ಮುಖಪುಟ ರಾಹುಲ್ ಗಾಂಧಿ ಮೂರು ತಿಂಗಳ ಕಾಲ ಉಚಿತ ಮೊಬೈಲ್ ರೀಚಾರ್ಜ್ ನೀಡುತ್ತಿದ್ದಾರೆ ಎಂದು ಫೇಕ್ ವಾಟ್ಸಾಪ್ ಸಂದೇಶ ಹೇಳಿಕೊಂಡಿದೆ

ರಾಹುಲ್ ಗಾಂಧಿ ಮೂರು ತಿಂಗಳ ಕಾಲ ಉಚಿತ ಮೊಬೈಲ್ ರೀಚಾರ್ಜ್ ನೀಡುತ್ತಿದ್ದಾರೆ ಎಂದು ಫೇಕ್ ವಾಟ್ಸಾಪ್ ಸಂದೇಶ ಹೇಳಿಕೊಂಡಿದೆ

ಮೂಲಕ: ಉಮ್ಮೆ ಕುಲ್ಸುಮ್

ನವೆಂಬರ್ 13 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ರಾಹುಲ್ ಗಾಂಧಿ ಮೂರು ತಿಂಗಳ ಕಾಲ ಉಚಿತ ಮೊಬೈಲ್ ರೀಚಾರ್ಜ್ ನೀಡುತ್ತಿದ್ದಾರೆ ಎಂದು ಫೇಕ್ ವಾಟ್ಸಾಪ್ ಸಂದೇಶ ಹೇಳಿಕೊಂಡಿದೆ ೨೦೨೪ ರ ಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂರು ತಿಂಗಳ ಉಚಿತ ರೀಚಾರ್ಜ್ ಅನ್ನು ನೀಡುತ್ತಿದ್ದಾರೆ ಎಂದು ವಾಟ್ಸಾಪ್ ಫಾರ್ವರ್ಡ್ ಹೇಳಿಕೊಂಡಿದೆ. (ಮೂಲ: ವಾಟ್ಸಾಪ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಈ ಸಂದೇಶವು ಫೇಕ್. ಕಾಂಗ್ರೆಸ್‌ನಿಂದ ಪ್ರಾರಂಭಿಸಲಾದ ಅಂತಹ ಯಾವುದೇ ಯೋಜನೆಯು ಮೂರು ತಿಂಗಳ ಉಚಿತ ರೀಚಾರ್ಜ್ ಅನ್ನು ಒದಗಿಸುವುದಿಲ್ಲ.

ಇಲ್ಲಿನ ಹೇಳಿಕೆಯೇನು?

೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವವರಿಗೆ ಉತ್ತೇಜಕವಾಗಿ ಎಲ್ಲಾ ಭಾರತೀಯ ಮೊಬೈಲ್ ಬಳಕೆದಾರರಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರು ಮೂರು ತಿಂಗಳ ಕಾಂಪ್ಲಿಮೆಂಟರಿ ಮೊಬೈಲ್ ರೀಚಾರ್ಜ್ ಅನ್ನು ನೀಡುತ್ತಿದ್ದಾರೆ ಎಂದು ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಸಂದೇಶವೊಂದು ಹೇಳುತ್ತದೆ. ಸಂದೇಶವು ಈ ಕೊಡುಗೆಯನ್ನು ಅನುಮೋದಿಸುವ ವೆಬ್‌ಸೈಟ್‌ಗೆ ಬಳಕೆದಾರರನ್ನು ನಿರ್ದೇಶಿಸುವ ಲಿಂಕ್‌ನೊಂದಿಗೆ ಹಂಚಿಕೊಳ್ಳಲಾಗಿದೆ. ವಾಟ್ಸಾಪ್ ಸಂದೇಶವನ್ನು ಹಲವು ಬಾರಿ ಫಾರ್ವರ್ಡ್ ಮಾಡಲಾಗಿದ್ದು ಅದು ಹೀಗೆ ಹೇಳುತ್ತದೆ, “ರಾಹುಲ್ ಗಾಂಧಿ ಎಲ್ಲಾ ಭಾರತೀಯ ಬಳಕೆದಾರರಿಗೆ ೩ ತಿಂಗಳ ಉಚಿತ ರೀಚಾರ್ಜ್ ನೀಡುತ್ತಿದ್ದಾರೆ, ಇದರಿಂದಾಗಿ *೨೦೨೪ ರ ಚುನಾವಣೆಯಲ್ಲಿ ಹೆಚ್ಚು ಹೆಚ್ಚು ಜನರು ಕಾಂಗ್ರೆಸ್‌ಗೆ ಮತ ಚಲಾಯಿಸಬಹುದು ಮತ್ತು ಕಾಂಗ್ರೆಸ್ ಸರ್ಕಾರ ಮತ್ತೆ ರಚನೆಯಾಗಬಹುದು. ೩ ತಿಂಗಳ ಉಚಿತ ರೀಚಾರ್ಜ್ ಪಡೆಯಲು ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ. (ಕೊನೆಯ ದಿನಾಂಕ - ೧೬ ನವೆಂಬರ್ ೨೦೨೩) (ಕನ್ನಡಕ್ಕೆ ಅನುವಾದಿಸಲಾಗಿದೆ.” ಈ ನಿರೂಪಣೆ ಫೇಸ್‌ಬುಕ್‌ನಲ್ಲೂ ವೈರಲ್ ಆಗಿದೆ.

ಆನ್‌ಲೈನ್ ನಲ್ಲಿ ಮತ್ತು ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾದ ಸಂದೇಶದ ಸ್ಕ್ರೀನ್‌ಶಾಟ್ (ಮೂಲ:ವಾಟ್ಸಾಪ್/ಫೇಸ್‌ಬುಕ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ನಾವು ಕಂಡುಹಿಡಿದುದ್ದೇನು?

ಲಾಜಿಕಲಿ ಫ್ಯಾಕ್ಟ್ಸ್ ಸಂದೇಶವು ಫೇಕ್ ಎಂದು ಕಂಡುಹಿಡಿದಿದೆ. ೨೦೨೪ ರ ಚುನಾವಣೆಗೆ ಮೂರು ತಿಂಗಳ ಮೊದಲು ಉಚಿತ ಮೊಬೈಲ್ ರೀಚಾರ್ಜ್ ಅನ್ನು ಒದಗಿಸುವುದಾಗಿ ಕಾಂಗ್ರೆಸ್‌ನ ಯಾವುದೇ ಅಧಿಕೃತ ಪ್ರಕಟಣೆ ಹೇಳಿಕೊಂಡಿಲ್ಲ.

ಗಮನಾರ್ಹವಾಗಿ, ಈ ಕೊಡುಗೆಯನ್ನು ಒಳಗೊಂಡಿರುವ ವೆಬ್‌ಸೈಟ್‌ನಲ್ಲಿ ರಾಹುಲ್ ಗಾಂಧಿಯವರ ಚಿತ್ರ ಮತ್ತು "ಕಾಂಗ್ರೆಸ್ ಉಚಿತ ರೀಚಾರ್ಜ್ ಯೋಜನೆ" ಎಂಬ ಪಠ್ಯವನ್ನು ಒಳಗೊಂಡಿದೆ. ಗೂಗಲ್‌ನಲ್ಲಿ ಹುಡುಕಿದರೂ, ಕಾಂಗ್ರೆಸ್ ಪಕ್ಷವು ಪ್ರಾರಂಭಿಸಿರುವ ಇಂತಹ ಯೋಜನೆಯ ಅಸ್ತಿತ್ವವನ್ನು ಖಚಿತಪಡಿಸುವ ಯಾವುದೇ ವರದಿಗಳು ನಮಗೆ ಕಂಡುಬಂದಿಲ್ಲ. ನಾವು ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಿದ್ದೇವೆ ಮತ್ತು ಅವರ ಪ್ರತಿಕ್ರಿಯೆಯನ್ನು ಪಡೆದ ನಂತರ ಈ ಫ್ಯಾಕ್ಟ್-ಚೆಕ್ ನವೀಕರಿಸುತ್ತೇವೆ.

ಪೋಷ್ಟ್ ನಲ್ಲಿ ಸೇರಿಸಲಾದ ಲಿಂಕ್ ಅಧಿಕೃತ ಕಾಂಗ್ರೆಸ್ ಪಕ್ಷದ ಲಿಂಕ್‌ನಿಂದ (https://www.inc.in) ಗಮನಾರ್ಹವಾಗಿ ಭಿನ್ನವಾಗಿದೆ, ಇದು ಸಂಭಾವ್ಯ ಹಗರಣವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಲಿಂಕ್‌ನಲ್ಲಿರುವ "@" ಮತ್ತು ವಿಭಿನ್ನ ಡೊಮೇನ್ ರಚನೆ (congress2024.limitedoffer.xyz) ಯಂತಹ ಚಿಹ್ನೆಗಳು ಇದು ನಕಲಿ ಮತ್ತು ದುರುದ್ದೇಶಪೂರಿತ ಉದ್ದೇಶಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಸೂಚಿಸುತ್ತದೆ.

 ಜಾಗರೂಕರಾಗಿರುವುದು ಮತ್ತು ಅಂತಹ ಮೋಸಗೊಳಿಸುವ ಲಿಂಕ್‌ಗಳೊಂದಿಗೆ ಸಂವಹನವನ್ನು ತಪ್ಪಿಸುವುದು ವಂಚನೆಗಳು ಮತ್ತು ಸಂಭಾವ್ಯ ಭದ್ರತಾ ಬೆದರಿಕೆಗಳಿಂದ ರಕ್ಷಣೆ ಪಡೆಯುವುದಕ್ಕೆ ಅತ್ಯಗತ್ಯ. ಪೂರ್ವಭಾವಿ ವಿಧಾನವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಆನ್‌ಲೈನ್ ಸುರಕ್ಷತೆಯನ್ನು ರಾಜಿ ಮಾಡಿಕೊಳ್ಳುವ ಫಿಶಿಂಗ್ ಪ್ರಯತ್ನಗಳಿಗೆ ಬಲಿಯಾಗುವುದನ್ನು ತಡೆಯುತ್ತದೆ.

ಬಿಜೆಪಿಯು "ಬಿಜೆಪಿ ಉಚಿತ ರೀಚಾರ್ಜ್ ಯೋಜನೆ" ಅಡಿಯಲ್ಲಿ "ಎಲ್ಲಾ ಭಾರತೀಯ ಮೊಬೈಲ್ ಸೇವಾ ಗ್ರಾಹಕರಿಗೆ ಮೂರು ತಿಂಗಳ ಉಚಿತ ರೀಚಾರ್ಜ್" ಅನ್ನು ನೀಡುತ್ತಿದೆ ಎಂಬ ಹೇಳಿಕೆಯೊಂದಿಗೆ ಬಹುತೇಕ ಸಮಾನವಾದ ರೀತಿಯ ಸಂದೇಶವು ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಆದರೆ, ಬಿಜೆಪಿ ಅಂತಹ ಯೋಜನೆಯನ್ನು ಪ್ರಾರಂಭಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ಪಿಎಂ ಮೋದಿಯವರು ಮೂರು ತಿಂಗಳ ಉಚಿತ ರೀಚಾರ್ಜ್ ನೀಡುವ ಕುರಿತು ಆನ್‌ಲೈನ್‌ನಲ್ಲಿ ಹಂಚಿಕೊಂಡ ಸಂದೇಶಗಳ ಸ್ಕ್ರೀನ್‌ಶಾಟ್ (ಮೂಲ: ಎಕ್ಸ್)

ಈ ಎರಡೂ ಹೇಳಿಕೆಗಳಿಗೆ ಪುರಾವೆಗಳಿಲ್ಲ ಮತ್ತು ವಾಟ್ಸಾಪ್ ಸಂದೇಶವನ್ನು ಉದ್ದೇಶಪೂರ್ವಕ ವಂಚನೆ ಎಂದು ಸ್ಥಾಪಿಸಲಾಗಿದೆ.

ತೀರ್ಪು

ಭಾರತೀಯ ಮೊಬೈಲ್ ಸೇವಾ ಗ್ರಾಹಕರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಮೂರು ತಿಂಗಳ ಉಚಿತ ರೀಚಾರ್ಜ್ ಅನ್ನು ನೀಡುತ್ತವೆ ಎಂಬ ಸಂದೇಶವು ಸುಳ್ಳು; ಇದು ಹಗರಣ ಎಂದು ಗುರುತಿಸಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಫೇಕ್ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ವಿವೇಕ್ ಜೆ)

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ