ಮುಖಪುಟ ೨೦೧೮ ರ ವೈಜಾಗ್ ವಿಮಾನ ನಿಲ್ದಾಣದಲ್ಲಿ ಸೇರಿದ ಜನಸಂದಣಿಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿಗಳನ್ನು ಸ್ವಾಗತಿಸುವಾಗ ಲಂಡನ್‌ನಲ್ಲಿ ಕಂಡ ದೃಶ್ಯವೆಂದು ಹಂಚಿಕೊಳ್ಳಲಾಗಿದೆ

೨೦೧೮ ರ ವೈಜಾಗ್ ವಿಮಾನ ನಿಲ್ದಾಣದಲ್ಲಿ ಸೇರಿದ ಜನಸಂದಣಿಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿಗಳನ್ನು ಸ್ವಾಗತಿಸುವಾಗ ಲಂಡನ್‌ನಲ್ಲಿ ಕಂಡ ದೃಶ್ಯವೆಂದು ಹಂಚಿಕೊಳ್ಳಲಾಗಿದೆ

ಮೂಲಕ: ರಾಜೇಶ್ವರಿ ಪರಸ

ಸೆಪ್ಟೆಂಬರ್ 19 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
೨೦೧೮ ರ ವೈಜಾಗ್ ವಿಮಾನ ನಿಲ್ದಾಣದಲ್ಲಿ ಸೇರಿದ ಜನಸಂದಣಿಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿಗಳನ್ನು ಸ್ವಾಗತಿಸುವಾಗ ಲಂಡನ್‌ನಲ್ಲಿ ಕಂಡ ದೃಶ್ಯವೆಂದು ಹಂಚಿಕೊಳ್ಳಲಾಗಿದೆ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಯೂಟ್ಯೂಬ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ವೈಜಾಗ್ ವಿಮಾನ ನಿಲ್ದಾಣದ ೨೦೧೮ ರ ಹಳೆಯ ವೀಡಿಯೋವನ್ನು ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಯವರನ್ನು ಲಂಡನ್‌ನಲ್ಲಿ ಸ್ವಾಗತಿಸಿಕೊಂಡ ದೃಶ್ಯಗಳೆಂದು ಹಂಚಿಕೊಳ್ಳಲಾಗಿದೆ.

ಇಲ್ಲಿನ ಹೇಳಿಕೆ ಏನು?

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಸೆಪ್ಟೆಂಬರ್ ೨ ರಂದು ತಮ್ಮ ಪತ್ನಿ ವೈ ಎಸ್ ಭಾರತಿ ರೆಡ್ಡಿ ಅವರೊಂದಿಗೆ ತಮ್ಮ ಪುತ್ರಿಯರನ್ನು ಭೇಟಿ ಮಾಡಲು ಲಂಡನ್‌ಗೆ ಭೇಟಿ ನೀಡಿದ್ದರು. ದಿ ನ್ಯೂಸ್ ಮಿನಿಟ್‌ನ ವರದಿಯ ಪ್ರಕಾರ, ಮುಖ್ಯಮಂತ್ರಿ ಹತ್ತು ದಿನಗಳ ನಂತರ ತಮ್ಮ ಪ್ರವಾಸದಿಂದ ಮರಳಿದರು. ಈ ಹಿನ್ನಲೆಯಲ್ಲಿ ಸಿಎಂ ಜಗನ್‌ಗೆ ಲಂಡನ್‌ನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ ಎಂಬ ಹೇಳಿಕೆ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಮೂಲತಃ ತೆಲುಗಿನಲ್ಲಿ ಬರೆಯಲಾದ ಎಕ್ಸ್‌ (ಹಿಂದೆ ಟ್ವಿಟರ್) ನಲ್ಲಿ ಅಂತಹ ಒಂದು ಪೋಷ್ಟ್ ಹೀಗಿದೆ: “ಆಂಧ್ರ ಸಿಎಂ ಜಗನ್ ಗೆ ಕೇವಲ ಆಂಧ್ರದಲ್ಲಿ ಮಾತ್ರ ಅಭಿಮಾನಿಗಳಿದ್ದರೆ ಎಂದು ನಾವು ಭಾವಿಸಿದ್ದೇವೆ ಆದರೆ ಇದು ಲಂಡನ್‌ನಲ್ಲಿ ಹೆಚ್ಚು ಇದೆ ಎಂದು  ಅನಿಸುತ್ತದೆ. ಲಂಡನ್‌ನಲ್ಲಿ ಸಹೋದರ ಜಗನ್ ಅವರಿಗೆ ತೆಲುಗು ನಾಡಿನಿಂದ ಅದ್ದೂರಿ ಸ್ವಾಗತ ನೀಡಲಾಯಿತು. (sic)” ಈ ಪೋಷ್ಟ್ ಅನ್ನು ವೀಡಿಯೋದೊಂದಿಗೆ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಜಗನ್ ಮೋಹನ್ ರೆಡ್ಡಿ ಯಂತೆ ಕಾಣುವ ವ್ಯಕ್ತಿಯೊಬ್ಬರನ್ನು ಸ್ವಾಗತಿಸುತ್ತಿದ್ದಾರೆ ಮತ್ತು ಅವರು ಕಾರನ್ನು ಪ್ರವೇಶಿಸುವ ಮುನ್ನ ಅಲ್ಲಿ ನೆರೆದ ಕೆಲವರಿಗೆ ನಮಸ್ಕರಿಸುವುದನ್ನು ನೋಡಬಹುದು. ಪೋಷ್ಟ್ ನ ಆರ್ಕೈವ್ ಲಿಂಕ್ ಅನ್ನು ಇಲ್ಲಿ  ಕಾಣಬಹುದು.

ಯೂಟ್ಯೂಬ್ ನಂತಹ ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಇದೇ ರೀತಿಯ ಹೇಳಿಕೆಗಳನ್ನು ಮಾಡಲಾಗಿದೆ. ಪೋಷ್ಟ್ ಗಳ ಆರ್ಕೈವ್ ಮಾಡಿದ ಲಿಂಕ್‌ಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಯೂಟ್ಯೂಬ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಸತ್ಯ ಏನು?

ಲಾಜಿಕಲಿ ಫ್ಯಾಕ್ಟ್ಸ್ ವೀಡಿಯೋವನ್ನು ನಿಕಟವಾಗಿ ಗಮನಿಸಿದೆ ಮತ್ತು ಕೆಲವು ವ್ಯತ್ಯಾಸಗಳನ್ನು ಕಂಡುಕೊಂಡಿದ್ದು, ಇದು ವೀಡಿಯೋ ಲಂಡನ್‌ ನದ್ದಲ್ಲ ಎಂದು ಸೂಚಿಸುತ್ತದೆ. ವಿಮಾನ ನಿಲ್ದಾಣವನ್ನು ಹೋಲುವ ಪ್ರದೇಶದಲ್ಲಿ ಜನಸಮೂಹವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಪೊಲೀಸ್ ಸಿಬ್ಬಂದಿಯನ್ನು ಗಮನಿಸಬಹುದು. ಅವರು ಭಾರತೀಯ ಪೊಲೀಸ್ ಸಿಬ್ಬಂದಿ ಧರಿಸುವ ರೀತಿಯ ಖಾಕಿ ಸಮವಸ್ತ್ರವನ್ನು ಧರಿಸಿದ್ದಾರೆ. ಆದರೆ, ಸಿಟಿ ಆಫ್ ಲಂಡನ್ ಪೊಲೀಸ್‌ನ ಫೇಸ್‌ಬುಕ್ ಪುಟದಲ್ಲಿ ನೋಡಿದಂತೆ, ಲಂಡನ್ ಪೊಲೀಸರು ಕಪ್ಪು ಸಮವಸ್ತ್ರವನ್ನು ಧರಿಸುತ್ತಾರೆ.

ವೈರಲ್  ವೀಡಿಯೋದಲ್ಲಿ ಆಂಧ್ರ ಪೊಲೀಸ್ ಸಮವಸ್ತ್ರ ಮತ್ತು ಲಂಡನ್‌ನಲ್ಲಿರುವ ಪೊಲೀಸ್ ಸಮವಸ್ತ್ರದ ನಡುವಿನ ಹೋಲಿಕೆ. (ಮೂಲ: ಎಕ್ಸ್‌/ಫೇಸ್‌ಬುಕ್‌/ಸಿಟಿ ಆಫ್ ಲಂಡನ್ ಪೊಲೀಸ್/ಸ್ಕ್ರೀನ್‌ಶಾಟ್)

ನವೆಂಬರ್ ೧೧, ೨೦೧೮ ರಂದು ಯೂಟ್ಯೂಬ್‌ನಲ್ಲಿ ‘ಸಿನಿಮಾ ಪಾಲಿಟಿಕ್ಸ್’ ಅಪ್‌ಲೋಡ್ ಮಾಡಿದ ಇದೇ ರೀತಿಯ ವೀಡಿಯೋವನ್ನು ನಾವು ಕಂಡುಕೊಂಡೆವು. ವೀಡಿಯೋ ಶೀರ್ಷಿಕೆಯು, “ವೈಜಾಗ್ ಏರ್‌ಪೋರ್ಟ್ ನಂತರ ಘಟನೆಯ ನಂತರ ವೈಎಸ್ ಜಗನ್ ಅವರಿಗೆ ಭವ್ಯ ಸ್ವಾಗತ” ಎಂದು ಬರೆಯಲಾಗಿದೆ. ಈ ವೀಡಿಯೋ ಮತ್ತು ವೈರಲ್ ಆಗುತ್ತಿರುವ ವೀಡಿಯೋದ ನಡುವೆ ನಾವು ಹಲವಾರು ಸಾಮ್ಯತೆಗಳನ್ನು ಕಂಡುಕೊಂಡಿದ್ದೇವೆ - ಖಾಕಿಯಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಪೊಲೀಸರು, ಬಿಳಿ ಶರ್ಟ್‌ನಲ್ಲಿ ಕಪ್ಪು ವಾಹನವನ್ನು ಪ್ರವೇಶಿಸುತ್ತಿರುವ ಸಿಎಂ ಜಗನ್ ಮತ್ತು ಹಿನ್ನಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಯೋನೋ ಅಪ್ಲಿಕೇಶನ್‌ನ ಹೋರ್ಡಿಂಗ್.


ವೈರಲ್ ವೀಡಿಯೋ ಮತ್ತು ೨೦೧೮ ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೋ ನಡುವಿನ ಹೋಲಿಕೆ. (ಮೂಲ: ಎಕ್ಸ್‌/ಯೂಟ್ಯೂಬ್/ಸ್ಕ್ರೀನ್‌ಶಾಟ್‌ಗಳು) 

ಆ ಸಮಯದಲ್ಲಿ ವಿರೋಧ ಪಕ್ಷದ ಸದಸ್ಯರಾಗಿದ್ದ ಜಗನ್ ಮೋಹನ್ ರೆಡ್ಡಿ ಅವರು ವಿಶಾಖಪಟ್ಟಣಂ (ವೈಜಾಗ್ ಎಂದೂ ಕರೆಯುತ್ತಾರೆ) ವಿಮಾನ ನಿಲ್ದಾಣದಲ್ಲಿ ಚಾಕುವಿನಿಂದ ಹಲ್ಲೆಗೊಳಗಾದ ಕೆಲವು ದಿನಗಳ ನಂತರ ವೀಡಿಯೋವನ್ನು ಸೆರೆಹಿಡಿಯಲಾಗಿದೆ ಎಂದು ಹೆಚ್ಚಿನ ಸಂಶೋಧನೆಯು ತೋರಿಸಿದೆ. ದಿ ಹಿಂದೂ ವರದಿಯ ಪ್ರಕಾರ, ಅಕ್ಟೋಬರ್ ೨೫, ೨೦೧೮ ರಂದು, ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ವಿಮಾನ ನಿಲ್ದಾಣದ ರೆಸ್ಟೋರೆಂಟ್‌ನಲ್ಲಿ ಮಾಣಿಯೊಬ್ಬರು ಅವರ ಮೇಲೆ ಹಲ್ಲೆ ನಡೆಸಿದ್ದರು ಆ ಸಮಯದಲ್ಲಿ, ರಾಜಕಾರಣಿಯು ೨೦೧೯ ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತನ್ನ ಪ್ರಜಾ ಸಂಕಲ್ಪ ಯಾತ್ರೆಯ (ಪಾದಯಾತ್ರೆ) ಭಾಗವಾಗಿ ಆಂಧ್ರದಲ್ಲಿ ಪ್ರವಾಸ ಮಾಡುತ್ತಿದ್ದರು. ನ್ಯಾಯಾಲಯಕ್ಕೆ ಹಾಜರಾಗಲು ವೈಜಾಗ್‌ನಿಂದ ಹೈದರಾಬಾದ್‌ಗೆ ವಿಮಾನ ಹತ್ತುತ್ತಿದ್ದ ವೇಳೆ ದಾಳಿ ನಡೆಸಲಾಗಿತ್ತು. ಕೈಗೆ ಗಾಯಗಳಾಗಿದ್ದು, ಹೈದರಾಬಾದ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ನಂತರ, ಅವರು ನವೆಂಬರ್ ೧೨, ೨೦೧೮  ರಂದು ವೈಜಾಗ್‌ನಿಂದ ೬೬ ಕಿಲೋಮೀಟರ್ ದೂರದಲ್ಲಿರುವ ವಿಜಯನಗರದಿಂದ ಪಾದಯಾತ್ರೆಯನ್ನು ಪುನರಾರಂಭಿಸಿದ್ದರು. 

ತೀರ್ಪು

ಆಂಧ್ರ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಲಂಡನ್‌ನಲ್ಲಿ ಅದ್ದೂರಿ ಸ್ವಾಗತವನ್ನು ಸ್ವೀಕರಿಸಿದರು ಎಂದು ಹೇಳಲು ೨೦೧೮ ರ ಹಳೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ವೀಡಿಯೋವನ್ನು ವೈಜಾಗ್ ವಿಮಾನ ನಿಲ್ದಾಣದಲ್ಲಿ ಸೆರೆಹಿಡಿಯಲಾಗಿದೆ ಎಂದು ವರದಿಯಾಗಿದೆ, ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸುತ್ತೇವೆ.

ಅನುವಾದಿಸಿದವರು: ಅಂಕಿತಾ ಕುಲಕರ್ಣಿ 

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ