ಮುಖಪುಟ ಎಐ ರಚಿತ ಚಿತ್ರಗಳನ್ನು ಬಳಸಿ ಅದು ಅಯೋಧ್ಯೆ ಅಲ್ಲಿ ನಿರ್ಮಿಸಲಾಗುತ್ತಿರುವ 'ಹೊಸ' ರೈಲು ನಿಲ್ದಾಣದವೆಂದು ಹಂಚಿಕೊಳ್ಳಲಾಗಿದೆ

ಎಐ ರಚಿತ ಚಿತ್ರಗಳನ್ನು ಬಳಸಿ ಅದು ಅಯೋಧ್ಯೆ ಅಲ್ಲಿ ನಿರ್ಮಿಸಲಾಗುತ್ತಿರುವ 'ಹೊಸ' ರೈಲು ನಿಲ್ದಾಣದವೆಂದು ಹಂಚಿಕೊಳ್ಳಲಾಗಿದೆ

ಮೂಲಕ: ಚಂದನ್ ಬೋರ್ಗೊಹೈನ್

ನವೆಂಬರ್ 21 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಎಐ ರಚಿತ ಚಿತ್ರಗಳನ್ನು ಬಳಸಿ ಅದು ಅಯೋಧ್ಯೆ ಅಲ್ಲಿ ನಿರ್ಮಿಸಲಾಗುತ್ತಿರುವ 'ಹೊಸ' ರೈಲು ನಿಲ್ದಾಣದವೆಂದು ಹಂಚಿಕೊಳ್ಳಲಾಗಿದೆ ಅಯೋಧ್ಯೆಯ ರೈಲು ನಿಲ್ದಾಣದವೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಎಐ ರಚಿಸಿದ ಚಿತ್ರಗಳು . (ಮೂಲ: ಎಕ್ಸ್‌)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ವೈರಲ್ ಚಿತ್ರಗಳನ್ನು ಎಐ ಉಪಕರಣಗಳನ್ನು ಬಳಸಿ ರಚಿಸಲಾಗಿದೆ ಮತ್ತು ಅದು ಅಯೋಧ್ಯೆಯ ರೈಲು ನಿಲ್ದಾಣವನ್ನು ಚಿತ್ರಿಸುವುದಿಲ್ಲ.

ಹಲವಾರು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಜನವರಿಯಲ್ಲಿ ದೇವಾಲಯವನ್ನು ಉದ್ಘಾಟಿಸಲಿದ್ದಾರೆ ಎಂದು ವರದಿಯಾಗಿದೆ. ದೇವಾಲಯವು ಅದರ ಅಂತಿಮ ರೂಪವನ್ನು ಪಡೆಯುತ್ತಿದ್ದಂತೆ, ಅಯೋಧ್ಯಾ ನಗರದ ರೂಪಾಂತರವೂ ಸಹ ಆನ್‌ಲೈನ್‌ನಲ್ಲಿ ಸ್ವಲ್ಪ ಗಮನವನ್ನು ಸೆಳೆದಿದೆ.

ಇಲ್ಲಿನ ಹೇಳಿಕೆ ಏನು?
ಉತ್ತರ ಪ್ರದೇಶದ ಅಯೋಧ್ಯೆ ರೈಲು ನಿಲ್ದಾಣವನ್ನು ತೋರಿಸುವ ನಾಲ್ಕು ಚಿತ್ರಗಳು ಸೊಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಫೇಸ್‌ಬುಕ್‌ ನಲ್ಲಿ ಬಳಕೆದಾರರು ಈ ಚಿತ್ರಗಳನ್ನು ನವೆಂಬರ್ ೪ ರಂದು ಹಂಚಿಕೊಂಡಿದ್ದಾರೆ ಮತ್ತು ಅದರ ಶೀರ್ಷಿಕೆ, ಅಯೋಧ್ಯಾ ರೈಲ್ವೆ ಸ್ಟೇಷನ್.... ಜೈ ಶ್ರೀರಾಮ್" ಎಂದು ಬರೆಯಲಾಗಿದೆ. ಈ ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು. 

ವೈರಲ್ ಚಿತ್ರಗಳೊಂದಿಗೆ ಪೋಷ್ಟ್ ನ ಸ್ಕ್ರೀನ್‌ಶಾಟ್.
(ಮೂಲ: ಫೇಸ್‌ಬುಕ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ) 

ಅದೇ ರೀತಿಯ ಚಿತ್ರಗಳನ್ನು ಹಲವಾರು ಇತರೆ ಫೇಸ್‌ಬುಕ್‌ ಬಳಕೆದಾರರೂ ಸಹ ಹಂಚಿಕೊಂಡಿದ್ದಾರೆ, ಮತ್ತು ವೈರಲ್ ಚಿತ್ರಗಳಲ್ಲಿ ಒಂದು "ಅಯೋಧ್ಯೆ ಮೆಟ್ರೋ ಸ್ಟೇಷನ್" ಅನ್ನು ತೋರಿಸುತ್ತದೆ ಎಂದು ಹಲವಾರು ಬಳಕೆದಾರರು ಹೇಳಿಕೊಂಡಿದ್ದಾರೆ. ಅಂತಹ ಒಂದು ಪೋಷ್ಟ್ "ಅಯೋಧ್ಯೆ ಮೆಟ್ರೋ ನಿಲ್ದಾಣದ ನೋಟವನ್ನು ಬಿಡುಗಡೆ ಮಾಡಲಾಗಿದೆ!// ಜೈ ಶ್ರೀ ರಾಮ್," ಎಂಬ ಶೀರ್ಹಿಕೆಯನ್ನು ಹೊಂದಿದೆ.

ವೈರಲ್ ಚಿತ್ರಗಳೊಂದಿಗೆ ಪೋಷ್ಟ್ ನ ಸ್ಕ್ರೀನ್‌ಶಾಟ್.
(ಮೂಲ: ಫೇಸ್‌ಬುಕ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಈ ಚಿತ್ರಗಳನ್ನು ಕೃತಕ ಬುದ್ಧಿಮತ್ತೆ (ಎಐ) ಬಳಸಿ ರಚಿಸಲಾಗಿದೆ ಮತ್ತು ಅಯೋಧ್ಯೆಯ ನಿಜವಾದ ರೈಲು ನಿಲ್ದಾಣ ಅಥವಾ 'ಮೆಟ್ರೋ ನಿಲ್ದಾಣ'ವನ್ನು ಚಿತ್ರಿಸುವುದಿಲ್ಲ.

ಈ ಚಿತ್ರಗಳು
ವೈರಲ್ ಚಿತ್ರಗಳಲ್ಲಿ ಒಂದರ ರಿವರ್ಸ್ ಇಮೇಜ್ ಸರ್ಚ್ ನಮ್ಮನ್ನು ಅಕ್ಟೋಬರ್ ೨೭, ೨೦೨೩ ರಂದು 'ದಿ ಮಧ್ಯಪ್ರದೇಶ ಇಂಡೆಕ್ಸ್' ಎಂಬ ಬಳಕೆದಾರರು ಹಂಚಿಕೊಂಡ ಎಕ್ಸ್‌ ಪೋಷ್ಟ್ ಗೆ ಕರೆದೊಯಿತು. ಬಳಕೆದಾರರು ಈ ಚಿತ್ರಗಳನ್ನು ಎಐ ಪರಿಕರಗಳನ್ನು ಬಳಸಿ ರಚಿಸಲಾಗಿದೆ ಮತ್ತು ಅದರ ಕ್ರೆಡಿಟ್ “@Amarrz” ಅವರಿಗೆ ನೀಡಲಾಗಿದೆ.

ಖಾತೆಯು (@Amarrrrz) ಅಕ್ಟೋಬರ್ ೨೭ ರಂದು ಈ ಚಿತ್ರಗಳನ್ನು ಪೋಷ್ಟ್ ಮಾಡಲಾಗಿದೆ. ಲಾಜಿಕಲಿ ಫ್ಯಾಕ್ಟ್ಸ್ ಚಿತ್ರಗಳನ್ನು ಕುರಿತು ಹೆಚ್ಚಿನ ಮಾಹಿತಿಗಾಗಿ @Amarrrrz ಅನ್ನು ಸಂಪರ್ಕಿಸಿದೆ. ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸಿದಾಗ ಲೇಖನವನ್ನು ನವೀಕರಿಸಲಾಗುತ್ತದೆ.

"@MohitGr4" ಹೆಸರಿನ ಎಕ್ಸ್‌ ಬಳಕೆದಾರರು, ಅವರ ಖಾತೆಯನ್ನು ಈಗ ಡಿಲೀಟ್ ಮಾಡಲಾಗಿದೆ, ಎಸ್ಕಲೇಟರ್ ಅನ್ನು ತೋರಿಸುವ ವೈರಲ್ ಎಐ ಚಿತ್ರಗಳಲ್ಲಿ ಒಂದನ್ನು ರಚಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಇಂಡಿಯಾ ಟುಡೇ ಪ್ರಕಟಿಸಿದ ಫ್ಯಾಕ್ಟ್ ಚೆಕ್ ನ ಪ್ರಕಾರ ಬಿಂಗ್ ಇಮೇಜ್ ಕ್ರಿಯೇಟರ್ ಉಪಕರಣವನ್ನು ಬಳಸಿಕೊಂಡು ಎಸ್ಕಲೇಟರ್ ಅನ್ನು ತೋರಿಸುವ ಎಐ- ರಚಿತ ಚಿತ್ರವನ್ನು ನಿರ್ಮಿಸಿದ  ಜವಾಬ್ದಾರಿಯನ್ನು @@MohitGr4 ಅವರು ಸಮರ್ಥಿಸಿಕೊಂಡಿದ್ದಾರೆ. 

ಚಿತ್ರಗಳಲ್ಲಿ ಗೋಚರಿಸುವ ದೋಷಗಳು
ಇದಲ್ಲದೆ, ಎರಡು ವೈರಲ್ ಚಿತ್ರಗಳಲ್ಲಿ, ನಾವು ಕೆಲವು ಅಸಂಗತತೆಯನ್ನು ಗುರುತಿಸಬಹುದು:

  • ಇಂಗ್ಲಿಷ್ ನಲ್ಲಿ "Station " ಎಂಬ ಪದವನ್ನು "Stattion " ಎಂದು ಬರೆಯಲಾಗಿದೆ.

  • "Ayodhya " ಎಂಬ ಶಬ್ದವನ್ನು “Ayohrya” ಮತ್ತು “AYORDHANDY” ಎಂದು ಬರೆಯಲಾಗಿದೆ

@Amarrrz ಎಂಬ ಎಕ್ಸ್‌ ಖಾತೆಯಿಂದ ಹಂಚಿಕೊಂಡ ಚಿತ್ರಗಳಲ್ಲಿ ಕಾಗುಣಿತ ತಪ್ಪುಗಳು ಮತ್ತು ಇತರ ದೋಷಗಳನ್ನು ತೋರಿಸುತ್ತವೆ. (ಮೂಲ: ಎಕ್ಸ್‌ /@Amarrrz/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಇದಲ್ಲದೆ, ವೈರಲ್ ಫೋಟೋಗಳಲ್ಲಿ ಕಂಡುಬರುವ ಜನರು ಸಹ ಗೋಚರಿಸುವಂತೆ ಎಐ- ರಚಿತರಾಗಿದ್ದಾರೆ.

ವೈರಲ್ ಚಿತ್ರಗಳಲ್ಲಿ ಕ್ರಾಪ್ ಮಾಡಿದ ಈ ನೋಟವು ಮಾನವ ಆಕೃತಿಗಳು ನಿಜವಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತದೆ. (ಮೂಲ: ಎಕ್ಸ್‌/@Amarrrz/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಲಾಜಿಕಲಿ ಫ್ಯಾಕ್ಟ್ಸ್ ಚಿತ್ರಗಳ ಸೃಷ್ಟಿಕರ್ತನನ್ನು ಸ್ವತಂತ್ರವಾಗಿ ಪರಿಶೀಲಿಸದಿದ್ದರೂ, ಈ ಚಿತ್ರಗಳು ಅಯೋಧ್ಯೆಯ ರೈಲ್ವೆ ನಿಲ್ದಾಣವಲ್ಲ ಎಂಬುದು ಸ್ಪಷ್ಟವಾಗಿದೆ.

ಅಯೋಧ್ಯೆಯ ರೈಲು ನಿಲ್ದಾಣದ ಬಗ್ಗೆ
ನವೆಂಬರ್ ೧೩, ೨೦೨೩ ರಂದು ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾದ ವರದಿಯು, ನವೀಕರಿಸಿದ ರೈಲು ನಿಲ್ದಾಣವು ಜನವರಿ ೨೦೨೪ ರಿಂದ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಹೇಳುತ್ತದೆ. ವರದಿಯ ಪ್ರಕಾರ ಭಾರತೀಯ ರೈಲ್ವೇ ಜನವರಿ ೧೫, ೨೦೨೪ ರೊಳಗೆ ರೈಲ್ವೆ ನಿಲ್ದಾಣದ ಪುನರಾಭಿವೃದ್ಧಿಯನ್ನು ಪೂರ್ಣಗೊಳಿಸಲು ಕೆಲಸ ಮಾಡುತ್ತಿದೆ. ಶ್ರೀ ರಾಮ ಜನ್ಮಭೂಮಿ ದೇವಸ್ಥಾನವು ನಿಲ್ದಾಣದ ವಾಸ್ತುಶಿಲ್ಪಕ್ಕೆ ಸ್ಫೂರ್ತಿಯಾಗಿದೆ ಎಂದು ವರದಿಯು ಗಮನಿಸಿದೆ. 

ಜುಲೈ ೨೦, ೨೦೨೩ ರಂದು ರೈಲ್ವೇ ಸಚಿವಾಲಯದ ಎಕ್ಸ್‌  ಪೋಷ್ಟ್ ಅಯೋಧ್ಯೆ ರೈಲು ನಿಲ್ದಾಣದ ನೈಜ ಚಿತ್ರಗಳನ್ನು ಹೊಂದಿದೆ, ಆದರೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೈರಲ್ ಚಿತ್ರಗಳಿಗೆ ಇವು ಯಾವುದೇ ಹೋಲಿಕೆಯನ್ನು ಹೊಂದಿಲ್ಲ.

ಅಯೋಧ್ಯೆಯಲ್ಲಿ ಮೆಟ್ರೋ ನಿಲ್ದಾಣವಿದೆಯೇ?
ಫೆಬ್ರವರಿ ೨೦೨೩ ರ ವರದಿಗಳ ಪ್ರಕಾರ, ಉತ್ತರ ಪ್ರದೇಶ ಮೆಟ್ರೋ ರೈಲು ನಿಗಮವು ಅಯೋಧ್ಯೆ, ವಾರಣಾಸಿ ಮತ್ತು ಮಥುರಾದಲ್ಲಿ ಮೆಟ್ರೋ ಸೇವೆಗಳನ್ನು ಪರಿಚಯಿಸಲು ಯೋಜಿಸಿದೆ. ಆದರೆ, ಉತ್ತರ ಪ್ರದೇಶ ಮೆಟ್ರೋ ರೈಲ್ ಕಾರ್ಪೊರೇಶನ್‌ನ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದಾಗ ವೈರಲ್ ಫೋಟೋಗಳು ಅಥವಾ ಅಯೋಧ್ಯೆಯಲ್ಲಿ ಅಂತಹ ಮೆಟ್ರೋ ನಿಲ್ದಾಣದ ಮಾಹಿತಿಯಂತಹ ಯಾವುದೇ ಚಿತ್ರಗಳನ್ನು ನೀಡಲಾಗಿಲ್ಲ.

ತೀರ್ಪು
ವೈರಲ್ ಚಿತ್ರಗಳನ್ನು ಎಐ ಇಮೇಜ್-ಜನರೇಶನ್ ಉಪಕರಣಗಳನ್ನು ಬಳಸಿ ರಚಿಸಲಾಗಿದೆ ಮತ್ತು ಅಯೋಧ್ಯೆ ರೈಲು ನಿಲ್ದಾಣವನ್ನು ಚಿತ್ರಿಸುವುದಿಲ್ಲ. ಆದ್ದರಿಂದ, ಈ ಹೇಳಿಕೆಯನ್ನು ನಕಲಿ ಎಂದು ಗುರುತಿಸಲಾಗಿದೆ.

(ಅನುವಾದಿಸಿದವರು : ಅಂಕಿತಾ ಕುಲಕರ್ಣಿ) 

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ