ಮೂಲಕ: ರಜಿನಿ ಕೆ.ಜಿ
ಜುಲೈ 7 2023
ಈ ವೀಡಿಯೋ ರಾಜಸ್ಥಾನದ ಬಾರ್ಮರ್‌ನಿಂದ ಬಂದಿದ್ದು, ಕರ್ನಾಟಕದಲ್ಲ ಎಂದು ರಾಜಸ್ಥಾನ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಎಫ್‌ಐಆರ್ ಕೂಡ ಅದನ್ನೇ ದೃಢಪಡಿಸುತ್ತದೆ.
ಸಂದರ್ಭ
ಕರ್ನಾಟಕದಲ್ಲಿ ಮುಸ್ಲಿಮರು "ಹಿಂದೂ ವ್ಯವಹಾರಗಳನ್ನು ಬಹಿಷ್ಕರಿಸುವ ಪ್ರತಿಜ್ಞೆ" ತೆಗೆದುಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋವಂದು ಹರಿದಾಡುತ್ತಿದೆ. ವೀಡಿಯೋದಲ್ಲಿ, ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂಗಳ ಒಡೆತನದ ಅಂಗಡಿಗಳಿಂದ ಪೆಟ್ರೋಲ್ ಮತ್ತು ಔಷಧಿಗಳನ್ನು ಖರೀದಿಸಬೇಡಿ ಮತ್ತು ಅವರ ಮಾಲೀಕತ್ವದ ಟ್ಯಾಕ್ಸಿ ಅಥವಾ ಬೈಕ್‌ಗಳಲ್ಲಿ ಪ್ರಯಾಣಿಸದಂತೆ ಇತರರನ್ನು ಒತ್ತಾಯಿಸಿದ್ದಾರೆ. ವೀಡಿಯೋದಲ್ಲಿ ಮಾತನಾಡುವ ವ್ಯಕ್ತಿ, ಜನರು ಹರ್ಷೋದ್ಗಾರ ಮಾಡುವಂತೆ, ಜನ್ನತ್ ಅಥವಾ ಸ್ವರ್ಗವನ್ನು ಪಡೆಯಲು ಹಿಂದೂಗಳು ನಡೆಸುವ ಯಾವುದೇ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬೇಡಿ ಎಂದು ವಿನಂತಿಸಿದ್ದಾರೆ.
ಅದೇ ವೀಡಿಯೋದ ಇನ್ಸ್ಟಾಗ್ರಾಮ್ ರೀಲ್ ಅನ್ನು ‘thesarcasmicpage_’ ಎಂಬ ಖಾತೆಯಿಂದ ಜುಲೈ ೧, ೨೦೨೩ ರಂದು ಹಂಚಿಕೊಳ್ಳಲಾಗಿದೆ ಮತ್ತು ಕರ್ನಾಟಕದ ಬೆಂಗಳೂರಿನಲ್ಲಿ ಹಿಂದೂಗಳ ಬಹಿಷ್ಕಾರಕ್ಕೆ ಮುಸ್ಲಿಮರು ಕರೆ ನೀಡಿದ್ದಾರೆ ಎಂದು ಹೇಳುತ್ತದೆ. ವೀಡಿಯೋದಲ್ಲಿ "ಹಿಂದೂಗಳನ್ನು ಒಡೆಯಲು ನಮಗೆ ೫ ವರ್ಷಗಳ ಕಾಂಗ್ರೆಸ್ ಸರ್ಕಾರವಿದೆ" ಎಂಬ ಪಠ್ಯವನ್ನು ದೃಶ್ಯಗಳ ಮೇಲೆ ಸೇರಿಸಲಾಗಿದೆ. ರೀಲ್ ೧೦೧,೦೦೦ ವೀಕ್ಷಣೆಗಳನ್ನು ಹೊಂದಿದೆ.
ಟ್ವಿಟ್ಟರ್ ಬಳಕೆದಾರರು ಜೂನ್ ೨೯, ೨೦೨೩ ರಂದು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಹೀಗೆ ಬರೆದಿದ್ದಾರೆ: “ಬೆಂಗಳೂರಿನಲ್ಲಿ, ಮುಸ್ಲಿಮರ ಸಭೆಗಳಲ್ಲಿ ಅವರು ಹಿಂದೂಗಳಿಂದ ಏನನ್ನೂ ಖರೀದಿಸದಿರಲು ನಿರ್ಧರಿಸಿದ್ದಾರೆ. ನಮಗೆ ೫ ವರ್ಷಗಳ ಅಧಿಕಾರವಿದೆ, ಹಿಂದೂ ಪಂಪ್‌ಗಳಲ್ಲಿ ಪೆಟ್ರೋಲ್ ಖರೀದಿಸಬೇಡಿ, ಹಿಂದೂ ಅಂಗಡಿಗಳಿಂದ ಔಷಧಿ ಖರೀದಿಸಬೇಡಿ. ಹಿಂದೂಗಳಿಗೆ ವ್ಯಾಪಾರ ಲಾಭವನ್ನು ನೀಡಲು ಬಯಸುವುದಿಲ್ಲ. ೨೦% ಜಿಹಾದಿಗಳು ೮೦% ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ.” ವೀಡಿಯೋ ೩೬೭.೯ ಸಾವಿರ ವೀಕ್ಷಣೆಗಳನ್ನು ಮತ್ತು ೧,೯೫೧ ಲೈಕ್ ಗಳನ್ನು ಗಳಿಸಿದೆ.
ಆದರೆ, ಈ ಹೇಳಿಕೆ ತಪ್ಪಾಗಿದೆ ಮತ್ತು ಸಂದರ್ಭಾನುಸಾರವಾಗಿ ಹಂಚಿಕೊಳ್ಳಲಾಗಿದೆ. ವೀಡಿಯೋ ಹಳೆಯದು ಮತ್ತು ರಾಜಸ್ಥಾನದ್ದು.
ವಾಸ್ತವವಾಗಿ
'हम लोग We The People' (@ajaychauhan41) ಎಂಬ ಟ್ವಿಟರ್ ಖಾತೆಯಿಂದ ಮಾರ್ಚ್ ೧೫, ೨೦೨೩ ರಂದು ಈ ವೀಡಿಯೊವನ್ನು ಪೋಷ್ಟ್ ಮಾಡಲಾಗಿದೆ ಎಂದು ರಿವರ್ಸ್ ಇಮೇಜ್ ಸರ್ಚ್ ನಮಗೆ ತೋರಿಸಿದೆ. ವೀಡಿಯೋವನ್ನು ಈ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ, "ಇಂದು ಮೌಲಾನಾ ರಾಜಸ್ಥಾನದ ಬಾರ್ಮರ್‌ನಲ್ಲಿ ಫತ್ವಾ ಹೊರಡಿಸಿದ್ದಾರೆ, ಜಾಟ್‌ಗಳು, ಗುರ್ಜಾರ್‌ಗಳು, ಚೌಧರಿಗಳಿಂದ ಏನನ್ನು ಖರೀದಿಸಬೇಡಿ ಮತ್ತು ಅವರ ಯಾವುದೇ ವಾಹನದಲ್ಲಿ ಕುಳಿತುಕೊಳ್ಳಬೇಡಿ ... ಈ ಜಮಾತ್‌ನ ಜನರು ಅವರು ಭಾರತದಾದ್ಯಂತ ಮಸೀದಿಗಳಲ್ಲಿ ತಿರುಗಾಡುತ್ತಿದ್ದಾರೆ ಮತ್ತು ಮುಸ್ಲಿಮರನ್ನು ಒಟ್ಟುಗೂಡಿಸುತ್ತಿದ್ದಾರೆ ಮತ್ತು ಅಂತಹ ಫತ್ವಾಗಳನ್ನು ಹೊರಡಿಸುತ್ತಿದ್ದಾರೆ.”
ಪೋಷ್ಟ್ ಗೆ ಉತ್ತರದಲ್ಲಿ, ಬಾರ್ಮರ್ ಪೊಲೀಸರ ಅಧಿಕೃತ ಟ್ವಿಟ್ಟರ್ ಖಾತೆಯು ಜೂನ್ ೨೮, ೨೦೧೯ ರಂದು ಖಾಸಗಿ ಬಸ್ ಅಪಘಾತದ ನಂತರ ಕ್ಲಿಪ್ ಅನ್ನು ರೆಕಾರ್ಡ್ ಮಾಡಲಾಗಿದೆ ಎಂದು ಬರೆದಿದೆ. ಅಪಘಾತದ ವೇಳೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ, ಬಾರ್ಮರ್ ಪೊಲೀಸ್ ಖಾತೆಯಲ್ಲಿ, "ಈ ಘಟನೆಯ ವಿರುದ್ಧ ಪ್ರತಿಭಟನೆಯಾಗಿ, ಮೃತರ ಸಂಬಂಧಿಕರಿಂದ ಬೇಡಿಕೆಗಳನ್ನು ಮಾಡಲಾಯಿತು. (ಈ) ಭಾಷಣವನ್ನು ಸಹ ಸಂಬಂಧಿಕರು ನೀಡಿದ್ದರು."
ಅಪಘಾತದಲ್ಲಿ ಗಾಯಗೊಂಡು ಸಾವನ್ನಪ್ಪಿದ ವ್ಯಕ್ತಿಯ ಅಂತ್ಯಕ್ರಿಯೆಯ ಸಂದರ್ಭದಲ್ಲಿ ತೆಗೆದ ವೀಡಿಯೋ ಎಂದು ರಾಜಸ್ಥಾನ ಪೊಲೀಸರು ಮಾರ್ಚ್ ೧೫ ರಂದು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಷ್ಟ್ ಮಾಡಿದ್ದಾರೆ.
ಜೂನ್ ೨೮, ೨೦೧೯ ರಂದು ಅಪಘಾತಕ್ಕೆ ಸಂಬಂಧಿಸಿದಂತೆ ದಾಖಲಾದ ಎಫ್‌ಐಆರ್ ಪ್ರತಿಯನ್ನು ಲಾಜಿಕಲಿ ಫ್ಯಾಕ್ಟ್ಸ್ ಪರಿಶೀಲಿಸಿ ಈ ಘಟನೆಯನ್ನು ದೃಢೀಕರಿಸಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಸಂಬಂಧಿಕರು ಕೋಪಗೊಂಡಿರುವ ವೀಡಿಯೋವನ್ನು ಈಗ ಹಿಂದೂಗಳ ಒಡೆತನದ ವ್ಯವಹಾರಗಳ ವಿರುದ್ಧ ಮುಸ್ಲಿಂ ಸಮುದಾಯದ ಸದಸ್ಯರು ಪ್ರತಿಭಟನೆ ನಡೆಸುತ್ತಿರುವ ಘಟನೆಯನ್ನು ಕರ್ನಾಟಕದಲ್ಲಿ ಸೆರೆಹಿಡಿಯಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ.
ಈ ವೀಡಿಯೋ ಜೂನ್ ೨೦೨೩ ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಮರುಕಳಿಸಿತು ಮತ್ತು ಇದು ಕರ್ನಾಟಕದ ಬೆಂಗಳೂರಿನದ್ದು ಎಂಬ ನಿರೂಪಣೆಯೊಂದಿಗೆ ಪ್ರಸಾರವಾಯಿತು.
ಜುಲೈ ೧ ರಂದು ಬೆಂಗಳೂರು ಪೊಲೀಸರ ಅಧಿಕೃತ ಟ್ವಿಟರ್ ಖಾತೆಯು ಈ ಹೇಳಿಕೆಯನ್ನು ತಳ್ಳಿಹಾಕಿದೆ ಮತ್ತು ವೀಡಿಯೋ ಹಳೆಯದು ಮತ್ತು ಕರ್ನಾಟಕಕ್ಕೆ ಸಂಬಂಧಿಸಿಲ್ಲ ಎಂದು ಹೇಳಿದೆ.
ತೀರ್ಪು
ರಾಜಸ್ಥಾನದ ೨೦೧೯ ರ ವೀಡಿಯೋ ತಪ್ಪು ನಿರೂಪಣೆಯೊಂದಿಗೆ ಆನ್‌ಲೈನ್‌ನಲ್ಲಿ ಮರುಕಳಿಸಿದೆ ಮತ್ತು ಸಂದರ್ಭಾನುಸಾರವಾಗಿ ಹಂಚಿಕೊಳ್ಳಲಾಗಿದೆ. ಇದು ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ.