ಮೂಲಕ:
ನವೆಂಬರ್ 29 2022
ನೆಹರು ಮಹಿಳೆಯನ್ನು ಚುಂಬಿಸಲು ಪ್ರಯತ್ನಿಸುತ್ತಿರುವ ಛಾಯಾಚಿತ್ರವು ವಾಸ್ತವವಾಗಿ ೨೦೧೩ ರ ಭಾರತದ ವಿಭಜನೆಯ ಸುತ್ತ ಕೇಂದ್ರೀಕೃತವಾದ "ಡ್ರಾಯಿಂಗ್ ದಿ ಲೈನ್" ನಾಟಕದ ದೃಶ್ಯವಾಗಿದೆ.
ಸಂದರ್ಭ
ನವೆಂಬರ್ ೧೪ ರಂದು ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ೧೩೦ ನೇ ಜನ್ಮ ವಾರ್ಷಿಕೋತ್ಸವದಿನದಂದ್ದು ಸಾಮಾಜಿಕ ಜಾಲಾತಾಣಗಳಲ್ಲಿ ಅವಹೇಳನಕಾರಿ ಶೀರ್ಷಿಕೆಗಳೊಂದಿಗೆ ತಪ್ಪು ನಿರೂಪಣೆಗಳನ್ನು ಹಂಚಿಕೊಂಡಿದ್ದರು. ಅಂತಹ ಒಂದು ಟ್ವಿಟರ್ ಪೋಸ್ಟ್, ಜವಾಹರಲಾಲ್ ನೆಹರು ಅವರನ್ನು ಮಹಿಳೆಯೊಂದಿಗೆ ಅನ್ಯೋನ್ಯವಾಗಿ ತೋರಿಸಲು ಪ್ರಯತ್ನಿಸುತ್ತಿರುವ ಛಾಯಾಚಿತ್ರವನ್ನು ಹಂಚಿಕೊಂಡಿತು. ನೆಹರು ಅವರ ಜನ್ಮದಿನವನ್ನು ಭಾರತದಲ್ಲಿ ಮಕ್ಕಳ ದಿನವನ್ನಾಗಿ ಆಚರಿಸುವ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಇದೇ ರೀತಿಯ ಚಿತ್ರವನ್ನು ಹಂಚಿಕೊಂಡ ಮತ್ತೊಂದ್ದು ಟ್ವಿಟರ್ ಪೋಸ್ಟ್, "#ಥಿಂಕ್_ಡೇ ಮತ್ತು #ಮಕ್ಕಳ_ದಿನದ ನಡುವಿನ ವ್ಯತ್ಯಾಸ #ತಾರ್ಕಿ_ದಿನ #ಮಕ್ಕಳ_ದಿನ" ಎಂಬ ಶೀರ್ಷಿಕೆಯನ್ನು ಹೊಂದಿದೆ. ಆದರೆ, ಇದು ತಪ್ಪು. ಚಿತ್ರದಲ್ಲಿರುವ ವ್ಯಕ್ತಿ ನೆಹರೂ ಅಲ್ಲ ಆದರೆ ನಾಟಕದಲ್ಲಿ ನೆಹರೂ ಪಾತ್ರವನ್ನು ನಿರ್ವಹಿಸಿದ ರಂಗಭೂಮಿ ನಟ ಸಿಲಾಸ್ ಕಾರ್ಸನ್.
ವಾಸ್ತವವಾಗಿ
ಹಿಮ್ಮುಖ ಚಿತ್ರದ ಹುಡುಕಾಟವನ್ನು ನಡೆಸಿದಾಗ, ಡಿಸೆಂಬರ್ ೧೫, ೨೦೧೩ ರಂದು ಇದೇ ರೀತಿಯ ಛಾಯಾಚಿತ್ರವನ್ನು 'ಹಿಸ್ಟರಿ ವರ್ಕ್‌ಶಾಪ್ ಜರ್ನಲ್' ಎಂಬ ಜಾಲತಾಣದಲ್ಲಿ ಪ್ರಕಟಿಸಿರುವುದನ್ನು ಕಂಡುಕೊಂಡೆವು. ಈ ಜಾಲತಾಣವು ಆರ್ಥಿಕ ವಿಷಯಗಳು, ಸ್ಥಳೀಯ ಇತಿಹಾಸ ಮತ್ತು ಇತರ ವಿವಿಧ ವರದಿಗಳ ಕುರಿತು ವಿಮರ್ಶೆಗಳನ್ನು ಪ್ರಕಟಿಸುವ ಬ್ರಿಟಿಷ್ ಶೈಕ್ಷಣಿಕ ಇತಿಹಾಸ ಜರ್ನಲ್ ಆಗಿದೆ. ಈ ವರದಿಯ ಪ್ರಕಾರ ಲಂಡನ್‌ನ ಹ್ಯಾಂಪ್‌ಸ್ಟೆಡ್ ಥಿಯೇಟರ್‌ನಲ್ಲಿ ಪ್ರದರ್ಶಿಸಲಾದ ೨೦೧೩ ರ ನಾಟಕ "ಡ್ರಾಯಿಂಗ್ ದಿ ಲೈನ್" ನಲ್ಲಿ ನಟರೊಬ್ಬರು ನೆಹರೂ ಪಾತ್ರವನ್ನು ನಿರ್ವಹಿಸಿದ ಪ್ರದರ್ಶನದ ಒಂದು ಭಾಗವಾಗಿದೆ.
ನಾಟಕದ ಸಾರಾಂಶವನ್ನು ಹ್ಯಾಂಪ್‌ಸ್ಟೆಡ್ ಥಿಯೇಟರ್, ಲಂಡನ್ ವೆಬ್‌ಸೈಟ್‌ನಲ್ಲಿ ಕಾಣಬಹುದು. ಈ ನಾಟಕವನ್ನು ಹೊವಾರ್ಡ್ ಬ್ರೆಂಟನ್ ನಿರ್ದೇಶಿಸಿದ್ದು, ಸಿರಿಲ್ ರಾಡ್‌ಕ್ಲಿಫ್ ಮತ್ತು ಭಾರತದ ವಿಭಜನೆಯಲ್ಲಿ ಅವರ ಭಾಗವನ್ನು ಕೇಂದ್ರೀಕರಿಸಲಾಗಿದೆ. ಥಿಯೇಟರ್‌ನ ಜಾಲತಾಣದ ಪ್ರಕಾರ, ನಟ ಕಾರ್ಸನ್ ನೆಹರು ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ನಟಿ ಲೂಸಿ ಬ್ಲಾಕ್ ಅವರು ಎಡ್ವಿನಾ ಮೌಂಟ್ ಬ್ಯಾಟನ್ ಪಾತ್ರವನ್ನು ನಿರ್ವಹಿಸಿದ್ದಾರೆ. ವೈರಲ್ ಆಗುತ್ತಿರುವ ಅದೇ ಛಾಯಾಚಿತ್ರವನ್ನು ಜಾಲತಾಣದಲ್ಲಿ 'ವೀಡಿಯೋ ಮತ್ತು ಇಮೇಜ್ ಗ್ಯಾಲರಿ' ವಿಭಾಗದ ಅಡಿಯಲ್ಲಿ ನಾವು ಗುರುತಿಸಬಹುದು.
ದಿ ಗಾರ್ಡಿಯನ್ ಸುದ್ದಿ ಜಾಲತಾಣ ಕೂಡ ಡಿಸೆಂಬರ್ ೧೦, ೨೦೧೩ ರಂದು ' ಡ್ರಾಯಿಂಗ್ ದಿ ಲೈನ್' ನಾಟಕವನ್ನು ವಿಮರ್ಶಿಸುವ ಲೇಖನವನ್ನು ಪ್ರಕಟಿಸಿತು. ಹಲವಾರು ಸತ್ಯ-ಪರಿಶೀಲನಾ ಸಂಸ್ಥೆಗಳು ಈ ಚಿತ್ರವನ್ನು ನಿರಾಕರಿಸಿವೆ. ತದನಂತರವು ಈ ಛಾಯಾಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಮರುಕಳಿಸಿದೆ.
ತೀರ್ಪು
ನೆಹರೂ ಅವರನ್ನು ಅಪಹಾಸ್ಯ ಮಾಡುವ ಉದ್ದೇಶದಿಂದ ಸಂಬಂಧವಿಲ್ಲದ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆ ತಪ್ಪು ಎಂದು ಗುರುತಿಸುತ್ತೇವೆ.