ಮುಖಪುಟ ಅಪೊಲೊ ೧೧ ಮಾಡೆಲ್ ನ ಅನಿಮೇಟೆಡ್ ವೀಡಿಯೋವನ್ನು ಚಂದ್ರಯಾನ-೩ ನ ಲ್ಯಾಂಡಿಂಗ್ ಅನ್ನು ತೋರಿಸುತ್ತದೆ ಎಂದು ಹಂಚಿಕೊಳ್ಳಲಾಗಿದೆ

ಅಪೊಲೊ ೧೧ ಮಾಡೆಲ್ ನ ಅನಿಮೇಟೆಡ್ ವೀಡಿಯೋವನ್ನು ಚಂದ್ರಯಾನ-೩ ನ ಲ್ಯಾಂಡಿಂಗ್ ಅನ್ನು ತೋರಿಸುತ್ತದೆ ಎಂದು ಹಂಚಿಕೊಳ್ಳಲಾಗಿದೆ

ಮೂಲಕ: ರಜಿನಿ ಕೆ.ಜಿ

ಆಗಸ್ಟ್ 28 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಅಪೊಲೊ ೧೧ ಮಾಡೆಲ್ ನ ಅನಿಮೇಟೆಡ್ ವೀಡಿಯೋವನ್ನು ಚಂದ್ರಯಾನ-೩ ನ  ಲ್ಯಾಂಡಿಂಗ್ ಅನ್ನು ತೋರಿಸುತ್ತದೆ ಎಂದು ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೈರಲ್ ವೀಡಿಯೋ ಅಪೊಲೊ ೧೧ ಮೂನ್ ಲ್ಯಾಂಡಿಂಗ್ ಮಿಷನ್‌ನ ಹಳೆಯ ಅನಿಮೇಷನ್ ಸಿಮ್ಯುಲೇಶನ್ ಅನ್ನು ತೋರಿಸುತ್ತದೆ.

ಸಂದರ್ಭ

ಭಾರತದ ಮೂರನೇ ಚಂದ್ರಯಾನ-೩ ಆಗಸ್ಟ್ ೨೩ರ ಸಂಜೆ ಚಂದ್ರನ ಮೇಲೆ ಇಳಿದ ನಂತರ, ಹಲವಾರು ಹಳೆಯ ಮತ್ತು ಸಂಬಂಧವಿಲ್ಲದ ವೀಡಿಯೋಗಳು ಬಾಹ್ಯಾಕಾಶ ನೌಕೆಯ ಪ್ರಯಾಣ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಐತಿಹಾಸಿಕ ಸಾಧನೆಗೆ ಸಂಬಂಧಿಸಲಾಗುತ್ತಿದೆ. ಹಿಂದಿ ಸುದ್ದಿ ವಾಹಿನಿ ಜೀ ನ್ಯೂಸ್‌ನಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತೆ ಶೋಭನಾ ಯಾದವ್ ಅವರು ಗುರುವಾರ ಎಕ್ಸ್‌ (X) ಪ್ಲಾಟ್ಫಾರ್ಮ್ ನಲ್ಲಿ "#Chandrayan3Landing #NASA ಚಂದ್ರಯಾನದ ಲ್ಯಾಂಡಿಂಗ್ ಅನ್ನು ನಾಸಾ ಬಿಡುಗಡೆ ಮಾಡಿದೆ (ಮೂಲತಃ ಹಿಂದಿಯಲ್ಲಿ)" ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಪೋಷ್ಟ್ ಮಾಡಿದ್ದರು. ಕೆಳಗೆ ಇಳಿಯುವ ಮುನ್ನ ಬಾಹ್ಯಾಕಾಶ ಮಾಡ್ಯೂಲ್ ಚಂದ್ರನ ಮೇಲೆ ಸಂಚರಿಸುತ್ತಿರುವುದನ್ನು ಚಿತ್ರಿಸುವ ವೀಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ ಮತ್ತು ಇದು ಚಂದ್ರಯಾನ -೩ ಚಂದ್ರನ ಮೇಲ್ಮೈಯಲ್ಲಿ ಇಳಿಯುವುದನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ವಾಟ್ಸ್ ಆಪ್ ನಲ್ಲಿಯೂ ಕೂಡ ಹಂಚಿಕೊಳ್ಳಲಾಗಿದೆ.

ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್‌/@ShobhnaYadava,ಫೇಸ್ಬುಕ್/बीरेंद्र गुप्ता फौजी) 

ಆದರೆ ಇದು ಅಪೊಲೊ ೧೧ ಚಂದ್ರನ ಕಾರ್ಯಾಚರಣೆಯ ಮಾದರಿಯನ್ನು ತೋರಿಸುವ ಅನಿಮೇಟೆಡ್ ವೀಡಿಯೋ ಆಗಿದೆ. 

ವಾಸ್ತವವಾಗಿ

ರಿವರ್ಸ್ ಇಮೇಜ್ ಸರ್ಚ್ ಮೂಲಕ, ಈ ವೈರಲ್ ವೀಡಿಯೋವನ್ನು ಜುಲೈ ೨೦ ರಂದು 'ಹಜೆಗ್ರ್ಯಾರ್ಟ್' ಅಕೌಂಟ್ ನಿಂದ ಯೂಟ್ಯೂಬ್ ಶೊರ್ಟ್ಸ್ ನಲ್ಲಿ ಪೋಷ್ಟ್ ಮಾಡಿದ್ದನ್ನು  ಕಂಡುಕೊಂಡೆವು. ಕ್ಲಿಪ್ ನ ಶೀರ್ಷಿಕೆ ,"ಅಪೊಲೊ ೧೧ ಮೂನ್ ಲ್ಯಾಂಡಿಂಗ್" ಎಂದು ಹೇಳುತ್ತದೆ. ಅಪೊಲೊ ೧೧, ಚಂದ್ರನ ಮೇಲೆ ಮಾನವರನ್ನು ಕಳುಹಿಸಿದ ಮೊದಲ ಅಮೇರಿಕನ್ ಬಾಹ್ಯಾಕಾಶ ಯಾನವಾಗಿದ್ದು, ಅದು ಜುಲೈ ೧೬, ೧೯೬೯ ರಂದು ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಉಡಾವಣೆ ಮಾಡಿತ್ತು. ಈ ಕಾರ್ಯಾಚರಣೆಯು ಮೂರು ಗಗನಯಾತ್ರಿಗಳನ್ನು ಒಳಗೊಂಡಿತ್ತು - ನೀಲ್ ಆರ್ಮ್ಸ್ಟ್ರಾಂಗ್, ಎಡ್ವಿನ್ ಬಜ್ ಆಲ್ಡ್ರಿನ್ ಮತ್ತು ಮೈಕೆಲ್ ಕಾಲಿನ್ಸ್. ಫ್ಲೋರಿಡಾದ ಕೇಪ್ ಕೆನಡಿಯಿಂದ ಉಡಾವಣೆಗೊಂಡ ಬಾಹ್ಯಾಕಾಶ ನೌಕೆಯು ಜುಲೈ ೨೪, ೧೯೬೯ ರಂದು ಭೂಮಿಗೆ ಮರಳಿತು. ಯೂಟ್ಯೂಬ್ ಕ್ಲಿಪ್ ನಲ್ಲಿನ ವಿವರಣೆಯೂ ಸಹ ಇದೇ  ವಿವರಗಳನ್ನು ಉಲ್ಲೇಖಿಸಿದೆ.

ವೈರಲ್ ಕ್ಲಿಪ್ ಮತ್ತು ಯೂಟ್ಯೂಬ್ ಶಾರ್ಟ್ ನ  ಹೋಲಿಕೆ (ಮೂಲ:ಎಕ್ಸ್‌/@ShobhnaYadava, ಯೂಟ್ಯೂಬ್/@ಹೆಜ್ಗ್ರೇಆರ್ಟ್)

ನಾವು ಅದೇ ಯೂಟ್ಯೂಬ್  ಚಾನಲ್‌ನಲ್ಲಿ ವೀಡಿಯೋದ ವಿಸ್ತೃತ ಆವೃತ್ತಿಯನ್ನು ಸಹ ಕಂಡುಕೊಂಡಿದ್ದೇವೆ. ಜೂನ್ ೮, ೨೦೨೧ ರಂದು ಪೋಷ್ಟ್ ಮಾಡಲಾದ, ೪ ನಿಮಿಷಗಳ ಅವಧಿಯ ವೀಡಿಯೋವನ್ನು "ಅಪೊಲೊ ೧೧ ಮೂನ್ ಲ್ಯಾಂಡಿಂಗ್: ಬಾಹ್ಯಾಕಾಶ ಪರಿಶೋಧನೆಯಲ್ಲಿ ಐತಿಹಾಸಿಕ ಕ್ಷಣ" ಎಂದು ಶೀರ್ಷಿಕೆ ಹೇಳುತ್ತದೆ. ವೈರಲ್ ವೀಡಿಯೋ ಈ ದೀರ್ಘವಾದ ಯೂಟ್ಯೂಬ್ ವೀಡಿಯೋದಿಂದ ತೆಗೆದ ಚಿಕ್ಕ ಕ್ಲಿಪ್ ಆಗಿದೆ. ೦:೪೫ ಟೈಮ್‌ಸ್ಟ್ಯಾಂಪ್‌ನ ಸಮಯದಲ್ಲಿ, ಚಂದ್ರನ ಮೇಲೆ ಸಂಚರಿಸುತ್ತಿರುವ ಸ್ಪೇಸ್ ಮಾಡ್ಯೂಲ್‌ನ ವೈರಲ್ ಕ್ಲಿಪ್ ಅನ್ನು ನಾವು ಗುರುತಿಸಬಹುದು ಮತ್ತು ಆಡಿಯೊ ಕೂಡ ವೈರಲ್ ವೀಡಿಯೋಗೆ  ಹೊಂದಿಕೆಯಾಗುತ್ತದೆ. ಬಾಹ್ಯಾಕಾಶ ಪರಿಶೋಧನೆಗೆ ಮೀಸಲಾಗಿರುವ ಸ್ವತಂತ್ರ ವೆಬ್‌ಸೈಟ್ ನಾಸಾ ಸ್ಪೇಸ್‌ಫ್ಲೈಟ್ ಫೋರಮ್‌ನಲ್ಲಿಯೂ ಕೂಡ ನಾವು ಈ ವೀಡಿಯೋವನ್ನು ನೋಡಬಹುದು. ವೀಡಿಯೋವನ್ನು ಜೂನ್ ೮, ೨೦೨೧ ರಂದು ವೆಬ್‌ಸೈಟ್‌ನಲ್ಲಿ ಪೋಷ್ಟ್ ಮಾಡಲಾಗಿದೆ, ಇದು ಅಪೊಲೊ ೧೧ ಚಂದ್ರನ ಲ್ಯಾಂಡಿಂಗ್‌ನ ನೈಜ-ಸಮಯದ ಸಿಮ್ಯುಲೇಶನ್ ಅನ್ನು ತೋರಿಸುತ್ತದೆ ಎಂದು ಉಲ್ಲೇಖಿಸಿದೆ.

ಯೂಟ್ಯೂಬ್ ಚಾನೆಲ್ 'ಹಜೆಗ್ರ್ಯಾರ್ಟ್' ಮತ್ತು ಅದರ ಸಾಮಾಜಿಕ ಮಾಧ್ಯಮ ಖಾತೆಗಳು ಬಾಹ್ಯಾಕಾಶ ನೌಕೆ/ಬಾಹ್ಯಾಕಾಶ ಯಾನಗಳ ಹಲವಾರು ರೀತಿಯ ಅನಿಮೇಟೆಡ್ ವೀಡಿಯೋಗಳನ್ನು ಹಂಚಿಕೊಂಡಿದೆ. ಆಗಸ್ಟ್ ೧೬ ರಂದು, ಆನ್‌ಲೈನ್ ಮ್ಯಾಗಜೀನ್ 'ಆಟೋ ಎವಲ್ಯೂಷನ್' ಚೀನಾದ ಬಾಹ್ಯಾಕಾಶ ನಿಲ್ದಾಣದಲ್ಲಿ ಹ್ಯಾಜೆಗ್ರ್ಯಾರ್ಟ್‌ನ ಕೆಲಸವನ್ನು ಉಲ್ಲೇಖಿಸಿದೆ ಮತ್ತು 'ಹಜೆಗ್ರ್ಯಾರ್ಟ್' ಅನ್ನು "ಸ್ಪೇಸ್ ಟೆಕ್ ಅನಿಮೇಷನ್ ಸ್ಪೆಷಲಿಸ್ಟ್" ಎಂದು ಮನ್ನಣೆ ನೀಡಲಾಗಿದೆ. ಎಲ್ಲಾ ರೀತಿಯ ಹಡಗುಗಳು ಮತ್ತು ವಾಹನಗಳಿಗೆ ಮೀಸಲಾಗಿರುವ ಆನ್‌ಲೈನ್ ಪತ್ರಿಕೆ 'ಹಜೆಗ್ರ್ಯಾರ್ಟ್'ನ ಅನೇಕ ಇತರ ರಚನೆಗಳನ್ನೂ ಸಹ ಉಲ್ಲೇಖಿಸಿದೆ. ವೈರಲ್ ಕ್ಲಿಪ್ ಅನ್ನು 'ಹಜೆಗ್ರ್ಯಾರ್ಟ್' ರಚಿಸಿದ ಅನಿಮೇಟೆಡ್ ವೀಡಿಯೋ ಎಂದು ಇದು ಸೂಚಿಸುತ್ತದೆ.  ಲಾಜಿಕಲಿ ಫ್ಯಾಕ್ಟ್ಸ್  'ಹೇಗ್ರ್ಯಾರ್ಟ್' ಅನ್ನು ಹೆಚ್ಚಿನ ಮಾಹಿತಿಗಾಗಲಿ ಸಂಪರ್ಕಿಸಿದೆ ಮತ್ತು ಉತ್ತರವನ್ನು ಪಡೆದಲ್ಲಿ ಈ ಕಥೆಯನ್ನು ನವೀಕರಿಸಲಾಗುತ್ತದೆ.

ಹೆಚ್ಚುವರಿಯಾಗಿ, ವೈರಲ್ ವೀಡಿಯೋದ ಹಿನ್ನೆಲೆಯಲ್ಲಿ ಪ್ಲೇ ಆಗುವ ವಾಯ್ಸ್‌ಓವರ್, ವಾಸ್ತವವಾಗಿ, ಫೆಬ್ರವರಿ ೧೭, ೨೦೨೦ ರಂದು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಬಿಬಿಸಿ  ವರ್ಲ್ಡ್ ಸರ್ವೀಸ್ ವೀಡಿಯೋದಿಂದ ಬಂದಿದೆ. ಸುಮಾರು ೧೦:೩೦ ಟೈಮ್‌ಸ್ಟ್ಯಾಂಪ್ ನಲ್ಲಿ, ವೈರಲ್ ಕ್ಲಿಪ್‌ನಲ್ಲಿ ಕೇಳಿಬಂದ ಆಡಿಯೋ ವನ್ನು ನಾವು ನಿಖರವಾಗಿ ಕೇಳಬಹುದು. ಬಿಬಿಸಿ  ವರ್ಲ್ಡ್ ಸರ್ವೀಸ್‌ನ ಯೂಟ್ಯೂಬ್ ವೀಡಿಯೋ, "ಅಪೊಲೊ ೧೧: ಚಂದ್ರನಿಗೆ ಅಂತಿಮ ೧೩ ನಿಮಿಷಗಳು - ಬಿಬಿಸಿ  ವರ್ಲ್ಡ್ ಸರ್ವೀಸ್, ೧೩ ನಿಮಿಷಗಳು ಚಂದ್ರನ ಪಾಡ್‌ಕ್ಯಾಸ್ಟ್‌ "ಎಂದು ಶೀರ್ಷಿಕೆ ನೀಡಲಾಯಿತು. ಆಡಿಯೋ ಅಪೊಲೊ ೧೧ ಮಿಷನ್‌ಗೆ ಸಂಬಂಧಿಸಿದೆ ಎಂದು ಇದು ಖಚಿತಪಡಿಸುತ್ತದೆ.

ಇದಲ್ಲದೆ, ವೈರಲ್ ಕ್ಲಿಪ್‌ನಲ್ಲಿರುವ ಮಾಡ್ಯೂಲ್ ಚಾದ್ರಿಯನ್-೩ ರ ಲ್ಯಾಂಡರ್ ವಿಕ್ರಮ್‌ನ ಚಿತ್ರಣಕ್ಕಿಂತ ವಿಭಿನ್ನವಾಗಿ ಕಾಣುತ್ತದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-೩ ಇಳಿಯುವ ಕ್ಷಣಗಣನೆಯ ಸಮಯದಲ್ಲಿ, ಇಸ್ರೋ ವಿಕ್ರಮ್ ಲ್ಯಾಂಡರ್ ಮಾಡ್ಯೂಲ್‌ನ ಅನಿಮೇಟೆಡ್ ದೃಶ್ಯಗಳನ್ನು ಬಿಡುಗಡೆ ಮಾಡಿದೆ. ಲ್ಯಾಂಡರ್ ಗೋಲ್ಡನ್ ಪ್ಯಾನೆಲ್‌ಗಳನ್ನು ಮತ್ತು ಮೇಲ್ಭಾಗದಲ್ಲಿ ಗೋಲಾಕಾರದ ರಚನೆಯನ್ನು ಹೊಂದಿದೆ, ವೈರಲ್ ವೀಡಿಯೋದಲ್ಲಿನ ಮಾಡ್ಯೂಲ್‌ಗಿಂತ ಭಿನ್ನವಾಗಿ, ಇದು ಬೂದಿ ಮತ್ತು ಕೆಂಪು ಬಣ್ಣದಲ್ಲಿ ಕಾಣುತ್ತದೆ ಮತ್ತು ಸಮಕಟ್ಟಾದ ಮೇಲ್ಭಾಗವನ್ನು ಹೊಂದಿದೆ. ವಿಕ್ರಮ್ ಲ್ಯಾಂಡರ್‌ನ ಚಿತ್ರಗಳನ್ನು ಇಸ್ರೋದ ಚಂದ್ರಯಾನ-೩ ಬ್ರೋಷರ್ ಮತ್ತು ಅಧಿಕೃತ ಸೈಟ್‌ನಲ್ಲಿಯೂ ಸಹ ಕಾಣಬಹುದು. ವೈರಲ್ ವೀಡಿಯೋದಲ್ಲಿ ಕಂಡುಬರುವ ಮಾಡ್ಯೂಲ್‌ನಿಂದ ಇದು ಗಮನಾರ್ಹವಾಗಿ ಭಿನ್ನವಾಗಿದೆ.

ವೈರಲ್ ವೀಡಿಯೋದಿಂದ ಮಾಡ್ಯೂಲ್‌ನ ಹೋಲಿಕೆ ಮತ್ತು ಇಸ್ರೋದಿಂದ ಚಂದ್ರಯಾನ-೩ ರ ವಿಕ್ರಮ್ ಲ್ಯಾಂಡರ್‌ನ ಚಿತ್ರಣ (ಮೂಲ: ಎಕ್ಸ್‌/@ShobhnaYadava,ಇಸ್ರೋ)

ಮೇಲೆ ತಿಳಿಸಲಾದ ಎಲ್ಲಾ ಪುರಾವೆಗಳು ವೈರಲ್ ಕ್ಲಿಪ್ ಅನಿಮೇಷನ್ ವೀಡಿಯೋ ಎಂದು ಸ್ಥಾಪಿಸುತ್ತದೆ. ಕ್ಲಿಪ್ ಅನ್ನು ನಾಸಾ ಬಿಡುಗಡೆ ಮಾಡಿದೆ ಎಂಬ ಹೇಳಿಕೆಯೂ ನಿಜವಲ್ಲ. ಯು.ಎಸ್. ಬಾಹ್ಯಾಕಾಶ ಸಂಸ್ಥೆ ಎಕ್ಸ್‌ ನಲ್ಲಿ ಇಸ್ರೋದ ಸಾಧನೆಯನ್ನು ಅಭಿನಂದಿಸಿ ಸಂದೇಶವನ್ನು ಹಂಚಿಕೊಂಡಿದೆ ಆದರೆ ನಂತರದ ಚಂದ್ರನ ಕಾರ್ಯಾಚರಣೆಯ ಯಾವುದೇ ದೃಶ್ಯವನ್ನು ಬಿಡುಗಡೆ ಮಾಡಿಲ್ಲ.

ತೀರ್ಪು
ಅಪೊಲೊ ೧೧ ಮೂನ್ ಲ್ಯಾಂಡಿಂಗ್ ಮಿಷನ್‌ನ ಸಿಮ್ಯುಲೇಶನ್ ಅನ್ನು ತೋರಿಸುವ ಹಳೆಯ ಅನಿಮೇಷನ್ ವೀಡಿಯೋವನ್ನು ಚಂದ್ರಯಾನ-೩ ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡಿಂಗ್ ಮಾಡುವ ವೀಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಅನುವಾದಿಸಿದವರು: ಅಂಕಿತಾ ಕುಲಕರ್ಣಿ 

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ