ಮುಖಪುಟ ಐಸಿಸ್ ಟೀ-ಶರ್ಟ್ ಧರಿಸಿರುವ ತಮಿಳುನಾಡಿನ ಯುವಕರ ಹಳೆಯ ಚಿತ್ರ ಕೇರಳದ್ದೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಐಸಿಸ್ ಟೀ-ಶರ್ಟ್ ಧರಿಸಿರುವ ತಮಿಳುನಾಡಿನ ಯುವಕರ ಹಳೆಯ ಚಿತ್ರ ಕೇರಳದ್ದೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ವಿವೇಕ್ ಜೆ

ಜುಲೈ 5 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಐಸಿಸ್ ಟೀ-ಶರ್ಟ್ ಧರಿಸಿರುವ ತಮಿಳುನಾಡಿನ ಯುವಕರ ಹಳೆಯ ಚಿತ್ರ ಕೇರಳದ್ದೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು False

ಐಸಿಸ್ ಟೀ-ಶರ್ಟ್‌ನಲ್ಲಿರುವ ಹುಡುಗರ ಫೋಟೋ ೨೦೧೪ ರಲ್ಲಿ ತಮಿಳುನಾಡಿನಲ್ಲಿ ತೆಗೆದದ್ದು.

ಸಂದರ್ಭ

‘ದಿ ಕೇರಳ ಸ್ಟೋರಿ’ ಸಿನಿಮಾದ ವಿವಾದದ ನಡೆಯುವ ಮಧ್ಯೆ ‘ಐಸಿಸ್’ ಎಂದು ಬರೆದಿರುವ ಕಪ್ಪು ಟೀ-ಶರ್ಟ್ ಧರಿಸಿರುವ ತಮಿಳುನಾಡಿನ ಯುವಕರ ಹಳೆ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ಕೇರಳದಲ್ಲಿ ತೆಗೆದ ಚಿತ್ರ ಹಾಗು ರಾಜ್ಯದಲ್ಲಿ ಐಸಿಸ್ ಎಷ್ಟು ವ್ಯಾಪಕವಾಗಿ ಬೆಂಬಲಿತವಾಗಿದೆ ಮತ್ತು ಆಮೂಲಾಗ್ರವಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಳ್ಳುತ್ತಿದ್ದಾರೆ. ಬಲಪಂಥೀಯ ಅಂಕಣಕಾರರಾದ ಶೆಫಾಲಿ ವೈದ್ಯ ಟ್ವೀಟ್ ಮಾಡಿದ ಚಿತ್ರವೊಂದರ ಶೀರ್ಷಿಕೆಯು ಕನ್ನಡಕ್ಕೆ ಅನುವಾದ ಮಾಡಿದಾಗ ಹೀಗೆ ಹೇಳುತ್ತದೆ "ಇದು ಕೇರಳದ ಚಿತ್ರ, ಸ್ಥಳೀಯ ಮುಸ್ಲಿಂ ಯುವಕರು ಐಸಿಸ್ ಟೀ-ಶರ್ಟ್ ಧರಿಸಿ ಐಸಿಸ್ ಕೈ ಸಂಕೇತದೊಂದಿಗೆ ಒಂದೇ ದೇವರು, ಅವರ ದೇವರು ಎಂದು ಪೋಸ್ ನೀಡುತ್ತಿದ್ದಾರೆ! ಆದರೂ, #LoveJihad ಎಂಬುದು ಮಿಥ್ಯೆ ಎಂದು ಹೇಳಲು ಜನರಿಗೆ ನರವಿದೆ. #TheKeralaStory ನಿಜವಾದದ್ದು!"

ಫೋಟೋ ಕೇರಳದದ್ದಲ್ಲ ಎಂದು ವೈದ್ಯ ಅವರು ಅನಂತರ ಸ್ಪಷ್ಟಪಡಿಸಿದ್ದರೂ, ಟ್ವಿಟರ್‌ನಲ್ಲಿ ಅದೇ ನಿರೂಪಣೆಯೊಂದಿಗೆ ಪೋಸ್ಟ್ ಅನ್ನು ಹಲವಾರು ಬಾರಿ ಮರುಹಂಚಿಕೊಳ್ಳಲಾಗಿದೆ.

ವಾಸ್ತವವಾಗಿ

ರಿವರ್ಸ್ ಇಮೇಜ್ ಸರ್ಚ್ ಮೂಲಕ, ಲಾಜಿಕಲಿ ಫ್ಯಾಕ್ಟ್ಸ್ ಘಟನೆಯನ್ನು ಒಳಗೊಂಡ ೨೦೧೪ ರ ರಿಂದ ಲೇಖನವನ್ನು ಕಂಡುಕೊಂಡಿದೆ. "ತಮಿಳುನಾಡಿನ ರಾಮನಾಥಪುರಂನಲ್ಲಿ ಐಸಿಸ್ ಲಾಂಛನವನ್ನು ಹೊಂದಿರುವ ಟೀ-ಶರ್ಟ್‌ಗಳನ್ನು ಧರಿಸಿರುವ ಪುರುಷರ ಗುಂಪು" ಎಂಬ ಶೀರ್ಷಿಕೆಯೊಂದಿಗೆ ಅದೇ ಚಿತ್ರವನ್ನು ಲೇಖನದಲ್ಲಿ ತೋರಿಸಲಾಗಿದೆ. ಈ ಲೇಖನದ ಪ್ರಕಾರ, ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಮಸೀದಿಯೊಂದರ ಮುಂದೆ ೨೬ ಯುವಕರು ಆಗಸ್ಟ್ ೨೦೧೪ ರಲ್ಲಿ ಐಸಿಸ್ ಟೀ-ಶರ್ಟ್‌ಗಳನ್ನು ಧರಿಸಿ ಗುಂಪಾಗಿ ಚಿತ್ರೀಕರಣಕ್ಕೆ ಪೋಸ್ ನೀಡಿದ್ದಾರೆ ಎಂದು ವರದಿಯಾಗಿದೆ. ಇಂಡಿಯಾ ಟುಡೇ ವರದಿಯ ಪ್ರಕಾರ, ಟಿ-ಶರ್ಟ್‌ಗಳನ್ನು ಆರ್ಡರ್ ಮಾಡಿದ ಶಂಕೆಯ ಮೇಲೆ ಅಬ್ದುಲ್ ರೆಹಮಾನ್ ಮತ್ತು ಮೊಹಮ್ಮದ್ ರಿಲ್ವಾನ್ ಎಂಬ ಇಬ್ಬರು ವ್ಯಕ್ತಿಗಳನ್ನು ಈ ಘಟನೆಗೆ ಸಂಬಂಧಪಟ್ಟಂತೆ ಬಂಧಿಸಲಾಗಿದೆ.

ದಿ ಹಿಂದೂ ಪ್ರಕಟಿಸಿದ ವರದಿಯೊಂದರ ಪ್ರಕಾರ, “ಆರಂಭದಲ್ಲಿ, ಇದು ಇರಾಕ್‌ನಲ್ಲಿ ಸಿಲುಕಿರುವ ಭಾರತೀಯ ನರ್ಸ್ ಗಳನ್ನು ಬಿಡುಗಡೆ ಮಾಡಿದ್ದಕ್ಕಾಗಿ ಮುಸ್ಲಿಂ ಯುವಕರು ಐಸಿಸ್‌ಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸಿದ್ದರು ಎಂದು ನಂಬಲಾಗಿತ್ತು.” ಎರಡು ದಿನಗಳ ನಂತರ ದಿ ಹಿಂದೂ ಪತ್ರಿಕೆಯ ಮುಂದಿನ ವರದಿಯ "ಆಳವಾದ ತನಿಖೆ" ಯಲ್ಲಿ ಈ ಘಟನೆಯ ಪ್ರಮುಖ ಆರೋಪಿಗಳು ಐಸಿಸ್‌ನ ಸಕ್ರಿಯ ಬೆಂಬಲಿಗರು ಮತ್ತು ಐಸಿಸ್ ಹೋರಾಡುತ್ತಿರುವ ಕಾರಣಕ್ಕಾಗಿ ಮುಸ್ಲಿಂ ಯುವಕರನ್ನು ಬ್ರೈನ್‌ವಾಶ್ ಮಾಡಲು ಪ್ರಯತ್ನಿಸುತ್ತಿದ್ದಾರೆ" ಎಂದು ಬಹಿರಂಗಪಡಿಸಿದೆ. ಹಲವಾರು ಇತರ ಸುದ್ದಿ ಸಂಸ್ಥೆಗಳು ೨೦೧೪ ರಲ್ಲಿ ಐಸಿಸ್ ಟೀ-ಶರ್ಟ್ ಧರಿಸಿದ ಪುರುಷರ ಗುಂಪಿನ ಫೋಟೋವನ್ನು ಕುರಿತು ವರದಿ ಮಾಡಿದ್ದವು.

ಈ ಚಿತ್ರವು ‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆಯಾದ ನಂತರ ತೆಗೆದದ್ದಲ್ಲ. 

ದಿ ಕೇರಳ ಸ್ಟೋರಿ ಚಲನಚಿತ್ರದ ವಿರುದ್ಧದ ಪ್ರತಿಭಟನೆಯ ಸಮಯದಲ್ಲಿ ರಾಷ್ಟ್ರ ಧ್ವಜವನ್ನು ಮಾರ್ಪಡಿಸಲಾಗಿದೆ ಎಂದು ಹೇಳುವ ಪೋಷ್ಟ್ ಗಳು ಸೇರಿದಂತೆ ಚಲನಚಿತ್ರದ ಸುತ್ತಲಿನ ಇತ್ತೀಚಿನ ವಿವಾದಗಳ ಮಧ್ಯೆ ಹೊರಹೊಮ್ಮಿದ ಇತರ ನಿರೂಪಣೆಗಳನ್ನು ಲಾಜಿಕಲಿ ಫ್ಯಾಕ್ಟ್ಸ್ ಫ್ಯಾಕ್ಟ್ ಚೆಕ್ ಮಾಡಿ ತಪ್ಪು ಎಂದು ನಿರ್ಣಯಿಸಿದೆ.

ತೀರ್ಪು

ಪ್ರಶ್ನೆಯಲ್ಲಿರುವ ಛಾಯಾಚಿತ್ರವನ್ನು ೨೦೧೪ ರಲ್ಲಿ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ತೆಗೆಯಲಾಗಿದೆ. ಇದು ಯಾವುದೇ ರೀತಿಯಲ್ಲಿ ಕೇರಳ ರಾಜ್ಯಕ್ಕೆ ಸಂಬಂಧಪಟ್ಟದ್ದಲ್ಲ ಹಾಗು ಚಿತ್ರವು ಇತ್ತೀಚಿನದ್ದಲ್ಲ. ಆದ್ದರಿಂದ ಈ ಹೇಳಿಕೆಯನ್ನು ನಾವು ತಪ್ಪು ಎಂದು ಗುರುತಿಸಿದ್ದೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ