ಕೇವಲ ಮನರಂಜನೆ ಮತ್ತು ಮೋಜಿಗಾಗಿ ಮಾತ್ರ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದರೆ, ಇತರರು ನಿಜವಾದ ಕಾಗುಣಿತ ದೋಷವು ಕಾಂಗ್ರೆಸ್ ಬ್ಯಾನರ್‌ನಲ್ಲಿ ಮಾಡಿದೆ ಎಂದು ಹೇಳುವ ನಿರೂಪಣೆಗಳನ್ನು ಒಳಗೊಂಡಿದ್ದವು.
೨೦೧೯ ರಿಂದ ಐವರು ಹಿರಿಯ ಕಾಂಗ್ರೆಸ್ ನಾಯಕರ ಅದೇ ವೈರಲ್ ಚಿತ್ರವನ್ನು ಹೊಂದಿರುವ ಅನೇಕ ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಮೇ ೨೫, ೨೦೧೯ ರಂದು "ಸಿ ಡಬ್ಲ್ಯೂ ಸಿ ಸಭೆಯಲ್ಲಿ ಏನಾಯಿತು: ದಿ ಇನ್‌ಸೈಡ್ ಸ್ಟೋರಿ" ಶೀರ್ಷಿಕೆಯ ವಿಯಾನ್ ಸುದ್ದಿ ವರದಿಯು ಚಿತ್ರವನ್ನು ಪ್ರಕಟಿಸಿದೆ. ವರದಿಯಲ್ಲಿ ಹಂಚಿಕೊಂಡಿರುವ ಚಿತ್ರದ ಬ್ಯಾನರ್‌ನಲ್ಲಿ "ಚೋರ್ ಗ್ರೂಪ್ ಮೀಟಿಂಗ್" ಅಥವಾ "ಕೋರ್ ಗ್ರೂಪ್ ಮೀಟಿಂಗ್" ಎಂದಾಗಲಿ ಬರೆದಿರುವುದಾಗಿ ಕಾಣಿಸಲಿಲ್ಲ. ಮೂಲ ಚಿತ್ರವು "ಭಾರತೀಯ ರಾಷ್ಟ್ರೀಯ ಕಾಂಗ್ರೆಸ್" ಪದಗಳ ಕೆಳಗೆ ಯಾವುದೇ ಪಠ್ಯವನ್ನು ಹೊಂದಿಲ್ಲ.
ಅದೇ ಚಿತ್ರವನ್ನು ಹೊಂದಿರುವ ಇತರ ಸುದ್ದಿ ವರದಿಗಳು ಬ್ಯಾನರ್‌ನಲ್ಲಿ "ಚೋರ್ ಗ್ರೂಪ್ ಮೀಟಿಂಗ್" ಎಂಬ ಪಠ್ಯವನ್ನು ಹೊಂದಿಲ್ಲ.
ಮೇ ೨೫, ೨೦೧೯ ರಂದು ನಡೆದ ಸಿ ಡಬ್ಲ್ಯೂ ಸಿ (ಕಾಂಗ್ರೆಸ್ ಕಾರ್ಯಕಾರಿ ಸಮಿತಿ) ಸಭೆಯ ವೀಡಿಯೋಗಳನ್ನು ಸಹ ನಾವು ನೋಡಿದ್ದೇವೆ. ಅದೇ ದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ ಏನ್ ಸಿ) ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ಸಭೆಯ ವೀಡಿಯೋದಲ್ಲಿ ಕೂಡ "ಚೋರ್ ಗ್ರೂಪ್ ಮೀಟಿಂಗ್ " ಎಂಬ ಪಠ್ಯವನ್ನು ತೋರಿಸುವುದಿಲ್ಲ.
೨೦೧೯ ರಿಂದ ಸಾಮಾಜಿಕ ಮಾಧ್ಯಮ, ಸುದ್ದಿ ವರದಿಗಳು ಮತ್ತು ವೀಡಿಯೋಗಳಲ್ಲಿ ಹಂಚಿಕೊಳ್ಳಲಾದ ಚಿತ್ರದ ನಿಕಟ ದೃಶ್ಯ ವಿಶ್ಲೇಷಣೆಯು ಅವೆಲ್ಲವೂ ಒಂದೇ ಘಟನೆಯಾಗಿದೆ ಎಂದು ಖಚಿತಪಡಿಸುತ್ತದೆ, ಆದರೆ "ಚೋರ್ ಗ್ರೂಪ್ ಮೀಟಿಂಗ್" ಪಠ್ಯವು ಸಾಮಾಜಿಕ ಮಾಧ್ಯಮದ ಚಿತ್ರದಲ್ಲಿ ಮಾತ್ರ ಗೋಚರಿಸುತ್ತದೆ. ಹೀಗಾಗಿ ಪ್ರಶ್ನೆಯಲ್ಲಿರುವ ಪಠ್ಯವನ್ನು ಮೂಲ ಚಿತ್ರಕ್ಕೆ ಡಿಜಿಟಲ್ ಆಗಿ ಸೇರಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ.
ಮೇ ೨೫, ೨೦೧೯ ರಂದು ಅಂದಿನ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜೀನಾಮೆ ಕುರಿತು ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಿತು. ನಂತರ ಸಮಿತಿಯು ಅವರ ರಾಜೀನಾಮೆಯನ್ನು ಸರ್ವಾನುಮತದಿಂದ ತಿರಸ್ಕರಿಸಿತು.
ತೀರ್ಪು
ಕಾಂಗ್ರೆಸ್ ಪಕ್ಷದ ಬ್ಯಾನರ್‌ನಲ್ಲಿ "ಚೋರ್ ಗ್ರೂಪ್ ಮೀಟಿಂಗ್" ಎಂಬ ಪಠ್ಯದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಚಿತ್ರವನ್ನು ಡಿಜಿಟಲ್ ಮ್ಯಾನಿಪುಲೇಟ್ ಮಾಡಲಾಗಿದೆ. ಮೂಲ ಚಿತ್ರವು ೨೦೧೯ ರಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿ ಡಬ್ಲ್ಯೂ ಸಿ) ಸಭೆಯಿಂದ ಬಂದಿದೆ ಮತ್ತು ಬ್ಯಾನರ್ ಪ್ರಶ್ನೆಯಲ್ಲಿರುವ ಪಠ್ಯವನ್ನು ಹೊಂದಿಲ್ಲ. ಆದ್ದರಿಂದ, ನಾವು ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.