ಮುಖಪುಟ ಕ್ಯಾಮರಾದಲ್ಲಿ ನಟಿ ಕಾಜೋಲ್ ಬಟ್ಟೆ ಬದಲಾಯಿಸುತ್ತಿರುವುದನ್ನು ತೋರಿಸುತ್ತಿರುವ ವೈರಲ್ ವೀಡಿಯೋ ಡೀಪ್ ಫೇಕ್ ಆಗಿದೆ

ಕ್ಯಾಮರಾದಲ್ಲಿ ನಟಿ ಕಾಜೋಲ್ ಬಟ್ಟೆ ಬದಲಾಯಿಸುತ್ತಿರುವುದನ್ನು ತೋರಿಸುತ್ತಿರುವ ವೈರಲ್ ವೀಡಿಯೋ ಡೀಪ್ ಫೇಕ್ ಆಗಿದೆ

ಮೂಲಕ: ರಾಹುಲ್ ಅಧಿಕಾರಿ

ನವೆಂಬರ್ 20 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಕ್ಯಾಮರಾದಲ್ಲಿ ನಟಿ ಕಾಜೋಲ್ ಬಟ್ಟೆ ಬದಲಾಯಿಸುತ್ತಿರುವುದನ್ನು ತೋರಿಸುತ್ತಿರುವ ವೈರಲ್ ವೀಡಿಯೋ ಡೀಪ್ ಫೇಕ್ ಆಗಿದೆ ಬಾಲಿವುಡ್ ನಟಿ ಕಾಜೋಲ್ ಕ್ಯಾಮೆರಾ ಮುಂದೆ ಬಟ್ಟೆ ಬದಲಾಯಿಸುತ್ತಿರುವ ವೀಡಿಯೋವನ್ನು ಚಿತ್ರೀಕರಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಷ್ಟ್‌ಗಳು ಹೇಳುತ್ತವೆ. (ಮೂಲ: ಫೇಸ್‌ಬುಕ್/ಇನ್‌ಸ್ಟಾಗ್ರಾಮ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ವೈರಲ್ ವೀಡಿಯೋವನ್ನು ಕೃತಕ ಬುದ್ಧಿಮತ್ತೆ ಬಳಸಿ ಮಾಡಲಾಗಿದೆ. ಟಿಕ್‌ಟಾಕ್‌ನಲ್ಲಿ ಅಪ್‌ಲೋಡ್ ಮಾಡಲಾದ ಮೂಲ ವೀಡಿಯೋ, ಯುಕೆ ಮೂಲದ ಫ್ಯಾಶನ್ ಇನ್ಫ್ಲ್ಯೂಎನ್ಸರ್ ಅನ್ನು ಒಳಗೊಂಡಿದೆ.

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯ ಏರಿಕೆಯು ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿಯ ಆತಂಕಕಾರಿ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿದೆ. ಮಿಡ್‌ಜರ್ನಿ ಮತ್ತು ಇತರ ಫೇಸ್-ಸ್ವಾಪಿಂಗ್ ಪರಿಕರಗಳಂತಹ AI ಕಾರ್ಯಕ್ರಮಗಳು ಈಗ ಬಹಳ ಕಡಿಮೆ ಪ್ರಕ್ರಿಯೆ ಸಮಯದಲ್ಲಿ ಬಲವಾದ ಡೀಪ್‌ಫೇಕ್‌ಗಳನ್ನು ರಚಿಸಲು ಅನುಮತಿಸುತ್ತದೆ. ಕಳೆದ ವರ್ಷದಲ್ಲಿ, ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಮತ್ತು ಸಾಮಾನ್ಯವಾಗಿ ಜನರ ಡೀಪ್‌ಫೇಕ್ ವೀಡಿಯೋಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸಿವೆ. 

ಹೇಳಿಕೆ ಏನು?

ಬಾಲಿವುಡ್ ನಟಿ ಕಾಜೋಲ್ ಕ್ಯಾಮೆರಾ ಮುಂದೆ ಬಟ್ಟೆ ಬದಲಾಯಿಸುತ್ತಿರುವುದನ್ನು ತೋರಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 

ಹಲವಾರು ಬಳಕೆದಾರರು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ನಲ್ಲಿ ವೀಡಿಯೋವನ್ನು ಅದೇ ಹೇಳಿಕೆಯಲ್ಲಿ ಹಂಚಿಕೊಂಡಿದ್ದಾರೆ. ಫೇಸ್‌ಬುಕ್‌ನಲ್ಲಿ ಅಂತಹ ಒಂದು ಪೋಷ್ಟ್ ಬರೆಯುವ ಸಮಯದಲ್ಲಿ ೫,೨೦೦ ಲೈಕ್‌ಗಳು, ೧೦೮ ಕಾಮೆಂಟ್‌ಗಳು ಮತ್ತು ೯೦ ಶೇರ್‌ಗಳನ್ನು ಗಳಿಸಿದೆ. ಅಂತಹ ಒಂದು ಪೋಷ್ಟ್‌ನೊಂದಿಗೆ ಹಂಚಿಕೊಂಡ ಶೀರ್ಷಿಕೆಯು ಹೀಗಿದೆ: "#kajoldevgan ಉಡುಗೆ ಬದಲಾಯಿಸುವುದು." ಅಂತಹ ವೈರಲ್ ಪೋಷ್ಟ್‌ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಪೋಷ್ಟ್‌ ಗಳು. (ಮೂಲ: ಇನ್‌ಸ್ಟಾಗ್ರಾಮ್‌/ಫೇಸ್‌ಬುಕ್ /ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಈ ವೀಡಿಯೋ ಕಾಜೋಲ್ ಅನ್ನು ಒಳಗೊಂಡಿಲ್ಲ ಮತ್ತು ಯು.ಕೆ. ಮೂಲದ ಫ್ಯಾಶನ್ ಇನ್ಫ್ಲ್ಯೂಎನ್ಸರ್ ಪೋಷ್ಟ್ ಮಾಡಿದ ವೀಡಿಯೋದ ಡೀಪ್‌ಫೇಕ್ ಆವೃತ್ತಿಯಾಗಿದೆ. 

ನಾವು ಏನು ಕಂಡುಕೊಂಡಿದ್ದೇವೆ?

ನಾವು ವೈರಲ್ ವೀಡಿಯೋವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ್ದೇವೆ ಮತ್ತು ಡಿಜಿಟಲ್ ಪರಿಕರಗಳನ್ನು ಬಳಸಿಕೊಂಡು ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ನಂಬಲು ಕಾರಣವಾದ ಅಂಶವನ್ನು ನಾವು ಗಮನಿಸಿದ್ದೇವೆ. ವೀಡಿಯೋದ ಕೊನೆಯಲ್ಲಿ, ಮಹಿಳೆ ತನ್ನ ಬೂಟುಗಳನ್ನು ಧರಿಸಿರುವಾಗ ಒಂದು ಗ್ಲಿಚ್ ಅನ್ನು ಕಾಣಬಹುದು, ಒಂದು ಕಣ್ಣು ಮೇಲ್ಮುಖವಾಗಿ ನೋಡುತ್ತಿರುವಾಗ ಇನ್ನೊಂದು ಕೆಳಕ್ಕೆ ನೋಡುತ್ತಿದೆ (AI- ಮ್ಯಾನಿಪ್ಯುಲೇಟೆಡ್ ವೀಡಿಯೊಗಳ ಸಹಿ ಗುರುತು ಎಂದರೆ ಪರಿವರ್ತನೆಯ ಚೌಕಟ್ಟುಗಳಲ್ಲಿ ಕಣ್ಣುಗಳು ವಿಕಾರವಾಗಿ ಕಾಣುತ್ತವೆ).

ವೈರಲ್ ವೀಡಿಯೋದಿಂದ ತೆಗೆದ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ನಂತರ, ವೈರಲ್ ವೀಡಿಯೋದಿಂದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಮೂಲ ವೀಡಿಯೋವನ್ನು ಒಳಗೊಂಡಿರುವ ಸುದ್ದಿ ವರದಿಗೆ ನಮ್ಮನ್ನು ಕರೆದೊಯ್ಯಿತು. ಈ ಮಾಹಿತಿಯನ್ನು ಜೂನ್ ೭, ೨೦೨೩ ರಂದು ಯು.ಎಸ್. ಸನ್ (U.S. Sun) ಪ್ರಕಟಿಸಿದೆ. ವರದಿಯ ಪ್ರಕಾರ, ಮೂಲ  ವೀಡಿಯೋದಲ್ಲಿರುವ ಮಹಿಳೆಯ ಹೆಸರು ರೋಸಿ ಬ್ರೀನ್, ಮತ್ತು ಕ್ಲಿಪ್ ಅನ್ನು ಮೊದಲು ಟಿಕ್‌ಟಾಕ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. 

ಬ್ರೀನ್ ಟಿಕ್‌ಟಾಕ್‌ನಲ್ಲಿ ೫,೮೪,೦೦೦ ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಫ್ಯಾಷನ್ ಇನ್ಫ್ಲ್ಯೂಎನ್ಸರ್ ಆಗಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನಲ್ಲಿ ಅವರ ಬಯೋ ಹೀಗೆ ಹೇಳುತ್ತದೆ, "Midsized Fashion + other bits 🦋☔️🍂💐." 

ನಾವು ಟಿಕ್‌ಟಾಕ್‌ನಲ್ಲಿ ವೈರಲ್ ವೀಡಿಯೋದ ಮೂಲ ಆವೃತ್ತಿಯನ್ನು ಸಹ ಟ್ರ್ಯಾಕ್ ಮಾಡಿದ್ದೇವೆ, ದಿನಾಂಕ ಜೂನ್ ೫, ೨೦೨೩, ಇದು ೦:೨೭ ನಿಮಿಷಗಳಷ್ಟು ಉದ್ದವಾಗಿದೆ ಮತ್ತು ಬ್ರೀನ್ ಮೂರು ವಿಭಿನ್ನ ಬಟ್ಟೆಗಳನ್ನು ಬದಲಾಯಿಸುವುದನ್ನು ತೋರಿಸುತ್ತದೆ. ಉಡುಗೆಗಳ ಬೆಲೆಗಳನ್ನು ವೀಡಿಯೋದ ಶೀರ್ಷಿಕೆಗೆ ಸೇರಿಸಲಾಗಿದೆ. ಅದೇ ವೀಡಿಯೋವನ್ನು ಜೂನ್ ೩, ೨೦೨೩ ರಂದು ಬ್ರೀನ್ ಅವರ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಅವರ ಇನ್ಫ್ಯೂಯೆನ್ಸರ್ ಖಾತೆಯಲ್ಲಿ ಅವರ ಬಯೋ, "🌎 U.K. - Indian Irish midsized gal" ಎಂದು ಓದುತ್ತದೆ.

ಎಡಿಟ್ ವೀಡಿಯೋ ೦:೧೪ ನಿಮಿಷಗಳಷ್ಟು ಉದ್ದವಾಗಿದೆ ಮತ್ತು ಮೂಲ ವೀಡಿಯೋದ ೦:೦೨ ರಿಂದ ೦:೧೧ ಸಮಯದ ಟೈಮ್ ಫ್ರೇಮ್ ಇಂದ ತೆಗೆದುಕೊಳ್ಳಲಾಗಿದೆ. ಡಿಜಿಟಲ್ ಮಾರ್ಪಾಡು ಮಾಡುವುದರ ಹೊರತಾಗಿ, ಮೂಲ ವೀಡಿಯೋದಿಂದ ಕ್ರಾಪ್ ಮಾಡಿದ ೦:೦೯-ನಿಮಿಷದ ಕ್ಲಿಪ್ ಅನ್ನು ೦:೧೪-ನಿಮಿಷದ ವೈರಲ್ ವೀಡಿಯೋ ಮಾಡಲು ನಿಧಾನಗೊಳಿಸಲಾಗಿದೆ.

ನಾವು ವೈರಲ್ ವೀಡಿಯೋವನ್ನು ಮೂಲ ವೀಡಿಯೋದೊಂದಿಗೆ ಹೋಲಿಸಿದ್ದೇವೆ ಮತ್ತು ಬ್ರೀನ್ ಅವರ ಮುಖವನ್ನು ಕಾಜೋಲ್ ಅವರ ಮುಖದೊಂದಿಗೆ ಬದಲಾಯಿಸಲಾಗಿದೆ ಎಂದು ಕಂಡುಕೊಂಡಿದ್ದೇವೆ, ಬಹುಶಃ AI-ಚಾಲಿತ ಫೇಸ್-ಸ್ವಾಪಿಂಗ್ ಸಾಫ್ಟ್‌ವೇರ್ ಅನ್ನು ಬಳಸಲಾಗಿದೆ.

ವೈರಲ್ ವೀಡಿಯೋ ಮತ್ತು ಒರಿಜಿನಲ್ ವೀಡಿಯೋ ನಡುವಿನ ಹೋಲಿಕೆ. (ಮೂಲ: ಫೇಸ್‌ಬುಕ್/ಟಿಕ್‌ಟಾಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಮೂಲ ವೀಡಿಯೋ ಮತ್ತು ವೈರಲ್ ವೀಡಿಯೋ ನಡುವಿನ ಹೋಲಿಕೆ ನೋಡಿದರೆ ವೀಡಿಯೋದಲ್ಲಿರುವ ಮಹಿಳೆ ಕಾಜೋಲ್ ಅಲ್ಲ ಎಂದು ತೋರಿಸುತ್ತದೆ.

ಮೂಲ ವೀಡಿಯೋವನ್ನು ಪೋಷ್ಟ್ ಮಾಡಿದ ಬ್ರೀನ್ ತನ್ನ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಬಟ್ಟೆಗಳನ್ನು ಬದಲಾಯಿಸುವ ಹಲವಾರು ರೀತಿಯ ವೀಡಿಯೋಗಳನ್ನು ಅಪ್‌ಲೋಡ್ ಮಾಡಿರುವುದನ್ನು ನಾವು ಗಮನಿಸಿದ್ದೇವೆ.

ಈ ವೈರಲ್ ವೀಡಿಯೋ, ಲಾಜಿಕಲಿ ಫ್ಯಾಕ್ಟ್ಸ್ ಸೇರಿದಂತೆ ಹಲವಾರು ಸಂಸ್ಥೆಗಳಿಂದ ಫ್ಯಾಕ್ಟ್-ಚೆಕ್ ಮಾಡಲಾದ ನಟಿ ರಶ್ಮಿಕಾ ಮಂದಣ್ಣ ಅವರ ಇದೇ ರೀತಿಯ ಡೀಪ್‌ಫೇಕ್ ವೀಡಿಯೋ ವೈರಲ್ ಆದ ಕೆಲವೇ ದಿನಗಳ ನಂತರ ಕಾಣಿಸಿಕೊಂಡಿದೆ.

ತೀರ್ಪು

ಬಾಲಿವುಡ್ ನಟಿ ಕಾಜೋಲ್ ಕ್ಯಾಮರಾ ಮುಂದೆ ಬಟ್ಟೆ ಬದಲಾಯಿಸುತ್ತಿರುವಂತೆ ಡೀಪ್ ಫೇಕ್ ವೀಡಿಯೋ ಶೇರ್ ಆಗುತ್ತಿದೆ. ವೈರಲ್ ವೀಡಿಯೋವನ್ನು ಟಿಕ್‌ಟಾಕ್ ವೀಡಿಯೋದಿಂದ ಹೊರತೆಗೆಯಲಾಗಿದ್ದು, ಫ್ಯಾಶನ್ ಇನ್ಫ್ಲ್ಯೂಎನ್ಸರ್ ಮೂರು ಬಟ್ಟೆಗಳನ್ನು ಬದಲಾಯಿಸುತ್ತಿರುವುದನ್ನು ತೋರಿಸುತ್ತದೆ ಮತ್ತು ಆಕೆಯ ಮುಖವನ್ನು ಬದಲಿಸಲು AI ಪರಿಕರಗಳನ್ನು ಬಳಸಿ ಡಿಜಿಟಲಿ ಎಡಿಟ್ ಮಾಡಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ನಕಲಿ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ರಜಿನಿ ಕೆ.ಜಿ)

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ