ಮುಖಪುಟ ಚೀನಾದ ಪ್ರವಾಸೋದ್ಯಮ ಆಚರಣೆಯ ವೀಡಿಯೋವೊಂದನ್ನು ಕೇರಳದ ದೀಪೋತ್ಸವದ್ದೆಂದು ವೈರಲ್ ಮಾಡಲಾಗಿದೆ

ಚೀನಾದ ಪ್ರವಾಸೋದ್ಯಮ ಆಚರಣೆಯ ವೀಡಿಯೋವೊಂದನ್ನು ಕೇರಳದ ದೀಪೋತ್ಸವದ್ದೆಂದು ವೈರಲ್ ಮಾಡಲಾಗಿದೆ

ಮೂಲಕ: ಅಂಕಿತಾ ಕುಲಕರ್ಣಿ

ಡಿಸೆಂಬರ್ 5 2022

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಚೀನಾದ ಪ್ರವಾಸೋದ್ಯಮ ಆಚರಣೆಯ ವೀಡಿಯೋವೊಂದನ್ನು ಕೇರಳದ ದೀಪೋತ್ಸವದ್ದೆಂದು ವೈರಲ್ ಮಾಡಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೈರಲ್‌ ವೀಡಿಯೋ ಕೇರಳದ ದೀಪೋತ್ಸವದ್ದಲ್ಲ. ಇದು ಚೀನಾದ ಯುಲಾಂಗ್ ನದಿಯಲ್ಲಿ ನಡೆದ ಪ್ರವಾಸೋದ್ಯಮ ದಿನಾಚರಣೆ.


ಸಂದರ್ಭ 

ನದಿಯಲ್ಲಿ ದೀಪದಿಂದ ಅಲಂಕರಿಸಲ್ಪಟ್ಟ ಹಡಗುಗಳು ನಿರ್ದಿಷ್ಟ ಲಯದಲ್ಲಿ ತೇಲುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 20 ಸೆಕೆಂಡುಗಳ ಕ್ಲಿಪ್‌ನಲ್ಲಿ, ಹಡಗುಗಳು ಝಿಗ್ ಝಾಗ್ ಆಕಾರದಲ್ಲಿ ಅಥವಾ ಡ್ರ್ಯಾಗನ್ ಅಂತೇ ಕಾಣುವ ರೀತಿಯಲ್ಲಿ ಚಲಿಸುತ್ತಿರುವದನ್ನು ನೋಡಬಹುದು. ಹೀಗೆ ಟ್ವಿಟ್ಟರ್ ಪೋಷ್ಟ್ ಒಂದರ ಶೀರ್ಷಿಕೆಯಲ್ಲಿ ಈ ವೀಡಿಯೋ "ಕೇರಳದಲ್ಲಿ ೨೫೦ ಹಡಗುಗಳಿಂದ ನದಿಯಲ್ಲಿ ಶ್ರೀ ಇಂದಿರಾ ಕಾರ್ತೀಕ ದಾಮೋದರ ದೀಪೋತ್ಸವ." ಎಂದು ಹೇಳಿಕೊಳ್ಳಲಾಗಿದೆ. ಈ ವೀಡಿಯೋ ಯೂಟ್ಯೂಬ್‌(YouTube) ನಲ್ಲೂ ಸಹ ಹರಿದಾಡುತ್ತಿದ್ದು, ಕೇರಳದ ದೀಪೋತ್ಸವ ಎಂದು ವಿವರಿಸಿದ್ದಾರೆ. ಆದರೆ ವೈರಲ್ ಆಗಿರುವ ವೀಡಿಯೋ ಕೇರಳದ್ದಲ್ಲ ಬದಲಾಗಿ ಚೀನಾದ ಯುಲಾಂಗ್ ನದಿಯಲ್ಲಿ ನಡೆದ ಆಚರಣೆಯನ್ನು ಬಿಂಬಿಸುತ್ತದೆ.


ವಾಸ್ತವವಾಗಿ

ಇದರ ನಿಜಾಂಶವನ್ನು ಪರಿಶೀಲಿಸಲು ನಾವು, ವೈರಲ್ ವೀಡಿಯೋದಿಂದ ತೆಗೆದುಕೊಂಡಂತಹ ಕೀಫ್ರೇಮ್‌ಗಳೊಂದಿಗೆ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಇದರಿಂದ ನಮಗೆ ಈ ವೀಡಿಯೋ ಭಾರತಕ್ಕೆ ಸಂಬಂಧಪಟ್ಟಿಿಲ್ಲವೆಂದು ತಿಳಿದು ಬರತ್ತದೆ. ಈ ಕ್ಲಿಪ್ ದಕ್ಷಿಣ ಚೀನಾದ ಗುವಾಂಗ್ಸಿ ಜುವಾಂಗ್ ಪ್ರದೇಶದಲ್ಲಿರುವ ಯುಲಾಂಗ್ ನದಿಯಿಂದ ತೆಗೆದ ದೃಶ್ಯ. 


ಆಗಸ್ಟ್ ೨೯, ೨೦೨೨ ರಂದು ಹಂಚಿಕೊಂಡ ಒಂದು ಟ್ವಿಟ್ಟರ್ ಪೋಷ್ಟ್ ಲಭ್ಯವಾಗಿದೆ. ವೈರಲ್ ವೀಡಿಯೋವನ್ನು ಒಳಗೊಂಡ ಪೋಷ್ಟ್ ನ ಶೀರ್ಷಿಕೆ, "ಇದು ೮೮ ಬಿದಿರಿನ ರಾಫ್ಟ್‌ಗಳನ್ನು ಒಳಗೊಂಡಿರುವ "ಗೋಲ್ಡನ್ ಡ್ರ್ಯಾಗನ್" ದಕ್ಷಿಣ ಚೀನಾದ ಯುಲಾಂಗ್ ನದಿಯಲ್ಲಿ ನೌಕಾಯಾನ ಮಾಡುವುದನ್ನು ಗುರುತಿಸುತ್ತದೆ. ಚೀನೀ ಡ್ರ್ಯಾಗನ್‌ಗಳು ಸಾಂಪ್ರದಾಯಿಕವಾಗಿ; ಕರುಣೆ ಮತ್ತು ವೈಭವದ ಶಕ್ತಿಯನ್ನು ಸಂಕೇತಿಸುತ್ತದೆ ಹಾಗು ನೀರು, ಮಳೆ, ಚಂಡಮಾರುತ ಮತ್ತು ಪ್ರವಾಹವನ್ನು ತಡೆಹಿಡಿಯುವ ಶಕ್ತಿಯನ್ನು ಪ್ರತಿನಿಧಿಸುತ್ತದೆ." (ಟರ್ಕಿಶ್ ಭಾಷೆಯಿಂದ ಅನುವಾದಿಸಲಾಗಿದೆ)  


ಸ್ಥಳೀಯ ಸುದ್ದಿ ವಾಹಿನಿಯಾದ ನ್ಯೂ ಚೀನಾ ಟಿವಿಯಿಂದ ಅಪ್ಲೋಡ್ ಮಾಡಲಾದ ಯೂಟ್ಯೂಬ್‌ ವೀಡಿಯೋ ಅದೇ ರೀತಿಯ ಹಡಗುಗಳ ರಚನೆಯನ್ನು ಒಳಗೊಂಡಿದೆ ಆದರೆ ವಿಭಿನ್ನ ಕೋನದಿಂದ ಚಿತ್ರೀಕರಿಸಲಾಗಿದೆ. ವೀಡಿಯೋ ವಿವರಣೆಯು ಹೀಗಿದೆ, "ದಕ್ಷಿಣ ಚೀನಾದ ಗುವಾಂಗ್ಸಿಯಲ್ಲಿ ನದಿಯ ಉದ್ದಕ್ಕೂ ದೀಪದಿಂದ ಬೆಳಗಿಸಿದ ದೋಣಿಗಳು ಡ್ರ್ಯಾಗನ್ ಆಕಾರದಲ್ಲಿ ವಿಹಾರ ಮಾಡಿದವು. ಇದು ಪ್ರವಾಸಿಗರನ್ನು ಆಕರ್ಷಿಸಲು ಸ್ಥಳೀಯ ಅಧಿಕಾರಿಗಳು ಆಯೋಜಿಸಿದ ಲ್ಯಾಂಟರ್ನ್ ಬೋಟ್ ಮೆರವಣಿಗೆಯಾಗಿದೆ." 


ಇದರಂತೆಯೇ ಗುವಾಂಗ್ಸಿಯ ಸರ್ಕಾರಿ ವೆಬ್‌ಸೈಟ್‌ನಲ್ಲಿಯೂ ಸಹ ಈ ಆಚರಣೆಯ ಬಗ್ಗೆ ಮಾಹಿತಿಯನ್ನು ಕಾಣಬಹುದು. ಇದರ ಪ್ರಕಾರ ಮೇ ೧೯, ೨೦೨೨ ರಂದು, ೮೦ ಬಿದಿರಿನ ರಾಫ್ಟ್‌ಗಳು ಗೋಲ್ಡನ್ ಲೈಟ್‌ಗಳೊಂದಿಗೆ ೭೦-ಮೀಟರ್ ಡ್ರ್ಯಾಗನ್ ನೌಕಾಯಾನವನ್ನು ಬೈಶಾ ಪಟ್ಟಣದ ಯುಲಾಂಗ್ ಗ್ರಾಮದ ಗುಯಿಲಿನ್, ಗುವಾಂಗ್ಸಿ ಜುವಾಂಗ್ ಎಂಬ ಹಳ್ಳಿಯಲ್ಲಿ ಈ ಕಾರ್ಯಕ್ರಮವು ಆಯೋಜಿಸದ್ದು, ಇದು ಚೀನಾದ ೧೨ ನೇ ಪ್ರವಾಸೋದ್ಯಮ ದಿನದ ಸಂಭ್ರಮವಾಗಿತ್ತು ಎಂದು ವಿವರಿಸಿದೆ.


ಅದಲ್ಲದೆ, ವೈರಲ್ ವೀಡಿಯೊದಲ್ಲಿ ಉಲ್ಲೇಖಿಸಿದಂತೆ ದೇವಾಲಯದ ಹೆಸರನ್ನು ಹುಡುಕಿದಾಗ, "ಮಹಾಂಕಾಳೇಶ್ವರ ದೇವಾಲಯ, ಮೀರಲಂ ಮಂಡಿ" ಹೈದರಾಬಾದ್‌ನಲ್ಲಿದೆ ಎಂದು ನಾವು ಕಂಡುಕೊಂಡಿದ್ದೇವೆ. ಪೋಷ್ಟ್ ನಲ್ಲಿ ಹೇಳಿಕೊಂಡಂತೆ ದೇವಾಲಯದ ನಿಜವಾದ ಸ್ಥಳ ಕೇರಳದಲ್ಲಿಲ್ಲ. ಈ ವೀಡಿಯೋ ಭಾರತಕ್ಕೆ ಸಂಬಂಧಿಸಿಲ್ಲ ಹಾಗು ಕೇರಳದಲ್ಲಿ ಆಚರಿಸಿದ ದೀಪೋತ್ಸವ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.   


ತೀರ್ಪು 

ಚೀನಾದ ಪ್ರವಾಸೋದ್ಯಮ ದಿನಾಚರಣೆಯ ವೀಡಿಯೋವನ್ನು ಕೇರಳದಲ್ಲಿ ದೀಪಾವಳಿ/ದೀಪೋತ್ಸವ ಆಚರಣೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಪ್ರತಿಪಾದನೆ ಅನ್ನು ತಪ್ಪು ಎಂದು ಗುರುತಿಸಿದ್ದೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ