ಮೂಲಕ: ಸೋಹಮ್ ಶಾ
ಡಿಸೆಂಬರ್ 1 2023
ಪೋಲ್ ಆಫ್ ಪೋಲ್ಸ್ ಗ್ರಾಫಿಕ್ ಪ್ರಕಟಿಸಿರುವುದನ್ನು ಎನ್‌ಡಿಟಿವಿ ನಿರಾಕರಿಸಿದೆ ಮತ್ತು ಗ್ರಾಫಿಕ್‌ನಲ್ಲಿ ಉಲ್ಲೇಖಿಸಲಾದ ಹಲವಾರು ಸಮೀಕ್ಷೆಗಳಿಗೆ ಯಾವುದೇ ವಿಶ್ವಾಸಾರ್ಹ ಮೂಲವಿಲ್ಲ.
ಇಲ್ಲಿನ ಹೇಳಿಕೆಯೇನು?
೨೦೨೩ ರ ತೆಲಂಗಾಣ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಎನ್‌ಡಿಟಿವಿಯ "ಪೋಲ್ ಆಫ್ ಪೋಲ್ಸ್" ನದ್ದು ಎಂದು ಹೇಳಿಕೊಂಡು ಹಲವಾರು ಕಾಂಗ್ರೆಸ್ ಪರ ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದು ಗ್ರಾಫಿಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ನಿರ್ಣಾಯಕ ಗೆಲುವನ್ನು ಸೂಚಿಸುವ ಈ ಗ್ರಾಫಿಕ್ ಅನ್ನು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇಟ್ ಅವರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ಇದೇ ಗ್ರಾಫಿಕ್ ಅನ್ನು ಹಲವರು ಫೇಸ್‌ಬುಕ್ ಖಾತೆಗಳಲ್ಲಿ ಕೂಡ ಹಂಚಿಕೊಂಡಿದ್ದಾರೆ.
ಈ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಎನ್‌ಡಿಟಿವಿ "ಸಮೀಕ್ಷೆ" ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಮುನ್ಸೂಚನೆ ನೀಡಿದೆ ಎಂದು ಹೇಳುವ ಪೋಷ್ಟ್ ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಎನ್‌ಡಿಟಿವಿ ಈ ಗ್ರಾಫಿಕ್ ಪ್ರಕಟಿಸಿರುವುದನ್ನು ನಿರಾಕರಿಸಿದೆ ಮತ್ತು ಗ್ರಾಫಿಕ್ ನಲ್ಲಿನ ಡೇಟಾದಲ್ಲಿ ವ್ಯತ್ಯಾಸಗಳಿವೆ. ಇವು ಗ್ರಾಫಿಕ್ ಅನ್ನು ಕೃತಕವಾಗಿ ನಿರ್ಮಿಸಲಾಗಿದೆ ಎಂದು ಸೂಚಿಸುತ್ತದೆ.
ಸತ್ಯಾಂಶಗಳೇನು?
ಸೌತ್ ಫಸ್ಟ್-ಪೀಪಲ್ಸ್ ಪಲ್ಸ್‌ನ ಗ್ರಾಫಿಕ್‌ನಲ್ಲಿರುವ ಸಂಖ್ಯೆಗಳು ನವೆಂಬರ್ ೨೬ ರಂದು ನಡೆಸಿದ ಅವರ ಚುನಾವಣಾ ಪೂರ್ವ ಸಮೀಕ್ಷೆಗಳಿಗೆ ಮತ್ತು ನವೆಂಬರ್ ೨೧ ರಂದು ಎಕ್ಸ್ ನಲ್ಲಿ ಪ್ರಕಟವಾದ ಲೋಕ್ ಪೋಲ್‌ನ ಸಮೀಕ್ಷೆಯ ಫಲಿತಾಂಶಗಳಿಗೆ ಅನುಗುಣವಾಗಿರುವುದಾಗಿ ನಾವು ಕಂಡುಕೊಂಡಿದ್ದೇವೆ.
ವ್ಯತಿರಿಕ್ತವಾಗಿ, ನವೆಂಬರ್ ೪ ರಿಂದ ಎಬಿಪಿ ಸಿ-ವೋಟರ್ ಅಭಿಪ್ರಾಯ ಸಂಗ್ರಹವು ಗ್ರಾಫಿಕ್‌ನಲ್ಲಿನ ಸಂಖ್ಯೆಗಳೊಂದಿಗೆ ಹೊಂದಿಕೆಯಾಗಲಿಲ್ಲ. ಎಬಿಪಿ ಸಿ-ವೋಟರ್ ಸಮೀಕ್ಷೆಯು ಕಾಂಗ್ರೆಸ್‌ಗೆ ೪೩ ರಿಂದ ೫೫ ಸ್ಥಾನಗಳನ್ನು ನಿರೀಕ್ಷಿಸಿದರೆ, ಆದರೆ ಗ್ರಾಫಿಕ್ ತೆಲಂಗಾಣದಲ್ಲಿ ೬೧ ರಿಂದ ೬೫ ಸ್ಥಾನಗಳನ್ನು ಸೂಚಿಸುತ್ತದೆ.
OU JAC (ಉಸ್ಮಾನಿಯಾ ವಿಶ್ವವಿದ್ಯಾನಿಲಯ ಜಂಟಿ ಕ್ರಿಯಾ ಸಮಿತಿ) ಮತ್ತು ತೆಲಂಗಾಣ ಪಲ್ಸ್ ಮೊದಲಾದ ಸಮೀಕ್ಷೆಗಳನ್ನು ಪರಿಶೀಲಿಸಲು ನಮಗೆ ಸಾಧ್ಯವಾಗಲಿಲ್ಲ. ಹೆಚ್ಚುವರಿಯಾಗಿ, ರಾಜ್ಯ ಗುಪ್ತಚರ ಬ್ಯೂರೋ ಆಗಲಿ ಅಥವಾ 'ಬಿಆರ್‌ಎಸ್ ಆಂತರಿಕ ಸಮೀಕ್ಷೆ' ಆಗಲಿ ಮಾನ್ಯತೆ ಪಡೆದ ಮತದಾನ ಘಟಕಗಳಲ್ಲ.
ಎನ್‌ಡಿಟಿವಿ, ಅದರ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ, ನವೆಂಬರ್ ೨೮ ರಂದು ಅದನ್ನು ಸ್ಪಷ್ಟಪಡಿಸಿದೆ. ಅವರು ಅಂತಹ ಯಾವುದೇ "ಪೋಲ್ ಆಫ್ ಪೋಲ್" ಅನ್ನು ಪ್ರಕಟಿಸಿಲ್ಲ ಎಂದು ಹೇಳಿಕೊಂಡಿದೆ. ನವೆಂಬರ್ ೨೭ ಮತ್ತು ೨೮ ರ ನಡುವೆ 'ತೆಲಂಗಾಣ' ಮತ್ತು 'ಪೋಲ್ ಆಫ್ ಪೋಲ್ಸ್' ಕೀವರ್ಡ್‌ಗಳನ್ನು ಬಳಸಿಕೊಂಡು ಎನ್‌ಡಿಟಿವಿ ಯ ಆರ್ಕೈವ್‌ಗಳ ನಮ್ಮ ಸಂಶೋಧನೆಯಲ್ಲಿ ಅಂತಹ ಯಾವುದೇ ವರದಿಯನ್ನು ಕಾಣಿಸಿಕೊಳ್ಳಲಿಲ್ಲ.
ಲಾಜಿಕಲಿ ಫ್ಯಾಕ್ಟ್ಸ್ ಈ ಹಿಂದೆ ೨೦೨೩ ರ ಕರ್ನಾಟಕ ಚುನಾವಣೆಯ ಸಮಯದಲ್ಲಿ ಇದೇ ರೀತಿಯ ನಕಲಿ ಗ್ರಾಫಿಕ್ಸ್ ಅನ್ನು ನಕಲಿ ಎಂದು ಕಂಡುಹಿಡಿದಿತ್ತು.
ತೀರ್ಪು
ವಿವಿಧ ಚುನಾವಣಾ ಪೂರ್ವ ಸಮೀಕ್ಷೆಗಳು ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಮುನ್ಸೂಚನೆ ನೀಡಿದ್ದರೂ, ಎನ್‌ಡಿಟಿವಿ ವಿವಾದಿತ ಗ್ರಾಫಿಕ್ ಅನ್ನು ಪ್ರಕಟಿಸಲಿಲ್ಲ. ಇದಲ್ಲದೆ, ಗ್ರಾಫಿಕ್‌ನಲ್ಲಿ ಉಲ್ಲೇಖಿಸಲಾದ ಹಲವಾರು ಸಮೀಕ್ಷೆಗಳು ವಿಶ್ವಾಸಾರ್ಹ ಮೂಲಗಳನ್ನು ಹೊಂದಿಲ್ಲ.