ಮುಖಪುಟ ರೈತರ ಪ್ರತಿಭಟನೆಗಳನ್ನು ಬೆಂಬಲಿಸಲು ನಡೆಸಿದ ೨೦೨೧ ರ ಟ್ರಾಕ್ಟರ್ ರ‍್ಯಾಲಿಯ ವೀಡಿಯೋವನ್ನು ಕುಸ್ತಿಪಟುಗಳ ಪ್ರತಿಭಟನೆಯೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ರೈತರ ಪ್ರತಿಭಟನೆಗಳನ್ನು ಬೆಂಬಲಿಸಲು ನಡೆಸಿದ ೨೦೨೧ ರ ಟ್ರಾಕ್ಟರ್ ರ‍್ಯಾಲಿಯ ವೀಡಿಯೋವನ್ನು ಕುಸ್ತಿಪಟುಗಳ ಪ್ರತಿಭಟನೆಯೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಮೂಲಕ: ವಿವೇಕ್ ಜೆ

ಜೂನ್ 23 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ರೈತರ ಪ್ರತಿಭಟನೆಗಳನ್ನು ಬೆಂಬಲಿಸಲು ನಡೆಸಿದ ೨೦೨೧ ರ ಟ್ರಾಕ್ಟರ್ ರ‍್ಯಾಲಿಯ ವೀಡಿಯೋವನ್ನು ಕುಸ್ತಿಪಟುಗಳ ಪ್ರತಿಭಟನೆಯೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಇದು ೨೦೨೧ ರಲ್ಲಿ ಕೇಂದ್ರ ಸರ್ಕಾರವು ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವುದನ್ನು ಖಂಡಿಸಿ ಕೇರಳದಲ್ಲಿ ನಡೆದ ಟ್ರಾಕ್ಟರ್ ರ‍್ಯಾಲಿಯ ವೀಡಿಯೋ ಆಗಿದೆ.

ಸಂದರ್ಭ

ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪದ ಮೇಲೆ ಭಾರತದ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ಪ್ರತಿಭಟಿಸಿ ಭಾರತೀಯ ಕುಸ್ತಿಪಟುಗಳು ಏಪ್ರಿಲ್ ೨೦೨೩ ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಸಿಂಗ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿ, ಕುಸ್ತಿಪಟುಗಳು ರೈತಸಂಘ ಮೊದಲಾದ ಇತರ ಸಂಘಗಳ ಬೆಂಬಲ ಕೇಳಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ, ಕೆಲವು ಹಳೆಯ ವೀಡಿಯೋಗಳು ಮತ್ತು ಚಿತ್ರಗಳು ಈಗ ನಡೆಯುತ್ತಿರುವ ಪ್ರತಿಭಟನೆಗಳದ್ದೆಂದು ತೋರುವಂತೆ ಹಂಚಿಕೊಳ್ಳಲಾಗಿವೆ. ಅಂತಹ ಒಂದು ವೀಡಿಯೋ ಕುಸ್ತಿಪಟುಗಳನಡೆಸುತ್ತಿರುವ ಪ್ರತಿಭಟನೆಯ ಭಾಗವಾಗಿ ಭಾರತೀಯ ಧ್ವಜಗಳನ್ನು ಹೊಂದಿರುವ ಟ್ರಾಕ್ಟರ್‌ಗಳನ್ನು ತೋರಿಸುವಂತೆ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಪೋಷ್ಟ್ ನ ಶೀರ್ಷಿಕೆ ಹೀಗಿದೆ: "ನಿಮ್ಮ ಹೆಣ್ಣುಮಕ್ಕಳಿಗೆ ನ್ಯಾಯವನ್ನು ಪಡೆಯಲು ಟ್ರ್ಯಾಕ್ಟರ್‌ನೊಂದಿಗೆ ದೆಹಲಿಗೆ ನಡೆಯಿರಿ" ಮತ್ತು ಮಹಿಳಾ ಕುಸ್ತಿಪಟುಗಳಾದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಈ ಪೋಷ್ಟ್ 4,೦೦೦ ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರು ಇದು ರೈತರು ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಸೇರುವುದನ್ನು ತೋರಿಸಿದೆ ಎಂದು ಹೇಳಿಕೊಂಡು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋವನ್ನು ದೆಹಲಿಯ ಪ್ರದೇಶ್ ಯುವ ಕಾಂಗ್ರೆಸ್‌ನ ಅಧಿಕೃತ ಫೇಸ್‌ಬುಕ್ ಖಾತೆಯಿಂದಲೂ ಹಂಚಿಕೊಳ್ಳಲಾಗಿದೆ.

ದೆಹಲಿಯ ಜಂತರ್ ಮಂತರ್‌ನಲ್ಲಿ ರೈತರು ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರೂ, ಭಾರತೀಯ ಧ್ವಜಗಳನ್ನು ಹೊಂದಿರುವ ಟ್ರ್ಯಾಕ್ಟರ್‌ಗಳನ್ನು ತೋರಿಸುವ ವೈರಲ್ ವೀಡಿಯೋ ಲೈಂಗಿಕ ಕಿರುಕುಳದ ವಿರುದ್ಧ ನಡೆಯುತ್ತಿರುವ ಪ್ರಸ್ತುತ ಪ್ರತಿಭಟನೆಗೆ ಸಂಬಂಧಿಸಿಲ್ಲ.

ವಾಸ್ತವವಾಗಿ

ಕುಸ್ತಿಪಟುಗಳ ಪ್ರತಿಭಟನೆಯನ್ನು ಬೆಂಬಲಿಸಿ ಟ್ರ್ಯಾಕ್ಟರ್ ಮೆರವಣಿಗೆಯನ್ನು ತೋರಿಸಿರುವ ವೈರಲ್ ವೀಡಿಯೋ ಮಲಯಾಳಂ ಭಾಷೆಯ ಸುದ್ದಿ ವಾಹಿನಿಯಾದ ಮನೋರಮಾ ನ್ಯೂಸ್ ಚಾನೆಲ್ ಲೋಗೋವನ್ನು ಹೊಂದಿರುವುದನ್ನು ನಾವು ಗಮನಿಸಿದ್ದೇವೆ. ಆದರೆ, ಕುಸ್ತಿಪಟುಗಳ ಪ್ರತಿಭಟನೆಯ ಸಂದರ್ಭದಲ್ಲಿ ಟ್ರ್ಯಾಕ್ಟರ್ ಮೆರವಣಿಗೆಯ ಅಂತಹ ದೃಶ್ಯಗಳನ್ನು ಚಾನಲ್ ಪ್ರಸಾರ ಮಾಡಿಲ್ಲ.

ಹೆಚ್ಚಿನ ಪರೀಕ್ಷೆಯ ನಂತರ, ಮನೋರಮಾ ನ್ಯೂಸ್‌ನ ಯೂಟ್ಯೂಬ್ ವೀಡಿಯೋ ೦:೪೬ ಮತ್ತು ೧:೪೫ ಟೈಮ್ ಸ್ಟ್ಯಾಂಪ್ ಗಳ ನಡುವಿನ ವೈರಲ್ ವೀಡಿಯೋದಂತೆಯೇ ದೃಶ್ಯಗಳನ್ನು ಹೊಂದಿದೆ ಎಂದು ನಾವು ಕಂಡುಕೊಂಡಿದ್ದೇವೆ. ಆದರೆ, ಪ್ಲೇಬ್ಯಾಕ್ ವೇಗವನ್ನು ಹೆಚ್ಚಿಸಲು ವೈರಲ್ ವೀಡಿಯೋವನ್ನು ಸಂಪಾದಿಸಲಾಗಿದೆ ಮತ್ತು ವಿಭಿನ್ನ ಆಡಿಯೊ ಟ್ರ್ಯಾಕ್ ಅನ್ನು ಬಳಸಲಾಗಿದೆ. ೨೦೨೧ ರಲ್ಲಿ ಪ್ರಕಟವಾದ ಯೂಟ್ಯೂಬ್ ವೀಡಿಯೋದಲ್ಲಿನ ಮಲಯಾಳಂ ವಿವರಣೆಯ ಕನ್ನಡ ಅನುವಾದವು "ರೈತರ ಹೋರಾಟದೊಂದಿಗೆ ಐಕಮತ್ಯ; ಶಾಫಿ ಪರಂಬಿಲ್ ನೇತೃತ್ವದಲ್ಲಿ ಕಿಸಾನ್ ಮಾರ್ಚ್" ಎಂದು ಹೇಳಲಾಗಿದೆ. ಈ ವೀಡಿಯೋ ಕೇಂದ್ರ ಸರ್ಕಾರದ ಮೂರು ಹೊಸಾ ಕೃಷಿ ಕಾನೂನುಗಳ ವಿರುದ್ಧ ದೆಹಲಿಯಲ್ಲಿನ ರೈತರ ಪ್ರತಿಭಟನೆಯನ್ನು ಬೆಂಬಲಿಸುವ ರ‍್ಯಾಲಿಯದ್ದು ಎಂದು ಸ್ಪಷ್ಟವಾಗಿದೆ. 

ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಜನವರಿ ೨೦೨೧ ರಲ್ಲಿ ಫೇಸ್‌ಬುಕ್‌ನಲ್ಲಿ ಮತ್ತೊಂದು ವೀಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ, ಅದು ವೈರಲ್ ವೀಡಿಯೋದಂತೆಯೇ ಅದೇ ತುಣುಕನ್ನು ಹೊಂದಿದೆ. ಅದರ ಮಲಯಾಳಂ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ: ''ಜೈ ಕಿಸಾನ್ ಅನ್ನದಾತರ ಹೋರಾಟಕ್ಕೆ ಒಗ್ಗಟ್ಟು ಯುವ ಕಾಂಗ್ರೆಸ್ ಜೈ ಕಿಸಾನ್ ಮಾರ್ಚ್ ಪಾಲಕ್ಕಾಡ್'' ಎಂದು ಹೇಳುತ್ತದೆ. 

ಜನವರಿ ೩, ೨೦೨೧ ರಂದು ಕೇರಳದಲ್ಲಿ ಯುವ ಕಾಂಗ್ರೆಸ್ ನಡೆಸಿದ ಜೈ ಕಿಸಾನ್ ಮಾರ್ಚ್ ಕಾರ್ಯಕ್ರಮವನ್ನು ಕುರಿತು ಮಲಯಾಳಂ ಭಾಷೆಯ ಚಾನೆಲ್ ಮೀಡಿಯಾ ಒನ್ ಟಿವಿ ವರದಿ ಮಾಡಿದೆ. ಟ್ರಾಕ್ಟರ್ ರ‍್ಯಾಲಿಯ ಸ್ತಬ್ಧಚಿತ್ರವನ್ನು ಹೊತ್ತ ಈ ವರದಿಯು, ಈ ಕಾರ್ಯಕ್ರಮವು ರೈತರ ಪ್ರತಿಭಟನೆಯನ್ನು ಬೆಂಬಲಿಸಲು ನಡೆಸಲಾಯಿತು ಮತ್ತು ಕೇರಳದ ಕುಜಲಮಂದಂನಿಂದ ಪಾಲಕ್ಕಾಡ್‌ಗೆ ಟ್ರ್ಯಾಕ್ಟರ್ ಮೆರವಣಿಗೆಯನ್ನು ನಡೆಸಲಾಗಿತ್ತು ಎಂದು ಹೇಳಿಕೊಂಡಿದೆ. ಕೇರಳ ಯೂತ್ ಕಾಂಗ್ರೆಸ್‌ನ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅಲ್ಲಿನ ವಿಧಾನಸಭೆಯ ಸದಸ್ಯ ಶಾಫಿ ಪರಂಬಿಲ್ ಅವರು ೨೦೨೧ ರಲ್ಲಿ ಜೈ ಕಿಸಾನ್ ಮಾರ್ಚ್ ಅನ್ನು ಪ್ರದರ್ಶಿಸುವ ಫೇಸ್‌ಬುಕ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಏಳು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಭಾರತದ ಮಹಿಳಾ ಕುಸ್ತಿಪಟುಗಳು ಏಪ್ರಿಲ್ ೨೩ ರಿಂದ ಸಿಂಗ್ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ೭ ಮಹಿಳಾ ಕುಸ್ತಿಪತ್ತುಗಳಲ್ಲಿ ಒಬ್ಬರು ೧೮ ವಯಸ್ಸಿನ ಒಳಗೆ ಇದ್ದವರು. ದೆಹಲಿ ಪೊಲೀಸರು ಕೆಲವು ದಿನಗಳ ನಂತರ ಕುಸ್ತಿ ಫೆಡರೇಶನ್ ಅಧ್ಯಕ್ಷರ ವಿರುದ್ಧ ಎರಡು ಎಫ್‌ಐಆರ್‌ ಗಳನ್ನು ದಾಖಲಿಸಿದ್ದಾರೆ.

ತೀರ್ಪು

ವೈರಲ್ ವೀಡಿಯೋದಲ್ಲಿ ಕೇರಳದಲ್ಲಿ ಶಾಸಕ ಶಾಫಿ ಪರಂಬಿಲ್ ಆಯೋಜಿಸಿದ್ದ ೨೦೨೧ ರ ಟ್ರಾಕ್ಟರ್ ರ‍್ಯಾಲಿಯನ್ನು ತೋರಿಸುತ್ತದೆ. ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಲು ಮೆರವಣಿಗೆಯನ್ನು ಕೈಗೊಳ್ಳಲಾಗಿತ್ತು. ಆದ್ದರಿಂದ ಈ ವೈರಲ್ ವೀಡಿಯೋ ಇತ್ತೀಚಿನ ಕುಸ್ತಿಪಟುಗಳ ಪ್ರತಿಭಟನೆಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟವಾಗಿದೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ