ಮುಖಪುಟ ಷೇರು ಮಾರುಕಟ್ಟೆಯ ವೇದಿಕೆಯನ್ನು ಪ್ರಚಾರ ಮಾಡಲು ಬಿಲಿಯನೇರ್ ಮುಖೇಶ್ ಅಂಬಾನಿಯವರ ಡೀಪ್‌ಫೇಕ್ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಷೇರು ಮಾರುಕಟ್ಟೆಯ ವೇದಿಕೆಯನ್ನು ಪ್ರಚಾರ ಮಾಡಲು ಬಿಲಿಯನೇರ್ ಮುಖೇಶ್ ಅಂಬಾನಿಯವರ ಡೀಪ್‌ಫೇಕ್ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

ಮೂಲಕ: ರಾಹುಲ್ ಅಧಿಕಾರಿ

ಮಾರ್ಚ್ 7 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಷೇರು ಮಾರುಕಟ್ಟೆಯ ವೇದಿಕೆಯನ್ನು ಪ್ರಚಾರ ಮಾಡಲು ಬಿಲಿಯನೇರ್ ಮುಖೇಶ್ ಅಂಬಾನಿಯವರ ಡೀಪ್‌ಫೇಕ್ ವೀಡಿಯೋವನ್ನು  ಹಂಚಿಕೊಳ್ಳಲಾಗಿದೆ ವೈರಲ್ ಪೋಷ್ಟ್ ನ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್‌/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್ ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ಅಂಬಾನಿಯವರು '೨೦೨೪ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮ್ಮಿಟ್' ನಲ್ಲಿ ಮಾತನಾಡುತ್ತಿರುವ ವೀಡಿಯೋವನ್ನು ಎಡಿಟ್ ಮಾಡಲಾಗಿದೆ.

ಹೇಳಿಕೆ ಏನು?

ಭಾರತೀಯ ಬಿಲಿಯನೇರ್ ಮುಖೇಶ್ ಅಂಬಾನಿ ಅವರು ಷೇರು ಮಾರುಕಟ್ಟೆ ವೇದಿಕೆಯನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಲಾದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ವೈರಲ್ ವೀಡಿಯೋದಲ್ಲಿ, ಅಂಬಾನಿ ಸ್ಟಾಕ್ ಫೋರಮ್ ಸಮುದಾಯವನ್ನು ಪ್ರಾರಂಭಿಸುವ ಬಗ್ಗೆ ಮಾತನಾಡುವುದನ್ನು ಕೇಳಬಹುದು, ಅಲ್ಲಿ "ಇತ್ತೀಚಿನ ಸ್ಟಾಕ್ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಷೇರುಗಳು ಮತ್ತು ಶಿಫಾರಸು ಮಾಡಿದ ಷೇರುಗಳನ್ನು" ಪರಿಚಯಿಸಲಾಗಿದೆ. ಅವರು ಮತ್ತಷ್ಟು ಹೇಳುತ್ತಾರೆ, "...(ನಾವು) ಷೇರುಗಳಲ್ಲಿ ವ್ಯಾಪಾರ ಮಾಡುವ ಮೂಲಕ ಹಣವನ್ನು ಗಳಿಸುವುದು ಹೇಗೆ ಎಂದು ನಿಮಗೆ ಕಲಿಸುತ್ತೇವೆ, ಹಣಕಾಸು ಭದ್ರತಾ ತಂತ್ರಗಳು, ಷೇರು ಹೂಡಿಕೆ ಕೌಶಲ್ಯಗಳು, ಸ್ಟಾಕ್ ಆಯ್ಕೆ ವಿಧಾನಗಳು ಮತ್ತು ಮೌಲ್ಯಯುತ ಹೂಡಿಕೆ ಸಲಹೆಗಳನ್ನು ಹಂಚಿಕೊಳ್ಳುತ್ತೇವೆ. ಮತ್ತು ಮಾರುಕಟ್ಟೆ ವಿಶ್ಲೇಷಣೆಗಾಗಿ, ನಾವು ವೃತ್ತಿಪರ ವಿಶ್ಲೇಷಣೆಯನ್ನು ಹೊಂದಿದ್ದೇವೆ. ನಿಮಗೆ ಸಹಾಯ ಮಾಡಲು ತಂಡ ಹಾಗೂ ಈಗಾಗಲೇ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಹಣ ಸಂಪಾದಿಸಿರುವ ಹೂಡಿಕೆದಾರರು. ನೀವು ನಿಜವಾಗಿಯೂ ಷೇರು ಮಾರುಕಟ್ಟೆಯನ್ನು ಅರ್ಥಮಾಡಿಕೊಂಡಿದ್ದೀರಾ? ಈಗ ನಮ್ಮೊಂದಿಗೆ ಸೇರಿಕೊಳ್ಳಿ."

ಈ ವೀಡಿಯೋವನ್ನು ಫೇಸ್‌ಬುಕ್ ಪುಟ 'ಎವರ್‌ಕೋರ್ ೨' ನಲ್ಲಿ ಹಂಚಿಕೊಳ್ಳಲಾಗಿದ್ದು, ೩,೫೦೦ ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಜೊತೆಗಿರುವ ಶೀರ್ಷಿಕೆಯು ಹೀಗಿದೆ, ಜನರನ್ನು 'ಸ್ಟಾಕ್ ಗುರು' ಗುಂಪಿಗೆ ಸೇರುವಂತೆ ಮನವಿ ಮಾಡಿದ್ದು, 'ಸ್ಟಾಕ್ ಮಾರ್ಕೆಟ್‌ನಲ್ಲಿ ಸ್ಥಿರ ಲಾಭ ಗಳಿಸಲು'. ಈ ಪೋಷ್ಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಆದರೆ, ೨೦೨೪ರ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮ್ಮಿಟ್ ನಲ್ಲಿ ಅಂಬಾನಿ ಮಾತನಾಡುವ ವೀಡಿಯೋವನ್ನು  ಎಡಿಟ್ ಮಾಡಲಾಗಿದೆ ಮತ್ತು ಅದು ಡೀಪ್‌ಫೇಕ್ ಆಗಿದೆ. 

ನಾವು ಕಂಡುಹಿಡಿದದ್ದು ಏನು?

ವೈರಲ್ ವೀಡಿಯೋದಲ್ಲಿ ಮೇಲಿನ ಬಲ ಮೂಲೆಯಲ್ಲಿ 'ANI' ಸುದ್ದಿ ಸಂಸ್ಥೆಯ ಲೋಗೋವನ್ನು ಒಳಗೊಂಡಿದೆ ಮತ್ತು ವೇದಿಕೆಯಿಂದ ಮಾತನಾಡುತ್ತಿರುವ ಅಂಬಾನಿ ಹಿಂದೆ ಗೋಚರಿಸುವ ಬ್ಯಾನರ್/ಸ್ಕ್ರೀನ್‌ನಲ್ಲಿ 'Vibrant Gujarat 2024 10-12 Jan' ಎಂದು ಬರೆಯಲಾಗಿದೆ. ಇದರಿಂದ ಸೂಚನೆಯನ್ನು ತೆಗೆದುಕೊಂಡು, ಜನವರಿ ೧೦ ರಂದು ಎಎನ್ಐ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿದ ಮೂಲ ವೀಡಿಯೋವನ್ನು ನಾವು ಪತ್ತೆಹಚ್ಚಿದ್ದೇವೆ.

ವೈರಲ್ ವೀಡಿಯೋ ಮತ್ತು ಮೂಲ ಕ್ಲಿಪ್ ನಡುವಿನ ಹೋಲಿಕೆ. (ಮೂಲ: ಎಕ್ಸ್/ಯೂಟ್ಯೂಬ್/ಸ್ಕ್ರೀನ್‌ಶಾಟ್)

ಜನವರಿ ೧೦ ಮತ್ತು ೧೨ ರ ನಡುವೆ ಗುಜರಾತ್‌ನಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮ್ಮಿಟ್ ನಲ್ಲಿ ಅಂಬಾನಿ ಮಾತನಾಡುತ್ತಿರುವುದನ್ನು ಯೂಟ್ಯೂಬ್ ವೀಡಿಯೋ ತೋರಿಸುತ್ತದೆ. ಗುಜರಾತ್‌ನಲ್ಲಿನ ವ್ಯಾಪಾರ ಬೆಳವಣಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಅಂಬಾನಿ ಮಾತನಾಡಿರುವ ಸಂಪೂರ್ಣ ಎಎನ್ಐ ವೀಡಿಯೋವನ್ನು ನಾವು ವೀಕ್ಷಿಸಿದೆವು. ಅದರಲ್ಲಿ ಸ್ಟಾಕ್ ಮಾರ್ಕೆಟ್ ಫೋರಮ್ ಕುರಿತು ಯಾವುದೇ ಉಲ್ಲೇಖನವು ನಮಗೆ ಕಂಡುಬಂದಿಲ್ಲ, ಇದು ವೈರಲ್ ವೀಡಿಯೋದಲ್ಲಿ ಆಡಿಯೊವನ್ನು ಎಡಿಟ್ ಮಾಡಲಾಗಿದೆ ಎಂದು ದೃಢೀಕರಿಸುತ್ತದೆ. ಡೀಪ್‌ಫೇಕ್ ವೀಡಿಯೋವನ್ನು ರಚಿಸಲು ಎಎನ್ಐ ತುಣುಕಿನ ಒಂದು ಭಾಗವನ್ನು ಎಡಿಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.

ರಾಜ್ಯ-ಚಾಲಿತ ಪ್ರಸಾರಕ ಡಿಡಿ ಇಂಡಿಯಾ ಕೂಡ ಜನವರಿ ೧೦ ರಂದು ಯೂಟ್ಯೂಬ್‌ನಲ್ಲಿ ಅಂಬಾನಿಯವರ ಅದೇ ವೀಡಿಯೋವನ್ನು ಪ್ರಕಟಿಸಿದೆ. "ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್ ಮತ್ತು ಎಂಡಿ ಮುಖೇಶ್ ಅಂಬಾನಿ ವೈಬ್ರಂಟ್ ಗುಜರಾತ್ ಗ್ಲೋಬಲ್ ಸಮ್ಮಿಟ್ ನಲ್ಲಿ ಭಾಷಣ ಮಾಡಿದರು," ಎಂಬ ಶೀರ್ಷಿಕೆಯನ್ನು ಹೊಂದಿದೆ. 

AI ಕುಶಲತೆಯ ಕಡೆಗೆ ಸೂಚಿಸುವ ವ್ಯತ್ಯಾಸಗಳು

ವೈರಲ್ ಕ್ಲಿಪ್‌ನಲ್ಲಿನ ತುಟಿಗಳ ಚಲನೆಯು ಆಡಿಯೊದೊಂದಿಗೆ ಹೊಂದಿಕೆ ಆಗುವುದಿಲ್ಲ ಮತ್ತು ಅಂಬಾನಿ ಅವರ ಧ್ವನಿ ಅವರ ನಿಜವಾದ ಧ್ವನಿಯನ್ನು ಹೋಲುವುದಿಲ್ಲ ಎಂದು ನಾವು ಗಮನಿಸಿದ್ದೇವೆ. ಅಲ್ಲದೆ, ಅಸಾಮಾನ್ಯ ತುಟಿ ಮತ್ತು ನಾಲಿಗೆಯ ಚಲನೆಗಳು ವೈರಲ್ ಕ್ಲಿಪ್ ಅನ್ನು ಹಾಳುಮಾಡುತ್ತವೆ, ಇದು ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡು ಎಡಿಟ್ ಮಾಡಲಾಗಿದೆ ಎಂಬುದನ್ನು ಸೂಚಿಸುತ್ತದೆ.

ಲಾಜಿಕಲಿ ಫ್ಯಾಕ್ಟ್ಸ್ ವೀಡಿಯೋ ವಿಶ್ಲೇಷಣೆ ನಡೆಸಲು ಜೋಧ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊಫೆಸರ್‌ಗಳು, ಮಯಾಂಕ್ ವತ್ಸಾ ಮತ್ತು ರಿಚಾ ಸಿಂಗ್ ವಿನ್ಯಾಸಗೊಳಿಸಿದ ಅಪ್ಲಿಕೇಶನ್ ಇಟಿಸಾರ್ ನಲ್ಲಿ ವೀಡಿಯೋವನ್ನು ವಿಶ್ಲೇಷಿಸಿದೆವು. ಫಲಿತಾಂಶಗಳಲ್ಲಿ ವೈರಲ್ ವೀಡಿಯೋವನ್ನು ನಕಲಿ ಎಂದು ಗುರುತಿಸಲಾಗಿದ್ದು, ಗರಿಷ್ಠ ೧ ವಿಶ್ವಾಸಾರ್ಹ ಸ್ಕೋರ್ ಅನ್ನು ನೀಡಲಾಗಿತ್ತು.

ಮೋಸದ ಹಣ ಮಾಡುವ ಯೋಜನೆಗಳು ಅಥವಾ ಸಂಶಯಾಸ್ಪದ ಆನ್‌ಲೈನ್ ಹೂಡಿಕೆ ಪ್ಲಾಟ್‌ಫಾರ್ಮ್‌ಗಳನ್ನು ಪ್ರಚಾರ ಮಾಡಲು ಇಂತಹ ಡೀಪ್‌ಫೇಕ್ ವೀಡಿಯೋಗಳ ಬಳಕೆಯು ಇತ್ತೀಚೆಗೆ ಭಾರತದಲ್ಲಿ ಹೆಚ್ಚಿದೆ, ಇದು ಅನೇಕರಲ್ಲಿ ಎಚ್ಚರಿಕೆಯನ್ನು ಮೂಡಿಸಿದೆ. ಈ ಕುರಿತು ಇನ್ನಷ್ಟು ಇಲ್ಲಿ ಓದಬಹುದು.

ತೀರ್ಪು
ಸಮಾರಂಭವೊಂದರಲ್ಲಿ ಮುಖೇಶ್ ಅಂಬಾನಿ ಮಾತನಾಡುವ ಕ್ಲಿಪ್ ಅನ್ನು ಡೀಪ್‌ಫೇಕ್ ವೀಡಿಯೋ ರಚಿಸಲು ನಿರ್ಮಿಸಲಾಗಿದೆ. ಅವರ ಮೂಲ ವೀಡಿಯೋದಲ್ಲಿ ಯಾವುದೇ ಷೇರು ಮಾರುಕಟ್ಟೆ ವೇದಿಕೆಯನ್ನು ಪ್ರಚಾರ ಮಾಡಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ಫೇಕ್ ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ