ಮುಖಪುಟ ಗುಜರಾತ್‌ನ ಪ್ರಗತಿಗೆ ಮತ ಕೇಳಿತಾ ಬಿಜೆಪಿ ಮಹಾರಾಷ್ಟ್ರ? ಇಲ್ಲ, ಪೋಷ್ಟರ್ ಎಡಿಟ್ ಮಾಡಲಾಗಿದೆ

ಗುಜರಾತ್‌ನ ಪ್ರಗತಿಗೆ ಮತ ಕೇಳಿತಾ ಬಿಜೆಪಿ ಮಹಾರಾಷ್ಟ್ರ? ಇಲ್ಲ, ಪೋಷ್ಟರ್ ಎಡಿಟ್ ಮಾಡಲಾಗಿದೆ

ಮೂಲಕ: ಆನೆಟ್ ಪ್ರೀತಿ ಫುರ್ಟಾಡೊ

ನವೆಂಬರ್ 11 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಗುಜರಾತ್‌ನಲ್ಲಿ ಪ್ರಗತಿಯನ್ನು ಸಾಧಿಸುತ್ತದೆ ಎಂದು ಬಿಜೆಪಿ ಮಹಾರಾಷ್ಟ್ರದ ರಾಜಕೀಯ ಜಾಹೀರಾತು ಸೂಚಿಸಿದೆ ಎಂದು ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್. ಬಿಜೆಪಿ ಮಹಾರಾಷ್ಟ್ರ ರಾಜಕೀಯ ಜಾಹೀರಾತು ಗುಜರಾತ್‌ನಲ್ಲಿ ಪ್ರಗತಿಯನ್ನು ಸಾಧಿಸುತ್ತದೆ ಎಂದು ಹೇಳುವ ಎಡಿಟ್ ಮಾಡಿದ ಪೋಷ್ಟರ್ ಅನ್ನು ಹಂಚಿಕೊಂಡ ಪೋಷ್ಟ್ (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ವೈರಲ್ ಫೋಟೋವನ್ನು ಎಡಿಟ್ ಮಾಡಲಾಗಿದೆ, ಮೂಲ ಬಿಜೆಪಿ ಮಹಾರಾಷ್ಟ್ರ ಪ್ರಚಾರ ಘೋಷಣೆಯಲ್ಲಿ 'ಮಹಾರಾಷ್ಟ್ರ' ಬದಲಿಗೆ 'ಗುಜರಾತ್' ಎಂದು ಬರೆಯಲಾಗಿದೆ.

ಹೇಳಿಕೆ ಏನು?

ಭಾರತೀಯ ಜನತಾ ಪಕ್ಷ (ಬಿಜೆಪಿ)  ಮಹಾರಾಷ್ಟ್ರದಲ್ಲಿ ಚುನಾವಣಾ ಪ್ರಚಾರದ ಜಾಹೀರಾತನ್ನು ತೋರಿಸುವ ಪೋಷ್ಟರ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ, ಅದು ಬೇರೆ ರಾಜ್ಯದ (ಗುಜರಾತ್) ಪ್ರಗತಿಗಾಗಿ ಮಹಾಯುತಿ ಮೈತ್ರಿಕೂಟವನ್ನು ಬೆಂಬಲಿಸುವಂತೆ ಮತದಾರರನ್ನು ಕೇಳುತ್ತದೆ. 

ಗುಜರಾತ್‌ನಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವಾಗ, ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಗುಜರಾತ್‌ನ ಪ್ರಗತಿ ದರದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲು ಯಾವುದೇ ಆಧಾರವಿಲ್ಲ.

ಮಹಾಯುತಿ ಮೈತ್ರಿಕೂಟ-ಬಿಜೆಪಿ, ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ), ಮತ್ತು ಶಿವಸೇನೆ-ಇವು ನವೆಂಬರ್ ೨೦, ೨೦೨೪ ರಂದು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಕ್ರಿಯವಾಗಿ ಪ್ರಚಾರ ನಡೆಸುತ್ತಿದೆ. ನವೆಂಬರ್ ೨೩ ರಂದು ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಲಾಗುವುದು. 

ಪ್ರಚಾರದ ಪ್ರಯತ್ನಗಳು ತೀವ್ರಗೊಳ್ಳುತ್ತಿದ್ದಂತೆ, ಹಂಚಿಕೊಳ್ಳಲಾಗುತ್ತಿರುವ ಚಿತ್ರವು ನಾಲ್ಕು ಚಕ್ರದ ವಾಹನದ ಹಿಂಭಾಗದಲ್ಲಿ ಕಾಣಿಸಿಕೊಳ್ಳುತ್ತದೆ, ಪ್ರಮುಖವಾಗಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಒಳಗೊಂಡಿದೆ. ಜಾಹೀರಾತಿನ ಪಠ್ಯದಲ್ಲಿ "ಬಿಜೆಪಿ-ಮಹಾಯುತಿ ಎಂದರೆ ಗುಜರಾತ್‌ನ ತ್ವರಿತ ಅಭಿವೃದ್ಧಿ" ಎಂದು ಹೇಳಲಾಗಿದೆ. ಮಹಾಮೈತ್ರಿಕೂಟವನ್ನು ಬೆಂಬಲಿಸುವಂತೆ ಮತದಾರರನ್ನು ಒತ್ತಾಯಿಸುವ ಸಂದೇಶದ ಜೊತೆಗಿದೆ. 

ಈ ಚಿತ್ರವು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಮರಾಠಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದ್ದು, "ಗುಜರಾತ್ ಪ್ರಗತಿಗಾಗಿ ಬಿಜೆಪಿ ಮಹಾಮೈತ್ರಿಕೂಟಕ್ಕೆ ಮತ ನೀಡಿ..." ಎಂದು ಅನುವಾದಿಸುತ್ತದೆ. ಕೆಲವು ಪೋಷ್ಟ್ ಗಳು ೧,೨೦೦ ಕ್ಕೂ ಹೆಚ್ಚು ಲೈಕ್‌ಗಳು ಮತ್ತು ೨೭,೦೦೦ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಪೋಷ್ಟ್ ಗಳ ಆರ್ಕೈವ್‌ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು. (ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ನಮ್ಮ ವಿಶ್ಲೇಷಣೆಯು ವೈರಲ್ ಚಿತ್ರವನ್ನು ಡಿಜಿಟಲ್ ಆಗಿ ಬದಲಾಯಿಸಲಾಗಿದೆ ಎಂದು ಸೂಚಿಸುತ್ತದೆ.

ನಾವು ಕಂಡುಕೊಂಡಿದ್ದು ಏನು?

ಚಿತ್ರವನ್ನು ಪರಿಶೀಲಿಸಿದಾಗ, ಅದನ್ನು ಬದಲಾಯಿಸಲಾಗಿದೆ ಎಂಬುದು ಸ್ಪಷ್ಟವಾಯಿತು - "ಗುಜರಾತ್" ಎಂಬ ಪದವನ್ನು  ಉದ್ದೇಶಪೂರ್ವಕವಾಗಿ ಸೇರಿಸಲಾಗಿದೆ, ಅದು ವಾಕ್ಯದ ಉಳಿದ ಭಾಗದಿಂದ  ವಿಭಿನ್ನವಾಗಿದೆ.

ಬದಲಾದ ವಾಕ್ಯವನ್ನು ಹೈಲೈಟ್ ಮಾಡುವ ವೈರಲ್ ಜಾಹೀರಾತಿನ ಸ್ಕ್ರೀನ್‌ಶಾಟ್, ಅಲ್ಲಿ "ಗುಜರಾತ್" ಪದವನ್ನು ಸೇರಿಸಲಾಗಿದೆ, ಉಳಿದ ಪಠ್ಯದಿಂದ ವಿಭಿನ್ನವಾಗಿದೆ. (ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ರಿವರ್ಸ್ ಇಮೇಜ್ ಸರ್ಚ್ ನಮ್ಮನ್ನು ಮೂಲ ಬಿಜೆಪಿ ಮಹಾರಾಷ್ಟ್ರ ಜಾಹೀರಾತಿಗೆ ಕರೆದೊಯ್ಯಿತು, ಇದು ಅಧಿಕೃತ ಘೋಷಣೆಯೊಂದಿಗೆ ಮೋದಿ ಮತ್ತು ಫಡ್ನವಿಸ್ ಅನ್ನು ಒಳಗೊಂಡಿತ್ತು. ಸ್ಥಳೀಯ ಮರಾಠಿ ಸುದ್ದಿ ವಾಹಿನಿಯಾದ ಜಿಬಿ ನ್ಯೂಸ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪ್ರಸಾರ ಮಾಡಿದ ಈ ಜಾಹೀರಾತು, "ಬಿಜೆಪಿ-ಮಹಾಯುತಿ ಎಂದರೆ ಮಹಾರಾಷ್ಟ್ರದ ತ್ವರಿತ ಅಭಿವೃದ್ಧಿ" ಎಂಬ ಸಂದೇಶದೊಂದಿಗೆ ಮುಕ್ತಾಯಗೊಂಡಿದೆ. (ಮರಾಠಿ: भाजप-महायुती आहे तर गती आहे महाराष्ट्राची प्रगती आहे).

ಸ್ಥಳೀಯ ಮರಾಠಿ ಸುದ್ದಿ ವಾಹಿನಿಯಾದ ಜಿಬಿ ನ್ಯೂಸ್ ನಿಂದ ಪ್ರಸಾರವಾದ ಜಾಹೀರಾತಿನ ಸ್ಕ್ರೀನ್‌ಶಾಟ್. (ಮೂಲ: ಯೂಟ್ಯೂಬ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಹೆಚ್ಚುವರಿಯಾಗಿ, ಮರಾಠಿ ಪತ್ರಿಕೆಯಾದ ಮಹಾಸತ್ತಾ, ಮಹಾರಾಷ್ಟ್ರದ ಪ್ರಗತಿಯನ್ನು ಒತ್ತಿಹೇಳುವ ಅದೇ ಘೋಷಣೆಯೊಂದಿಗೆ ಮಹಿಳೆಯರಿಗೆ ತಿಂಗಳಿಗೆ ₹೧,೫೦೦ ಬಿಜೆಪಿಯ ಪ್ರಚಾರದ ಭರವಸೆಯ ಜೊತೆಗೆ ಮೋದಿ ಮತ್ತು ಫಡ್ನವಿಸ್ ಚಿತ್ರವನ್ನು ಒಳಗೊಂಡಿರುವ ಇದೇ ರೀತಿಯ ಪೋಷ್ಟರ್ ಅನ್ನು ಪ್ರಕಟಿಸಿದೆ.

ಮಹಾಸತ್ತಾದ ಸ್ಕ್ರೀನ್‌ಶಾಟ್, ಇದು ಮೂಲ ಘೋಷಣೆಯನ್ನು ಒಳಗೊಂಡಿರುವ ಮೋದಿ ಮತ್ತು ಫಡ್ನವಿಸ್ ಅವರ ಇದೇ ರೀತಿಯ ಪೋಷ್ಟರ್ ಅನ್ನು ಪ್ರಕಟಿಸಿದೆ. (ಮೂಲ: ಮಹಾಸತ್ತಾ ಪತ್ರಿಕೆ)

ಬಿಜೆಪಿ ಮಹಾರಾಷ್ಟ್ರ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅದೇ ಘೋಷಣೆಯನ್ನು ಒಳಗೊಂಡಿರುವ ವೀಡಿಯೋವನ್ನು (ಇಲ್ಲಿ ಆರ್ಕೈವ್ ಮಾಡಲಾಗಿದೆ) ಪೋಷ್ಟ್ ಮಾಡಿದೆ ಮತ್ತು ಇನ್ನೊಂದು ಪ್ರಚಾರದ ವೀಡಿಯೋ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಅದೇ ಪೋಷ್ಟರ್ ನೊಂದಿಗೆ ಕೊನೆಗೊಂಡಿದೆ.

ಮೂಲ ಘೋಷವಾಕ್ಯವು ಮಹಾರಾಷ್ಟ್ರದ ಪ್ರಗತಿಯನ್ನು ಸ್ಪಷ್ಟವಾಗಿ ಕೇಂದ್ರೀಕರಿಸಿದೆ, ಗುಜರಾತ್‌ನಲ್ಲ, ವೈರಲ್ ಚಿತ್ರವನ್ನು ಎಡಿಟ್ ಮಾಡಲಾಗಿದೆ.

ತೀರ್ಪು

ಮೂಲ ಬಿಜೆಪಿ ಮಹಾರಾಷ್ಟ್ರ ಪ್ರಚಾರ ಜಾಹೀರಾತು ಮಹಾರಾಷ್ಟ್ರದ ಪ್ರಗತಿಯನ್ನು ಪ್ರಚಾರ ಮಾಡಿದೆ, ಗುಜರಾತ್‌ನಲ್ಲ. ಗುಜರಾತ್‌ನ ಪ್ರಗತಿಯನ್ನು ಬೆಂಬಲಿಸುವಂತೆ ಮಹಾರಾಷ್ಟ್ರದ ಮತದಾರರನ್ನು ಒತ್ತಾಯಿಸಿದ ಜಾಹೀರಾತನ್ನು ತಪ್ಪಾಗಿ ಸೂಚಿಸಲು ವೈರಲ್ ಫೋಟೋದ ಪಠ್ಯವನ್ನು ಎಡಿಟ್ ಮಾಡಲಾಗಿದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here 

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ