ಮುಖಪುಟ ನಿಷ್ಪಲವಾದ ೨೦೧೭ರ ಅದಾನಿ ಮತ್ತು ಚೀನಾ ಕಂಪನಿಯ ಒಪ್ಪಂದವು ೨೦೨೨ರ ತವಾಂಗ್ ಘರ್ಷಣೆಯ ನಡುವೆ ಮಾಡಲಾಯಿತು ಎಂದು ತಪ್ಪಾಗಿ ಗ್ರಹಿಸಲಾಗಿದೆ

ನಿಷ್ಪಲವಾದ ೨೦೧೭ರ ಅದಾನಿ ಮತ್ತು ಚೀನಾ ಕಂಪನಿಯ ಒಪ್ಪಂದವು ೨೦೨೨ರ ತವಾಂಗ್ ಘರ್ಷಣೆಯ ನಡುವೆ ಮಾಡಲಾಯಿತು ಎಂದು ತಪ್ಪಾಗಿ ಗ್ರಹಿಸಲಾಗಿದೆ

ಮೂಲಕ:

ಡಿಸೆಂಬರ್ 21 2022

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ನಿಷ್ಪಲವಾದ ೨೦೧೭ರ ಅದಾನಿ ಮತ್ತು ಚೀನಾ ಕಂಪನಿಯ ಒಪ್ಪಂದವು ೨೦೨೨ರ ತವಾಂಗ್ ಘರ್ಷಣೆಯ ನಡುವೆ ಮಾಡಲಾಯಿತು ಎಂದು ತಪ್ಪಾಗಿ ಗ್ರಹಿಸಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ತವಾಂಗ್ ಘರ್ಷಣೆ ನಡೆಯುವ ಮೊದಲೇ ೨೦೧೭ರಲ್ಲಿ ಚೀನಾದ ಈಸ್ಟ್ ಹೋಪ್ ಸಂಸ್ಥೆಯೊಂದಿಗೆ ಅದಾನಿ ಗ್ರೂಪ್‌ ಒಡಂಬಡಿಕೆ ಮಾಡಿಕೊಂಡಿದೆ. ಆದರೆ ಆ ಒಪ್ಪಂದವು ಕಾರ್ಯರೂಪಕ್ಕೆ ಬರಲಿಲ್ಲ.


ಸಂದರ್ಭ

ಡಿಸೆಂಬರ್ ೯, ೨೦೨೨ ರಂದು ಭಾರತ ಮತ್ತು ಚೀನಾ ಯೋಧರ ನಡುವೆ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ ನ ಎಲ್ಎಸಿ (LAC) ಬಳಿ ಘರ್ಷಣೆ ನಡೆದ ಬಗ್ಗೆ ಭಾರತೀಯ ಸೇನೆ ಹೇಳಿಕೆ ಬಿಡುಗಡೆ ಮಾಡಿದೆ. ನಂತರ ಭಾರತದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಪಾರ್ಲಿಮೆಂಟ್ ನಲ್ಲಿ ತಮ್ಮ ಹೇಳಿಕೆಯಲ್ಲಿ ಎಲ್ಎಸಿ ಗಡಿ ಬಳಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ-PLA) ಸೇನೆ ಅರುಣಾಚಲ ಪ್ರದೇಶದಲ್ಲಿ ಯಥಾಸ್ಥಿತಿಯನ್ನು ಬದಲಾಯಿಸಲು ಮಾಡಿದ ಪ್ರಯತ್ನವನ್ನು ಭಾರತೀಯ ಸೇನೆ ವಿರೋಧಿಸಿದಾಗ ಚೀನಾ ಸೈನಿಕರು ತಮ್ಮ ಸೇನಾ ಪೋಸ್ಟ್ ಗೆ ತೆರಳಿದರು ಎಂದು ತಿಳಿಸಿರುತ್ತಾರೆ. ಸಿಂಗ್ ಅವರು ಘಟನೆಯ ವಿವರ ನೀಡಿ ಕಾದಾಟದಲ್ಲಿ ಎರಡೂ ಕಡೆಯ ಸೈನಿಕರಿಗೆ ಸಣ್ಣ ಪುಟ್ಟ ಗಾಯಗಳು ಆಗಿದೆ ಆದರೆ ಸಾವು ನೋವು ಸಂಭವಿಸಿಲ್ಲ ಎಂದು ಹೇಳಿದರು.

ತದನಂತರ ಸಾಮಾಜಿಕ ಜಾಲತಾಣದಲ್ಲಿ ಮೇಲಿನ ಘಟನೆಗೆ ಸಂಬಂಧವಿಲ್ಲದ ವೀಡಿಯೋ ತುಣುಕುಗಳು ಹರಿದಾಡಲು ಶುರುವಾದವು. ಟ್ವಿಟ್ಟರ್ ನಲ್ಲಿ ಡಿಸೆಂಬರ್ ೧೩ರಂದು ಕಂಡುಬಂದ ಪೋಸ್ಟ್ ನಲ್ಲಿ ಸುದ್ದಿಯ ತುಣುಕೊಂದರ ಸ್ಕ್ರೀನ್‌ಶಾಟ್ ತೆಗೆದು "ಚೀನಾದ ಸಂಸ್ಥೆಗಳೊಂದಿಗೆ ಅದಾನಿ ಗುಜರಾತಲ್ಲಿ ೩೦೦ ಮಿಲಿಯನ್ ಡಾಲರ್ ಬಂಡವಾಳ ಹಾಕಲು ಒಪ್ಪಂದ ಮಾಡಿಕೊಂಡಿದ್ದಾರೆ" ಎಂದು ಬರೆಯಲಾಗಿತ್ತು. ಶೀರ್ಷಿಕೆಯಲ್ಲಿ ಚೀನಾದವರು ನಮ್ಮ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ, ಆದರೆ ಅದಾನಿ ಅವರೊಂದಿಗೆ ವ್ಯವಹಾರ ಮಾಡಿಕೊಳ್ಳಲು ಯಾವುದೇ ಮುಜುಗರ ತೋರಿಲ್ಲ ಎಂದು ಬರೆಯಲಾಗಿದೆ. ಅಲ್ಲದೆ ಸುದ್ದಿಯು ಯಾವಾಗ ಪ್ರಕಟಗೊಂಡಿದೆ ಎಂಬುದು ಹೇಳಲಾಗಿಲ್ಲ. ಆದಾಗ್ಯೂ ಈ ಸುದ್ದಿಯು ಹಳೆಯದು ಮತ್ತು ಚೀನಾ ಭಾರತ ನಡುವೆ ಘರ್ಷಣೆಗೆ ಸಂಬಂಧ ಪಟ್ಟಿಲ್ಲ.


ವಾಸ್ತವವಾಗಿ

ನಾವು ಮುಖ್ಯಪದ ಬಳಸಿ ಗೂಗಲ್ ಸರ್ಚ್ ಮಾಡಿದಾಗ ಚೀನಾದ ಶಾಂಘೈನಲ್ಲಿರುವ ಇಂಡಿಯಾದ ಕಾನ್ಸುಲೇಟ್ ಜನರಲ್ ಅವರ ೨೦೧೭ರ ಅಧಿಕೃತ ಹೇಳಿಕೆ ಸಿಕ್ಕಿತು. ಅದರಲ್ಲಿ ಅಮಿತ್ ಉಪ್ಲೆಂಚಾರ್ - ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಜೋನ್ ನ ಅಧ್ಯಕ್ಷರು ಮತ್ತು ಮೆಂಗ್ ಚಂಗ್ಜುನ್ – ಈಸ್ಟ್ ಹೋಪ್ ಗ್ರೂಪ್ನ ಅಧ್ಯಕ್ಷರು ಜೂನ್ ೧೯, ೨೦೧೭ರಲ್ಲಿ ತಿಳುವಳಿಕೆಯ ಸ್ಮರಣಿಕೆ ಒಪ್ಪಂದ (MOU) ಸಹಿಹಾಕಿದ ಬಗ್ಗೆ ವರದಿ ಆಗಿತ್ತು. ಆ MOU ಪ್ರಕಾರ ಈಸ್ಟ್ ಹೋಪ್ ಗ್ರೂಪಿನವರು ಗುಜರಾತ್‍ನ ಮುಂದ್ರಾ SEZ ವಲಯದಲ್ಲಿ ರಾಸಾಯನಿಕ, ಸಿಮೆಂಟ್, ಸೋಲಾರ್ ಉತ್ಪಾದನಾ ಸಲಕರಣೆ ಮತ್ತು ಅಲ್ಯೂಮಿನಿಯಂ ತಯಾರಿಕ ಘಟಕವನ್ನು ಪ್ರಾರಂಭಿಸಲು ೩೦೦ ಮಿಲಿಯನ್ ಡಾಲರ್ ಹೂಡಲು ಪ್ರಸ್ತಾವನೆ ಆಗಿತ್ತು. 


ಈಸ್ಟ್ ಹೋಪ್ ಗ್ರೂಪ್ ಚೀನಾದ ದೊಡ್ಡ ಕಾರ್ಪೊರೇಟ್ ಸಂಸ್ಥೆ ಆಗಿದ್ದು ಅಲ್ಯೂಮಿನಿಯಂ, ಪಾಲಿಸಿಲಿಕಾನ್, ವಿದ್ಯುತ್ ಮತ್ತು ಪಶು ಆಹಾರದಲ್ಲಿ ಕಾರ್ಯಶಕ್ತಿ ಹೊಂದಿದೆ. ಇದರ ಪ್ರಧಾನ ಕಚೇರಿ ಶಾಂಘೈ ನಗರದಲ್ಲಿದ್ದು ೧೫೦ ಅಂಗ ಸಂಸ್ಥೆಗಳನ್ನು ಹೊಂದಿದೆ ಮತ್ತು ೨೪೦೦೦ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.


ಹೇಳಿಕೆಯ ಪ್ರಕಾರ ಈ MOU ಒಪ್ಪಂದವಾಗಿ ೧೮೦ ದಿನಗಳೊಳಗೆ ಪರಿವರ್ತನೆ ಆಗಬೇಕಿತ್ತು. ಆದರೆ ಅದಾನಿ ಗ್ರೂಪ್ ಅವರು ಜೂನ್ ೨೦೨೦ರಲ್ಲಿ ಟ್ವಿಟ್ಟರ್ ಮೂಲಕ ಈಸ್ಟ್ ಹೋಪ್ ಗ್ರೂಪ್ ಜೊತೆ ೨೦೧೭ರಲ್ಲಿ ಆಗಿದ್ದ ಒಪ್ಪಂದ ಕಾರ್ಯ ರೂಪಕ್ಕೆ ಬಂದಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರುತ್ತಿರುವ ಸುದ್ದಿ ನಿಜವಲ್ಲ ಎಂದು ಸ್ಪಷ್ಟನೆ ನೀಡಿದೆ.

ಮನಿ ಕಂಟ್ರೋಲ್ (Moneycontrol) ನಿಯತಕಾಲಿಕೆಯ ಜೂಲೈ ೨೦೨೦ರ ವರದಿ ಪ್ರಕಾರ ಭಾರತದ ಸುಪ್ರೀಂ ಕೋರ್ಟಿನಲ್ಲಿ ಈ ಬಗ್ಗೆ ಒಂದು ಸಾಮಾಜಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್ - PIL) ಕೂಡ ದಾಖಲಾಗಿತ್ತು. ಅದರಲ್ಲಿ ಒಪ್ಪಂದವನ್ನು ರದ್ದು ಮಾಡಲು ಕೋರಲಾಗಿತ್ತು. ಈ ಬಗ್ಗೆ ಅದಾನಿ ಗ್ರೂಪ್ ನವರು ಒಪ್ಪಂದ ಜಾರಿ ಆಗಿಲ್ಲವೆಂಬ ಹೇಳಿಕೆಯನ್ನು ಕೂಡ ಪ್ರಸ್ತಾಪಿಸಲಾಗಿತ್ತು.


ತೀರ್ಪು

ಅದಾನಿ ಮತ್ತು ಈಸ್ಟ್ ಹೋಪ್ ಗ್ರೂಪ್ ನಡುವೆ ೨೦೧೭ರಲ್ಲಿ ೩೦೦ ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಳ್ಳಲಾಗಿತ್ತಾದರೂ ಅದು ಜಾರಿಗೆ ಬರಲಿಲ್ಲ. ಈ ಬಗ್ಗೆ ಅದಾನಿ ಸಂಸ್ಥೆ ಅವರು ೨೦೨೦ ರಲ್ಲಿ ಹೇಳಿಕೆಯನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಆದ್ದರಿಂದ ಚೀನಾ ಇಂಡಿಯಾ ನಡುವೆ ಈಗ ಆಗಿರುವ ಘರ್ಷಣೆ ಜೊತೆ ಹಳೆಯ ವ್ಯಾವಹಾರಿಕ ಒಪ್ಪಂದವನ್ನು ತಳಕು ಹಾಕುವುದು ಸರಿಯಲ್ಲ ಎಂದು ಹೇಳಬಹುದು.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ