ಮುಖಪುಟ ‘ಹಿಂದುತ್ವ ಎಂಬುದು ಚುನಾವಣಾ ಆಟದ ಕಾರ್ಡ್’ ಎಂದು ನರೇಂದ್ರ ಮೋದಿ ಅವರು ಹೇಳುತ್ತಿರುವ ವೀಡಿಯೋ ಎಡಿಟ್ ಮಾಡಲಾಗಿದೆ

‘ಹಿಂದುತ್ವ ಎಂಬುದು ಚುನಾವಣಾ ಆಟದ ಕಾರ್ಡ್’ ಎಂದು ನರೇಂದ್ರ ಮೋದಿ ಅವರು ಹೇಳುತ್ತಿರುವ ವೀಡಿಯೋ ಎಡಿಟ್ ಮಾಡಲಾಗಿದೆ

ಮೂಲಕ: ರಾಹುಲ್ ಅಧಿಕಾರಿ

ನವೆಂಬರ್ 3 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
‘ಹಿಂದುತ್ವ ಎಂಬುದು ಚುನಾವಣಾ ಆಟದ ಕಾರ್ಡ್’ ಎಂದು ನರೇಂದ್ರ ಮೋದಿ ಅವರು ಹೇಳುತ್ತಿರುವ ವೀಡಿಯೋ ಎಡಿಟ್ ಮಾಡಲಾಗಿದೆ "ಹಿಂದುತ್ವವು ಚುನಾವಣಾದಲ್ಲಿ ಆಟ ಆಡುವ ಕಾರ್ಡ್" ಎಂದು ನರೇಂದ್ರ ಮೋದಿ ಹೇಳಿದ್ದಾರೆ ಎಂಬ ತಪ್ಪಾದ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮ ಹಂಚಿಕೊಂಡ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೈರಲ್ ವೀಡಿಯೋ ಎಡಿಟ್ ಮಾಡಲಾಗಿದ್ದು, ಮೋದಿಯವರು ೧೯೯೮ ಸಂದರ್ಶನದಲ್ಲಿ ಅವರ ಪಕ್ಷಕ್ಕೆ ಹಿಂದುತ್ವ ಎಂದಿಗೂ ಚುನಾವಣಾ ಘೋಷಣೆಯಾಗಿರಲಿಲ್ಲ ಎಂದು ಹೇಳಿದ್ದರು.

ಇಲ್ಲಿನ ಹೇಳಿಕೆ ಏನು?
"ಹಿಂದುತ್ವವು ಚುನಾವಣಾ ಆಟದಲ್ಲಿ ಬಳಸುವ ಇಸ್ಪೇಟಿನ ಕಾರ್ಡ್" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ೧೪ ಸೆಕೆಂಡ್‌ಗಳ ವೈರಲ್ ವೀಡಿಯೋದಲ್ಲಿ ಪ್ರಧಾನಿ ಮೋದಿಯವರು ಹಿಂದಿಯಲ್ಲಿ ಸಂದರ್ಶಕರೊಂದಿಗೆ ಮಾತನಾಡುತ್ತಾ, "ಭಾರತೀಯ ಜನತಾ ಪಕ್ಷಕ್ಕೆ ಹಿಂದುತ್ವ ಎಂದಿಗೂ ಚುನಾವಣಾ ಘೋಷಣೆಯಾಗಿರಲಿಲ್ಲ. ಹಿಂದುತ್ವವು ನಮಗೆ ನಂಬಿಕೆಯ ಲೇಖನವಾಗಿದೆ. ಇದು ಚುನಾವಣಾ ಆಟದಲ್ಲಿ ಬಳಸುವ ಕಾರ್ಡ್ ಆಗಿದೆ" ಎಂದು ಹೇಳುತ್ತಿದ್ದಾರೆ. ಹಿಂದುತ್ವವು ಆಡಳಿತ ಪಕ್ಷವಾದ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದಂತೆ ಭಾರತೀಯ ಬಲಪಂಥೀಯರಿಂದ ಸಮರ್ಥಿಸಲ್ಪಟ್ಟ ರಾಜಕೀಯ ಸಿದ್ಧಾಂತವಾಗಿದೆ. 'ಹಿಂದೂ-ನೆಸ್'ಗೆ ಭಾಷಾಂತರಿಸುವ ಹಿಂದುತ್ವವು ಭಾರತದಲ್ಲಿ ಹಿಂದೂ ಧರ್ಮದ ಶ್ರೇಷ್ಠತೆ ಮತ್ತು ಜಾತ್ಯತೀತ ದೇಶವನ್ನು ಹಿಂದೂ ರಾಜ್ಯವಾಗಿ ಸ್ಥಾಪಿಸಲು ಪ್ರತಿಪಾದಿಸುತ್ತದೆ. 'ಹಿಂದೂ-ನೆಸ್'ಗೆ ಭಾಷಾಂತರಿಸುವ ಹಿಂದುತ್ವವು ಭಾರತದಲ್ಲಿ ಹಿಂದೂ ಧರ್ಮದ ಶ್ರೇಷ್ಠತೆ ಮತ್ತು ಜಾತ್ಯತೀತ ದೇಶವನ್ನು ಹಿಂದೂ ರಾಜ್ಯವಾಗಿ ಸ್ಥಾಪಿಸಲು ಪ್ರತಿಪಾದಿಸುತ್ತದೆ.

ಹಿಮಾಚಲ ಯೂತ್ ಕಾಂಗ್ರೆಸ್‌ನ ಅಧಿಕೃತ ಫೇಸ್‌ಬುಕ್ ಪುಟ ಸೇರಿದಂತೆ ಹಲವಾರು ಬಳಕೆದಾರರು ಮೋದಿಯವರ ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ ಮತ್ತು “ ಅಧಿಕಾರವನ್ನು ಪಡೆಯಲು ಭಾರತೀಯ ಜನತಾ ಪಕ್ಷವು ಹಿಂದೂ ಧರ್ಮವನ್ನು ಲಾಭಕ್ಕಾಗಿ ಬಳಸಿಕೊಂಡಷ್ಟು ವಿಶ್ವದ ಯಾವುದೇ ರಾಜಕೀಯ ಪಕ್ಷವು ತನ್ನ ಧರ್ಮವನ್ನು ಬಳಸಿಕೊಂಡಿಲ್ಲ (ಹಿಂದಿಯಿಂದ ಅನುವಾದಿಸಲಾಗಿದೆ)." ವೈರಲ್ ವೀಡಿಯೋದ ಆರ್ಕೈವ್ ಮಾಡಿದ ಆವೃತ್ತಿಗಳು ಮತ್ತು ಅದರ ಜೊತೆಗಿನ ಪೋಷ್ಟ್ ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಫೇಸ್‌ಬುಕ್‌ನಲ್ಲಿ ಕಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
(ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ೧೯೯೮ ನಲ್ಲಿ ಮೋದಿ ಅವರು ನೀಡಿದ ಸಂದರ್ಶನದ ಎಡಿಟ್ ಮಾಡಿದ ವೀಡಿಯೋವನ್ನು ಈಗ ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಮೂಲ ವೀಡಿಯೋದಲ್ಲಿ ಮೋದಿ ಅವರು ಅಂತಹ ಯಾವುದೇ ಕಾಮೆಂಟ್‌ಗಳನ್ನು ಮಾಡಿಲ್ಲ.

ನಾವು ಕಂಡುಹಿಡಿದದ್ದು ಏನು?
ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಸೆಪ್ಟೆಂಬರ್ ೧೭, ೨೦೨೦ ರಂದು ಹಿಂದಿ ಸುದ್ದಿವಾಹಿನಿ ಜೀ ನ್ಯೂಸ್ ಪ್ರಕಟಿಸಿದ ನರೇಂದ್ರ ಮೋದಿಯವರ ಹಳೆಯ ಸಂದರ್ಶನಕ್ಕೆ ನಮ್ಮನ್ನು ಕರೆದೊಯ್ಯಿತು. ವೀಡಿಯೋದ ಶೀರ್ಷಿಕೆಯ ಒಂದು ಭಾಗವು, "೨೪ ವರ್ಷ ಹಿಂದಿನ ಪ್ರಧಾನಿ ಮೋದಿಯವರ ಸಂದರ್ಶನ" ಎಂದು ಸೂಚಿಸಲಾಗಿತ್ತು." ೧೪:೨೪ ನಿಮಿಷಗಳ ವೀಡಿಯೋ ಮೋದಿಯವರೊಂದಿಗೆ ಎರಡು ಸಂದರ್ಶನಗಳನ್ನು ಒಳಗೊಂಡಿದೆ-ಒಂದು ಮಾರ್ಚ್ ೨೨, ೧೯೯೮ ರಂದು ರೆಕಾರ್ಡ್ ಮಾಡಲಾಗಿದೆ, ಮತ್ತು ಇನ್ನೊಂದು ಡಿಸೆಂಬರ್ ೬, ೧೯೯೮ ರಂದು ರೆಕಾರ್ಡ್ ಮಾಡಲಾಗಿದೆ. ವೈರಲ್ ಕ್ಲಿಪ್ ಅನ್ನು ಎರಡನೇ ಸಂದರ್ಶನದಿಂದ ತೆಗೆದುಕೊಳ್ಳಲಾಗಿದೆ ಮತ್ತು ೧೦:೩೦-೧೦:೪೦ ಟೈಮ್‌ಸ್ಟ್ಯಾಂಪ್‌ ನಲ್ಲಿ ನಾವು ಅದನ್ನು ನೋಡಬಹುದು.   

ಸುಮಾರು ೧೦:೦೫ ನಿಮಿಷಗಳ ಅವಧಿಯಲ್ಲಿ, ಸಂದರ್ಶಕರು ಮೋದಿಯವರನ್ನು ಹಿಂದಿಯಲ್ಲಿ ಹೀಗೆ ಕೇಳುತ್ತಾರೆ, "ನರೇಂದ್ರ ಮೋದಿ ಜೀ, ೧೯೮೪ ರಲ್ಲಿ ನಿಮಗೆ ಎರಡು ಸ್ಥಾನಗಳು ಬರಲು ನಿಮ್ಮ ಹಿಂದುತ್ವದ ಘೋಷಣೆಯೇ ಕಾರಣ. ನಂತರ, ನೀವು ಕ್ರಮೇಣ ೧೯೯೮ ರಲ್ಲಿ ಸರ್ಕಾರ ರಚಿಸುವ ಹಂತವನ್ನು ತಲುಪಿದ್ದೀರಿ. ಈಗ ನಿಮ್ಮ ಹಿಂದುತ್ವದ ಘೋಷಣೆಯೂ ವಿಫಲವಾಗಿದೆ, ಈ ಬಾರಿಯ ಚುನಾವಣೆಯಲ್ಲಿ ಮತ್ತೆ ವಂದೇ ಮಾತರಂ, ಸರಸ್ವತಿ ವಂದನೆಯ ಬಗ್ಗೆ ಚುನಾವಣಾ ಗಿಮಿಕ್‌ ಹೆಸರಿನಲ್ಲಿ ಮಾತನಾಡಿದ್ದೀರಿ, ಆದರೆ ಮತ ಸೆಳೆಯಲು ಚುನಾವಣೆ ಸಂದರ್ಭದಲ್ಲಿ ಭಾವನಾತ್ಮಕ ವಿಚಾರವನ್ನು ಎತ್ತುತ್ತಿದ್ದೀರಿ ಎಂಬುದು ಜನರಿಗೆ ಅರ್ಥವಾಗಿದೆ. ಇದಕ್ಕೆ ಉತ್ತರಿಸಿದ ಮೋದಿ ಅವರು, "ಹಿಂದುತ್ವ ಎಂದಿಗೂ ಭಾರತೀಯ ಜನತಾ ಪಕ್ಷದ ಚುನಾವಣಾ ಘೋಷಣೆಯಾಗಿರಲಿಲ್ಲ. ಹಿಂದುತ್ವವು ನಮಗೆ ನಂಬಿಕೆಯ ಲೇಖನವಾಗಿದೆ. ಇದು ಚುನಾವಣಾದಲ್ಲಿ ಆಡುವ ಕಾರ್ಡ್ ಅಲ್ಲ. ಈ ಸಮಸ್ಯೆ ಎಂದಿಗೂ ಅಸ್ತಿತ್ವದಲ್ಲಿಲ್ಲ. (ಹಿಂದಿಯಿಂದ ಅನುವಾದಿಸಲಾಗಿದೆ) ಎಂದು ಹೇಳುತ್ತಾರೆ.

ಸಂದರ್ಶಕರಿಗೆ ಮೋದಿ ಅವರು "ಅಲ್ಲ" ಎಂಬ ಪದವನ್ನು ವೈರಲ್ ವೀಡಿಯೋದಲ್ಲಿ ಎಡಿಟ್ ಮಾಡಲಾಗಿದ್ದು "ಹಿಂದುತ್ವವು ಚುನಾವಣೆಯಲ್ಲಿ ಆಟ ಆಡುವ ಕಾರ್ಡ್" ಎಂದು ಮೋದಿ ಅವರು ಹೇಳಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. 

೧೯೯೮ ರ ಜನರಲ್ ಎಲೆಕ್ಷನ್ಸ್
ಬಿಜೆಪಿಯು ೧೯೯೮ ರಲ್ಲಿ ನ್ಯಾಷನಲ್ ಡೆಮಾಕ್ರೆಟಿಕ್ ಅಲಯನ್ಸ್ (ಎನ್‌ಡಿಎ) ನೇತೃತ್ವದ ಇತರ ಪಕ್ಷಗಳ ಒಕ್ಕೂಟದಲ್ಲಿ ಕೇಂದ್ರ ಸರ್ಕಾರವನ್ನು ರಚಿಸಿತು. ಡಿಸೆಂಬರ್ ೬, ೧೯೯೮ ರ ಮೂಲ ಸಂದರ್ಶನದಲ್ಲಿ ಮೋದಿಯವರಿಗೆ ಚುನಾವಣಾ ಗೆಲುವು, ಬಿಜೆಪಿಯ ಪ್ರಣಾಳಿಕೆ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಯಸ್ ಯಸ್ ) ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಆಗ ಮೋದಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.

ತೀರ್ಪು
೧೯೯೮ ರ ಸಂದರ್ಶನದ ವೀಡಿಯೋವನ್ನು ಎಡಿಟ್ ಮಾಡಿ ನರೇಂದ್ರ ಮೋದಿಯವರು "ಹಿಂದುತ್ವವು ಚುನಾವಣಾದಲ್ಲಿ ಆಟ ಆಡುವ ಕಾರ್ಡ್ ಆಗಿದೆ" ಎಂದು ಹೇಳಿದರು ಎಂಬ ತಪ್ಪಾದ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ವಾಸ್ತವದಲ್ಲಿ ಅವರು ಹಿಂದುತ್ವವು ಚುನಾವಣಾದಲ್ಲಿ ಆಟ ಆಡುವ ಕಾರ್ಡ್ "ಅಲ್ಲ" ಎಂದು ಹೇಳಿದ್ದರು. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ) 

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ