ಮುಖಪುಟ ಎಐ-ರಚಿಸಿದ ವೀಡಿಯೋವನ್ನು 'ಬೈರುತ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿ' ಎಂದು ಹಂಚಿಕೊಳ್ಳಲಾಗಿದೆ

ಎಐ-ರಚಿಸಿದ ವೀಡಿಯೋವನ್ನು 'ಬೈರುತ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿ' ಎಂದು ಹಂಚಿಕೊಳ್ಳಲಾಗಿದೆ

ಮೂಲಕ: ವನಿತಾ ಗಣೇಶ್

ಅಕ್ಟೋಬರ್ 9 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ವೈಮಾನಿಕ ದಾಳಿಯ ನಂತರ ಬೈರುತ್ ಅನ್ನು ಬಿಂಬಿಸುವುದಾಗಿ ತಪ್ಪಾಗಿ ಹೇಳಿಕೊಂಡು, ಜ್ವಾಲೆಯಲ್ಲಿ ಆವರಿಸಿರುವ ಹಿನ್ನೆಲೆಯಲ್ಲಿ ಕಟ್ಟಡಗಳನ್ನು ಚಿತ್ರವು ತೋರಿಸುತ್ತದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಎಐ-ರಚಿಸಿದ ವೀಡಿಯೋವನ್ನು ಪ್ರಸಾರ ಮಾಡಿದರು, ಇದು ಲೆಬನಾನ್‌ನ ಬೈರುತ್‌ನಲ್ಲಿ ಇತ್ತೀಚಿನ ಇಸ್ರೇಲಿ ವೈಮಾನಿಕ ದಾಳಿಯ ನಂತರದ ಪರಿಣಾಮಗಳನ್ನು ಚಿತ್ರಿಸುತ್ತದೆ ಎಂದು ತಪ್ಪಾಗಿ ಪ್ರತಿಪಾದಿಸಿದ್ದಾರೆ. (ಮೂಲ: ಇನ್‌ಸ್ಟಾಗ್ರಾಮ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಫೇಕ್

ವೀಡಿಯೋದ ವಿಶ್ಲೇಷಣೆಯು ವ್ಯತ್ಯಾಸಗಳು ಮತ್ತು ಅಕ್ರಮಗಳನ್ನು ಬಹಿರಂಗಪಡಿಸಿತು ಮತ್ತು ಇದು ಎಐ- ರಚಿತವಾಗಿದೆ ಎಂದು ಸೂಚಿಸುತ್ತದೆ.

ಹೇಳಿಕೆ ಏನು?

ಲೆಬನಾನ್‌ನ ಬೈರುತ್‌ನಲ್ಲಿ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯ ನಂತರದ ಪರಿಣಾಮಗಳನ್ನು ತೋರಿಸಲು, ಬೆಂಕಿಯಲ್ಲಿ ಕಟ್ಟಡಗಳನ್ನು ಚಿತ್ರಿಸುವ ವೀಡಿಯೋ ಒಂದು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ. "ಇಸ್ರೇಲ್ ವಸತಿ ನೆರೆಹೊರೆಯನ್ನು ಹೊಡೆದ ನಂತರ ಬೈರುತ್‌ನಲ್ಲಿ ಭಯಾನಕ ದೃಶ್ಯಗಳು" ಎಂದು ಹೇಳುವ ಪಠ್ಯವನ್ನು ವೀಡಿಯೋ ಒಳಗೊಂಡಿದೆ. 

ವೀಡಿಯೋವನ್ನು ಹಂಚಿಕೊಳ್ಳುವ ಇನ್‌ಸ್ಟಾಗ್ರಾಮ್‌ ಪೋಷ್ಟ್ ಬರೆಯುವ ಸಮಯದಲ್ಲಿ ೮೦,೦೦೦ ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಇದೇ ರೀತಿಯ ಹೇಳಿಕೆಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ವೀಡಿಯೋವನ್ನು ಹಂಚಿಕೊಂಡ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್. (ಮೂಲ: ಇನ್‌ಸ್ಟಾಗ್ರಾಮ್‌/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಅಕ್ಟೋಬರ್ ೫, ೨೦೨೪ ರಂದು ಲೆಬನಾನ್‌ನ ರಾಜಧಾನಿ ಬೈರುತ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯ ನಂತರ ಈ ಹೇಳಿಕೆ ಹೊರಹೊಮ್ಮಿದೆ. ಅಕ್ಟೋಬರ್ ೨೦೨೩ ರಲ್ಲಿ ಇಸ್ರೇಲ್‌ನ ಮೇಲೆ ಹಮಾಸ್ ದಾಳಿಯ ನಂತರ ಇಸ್ರೇಲ್ ಮತ್ತು ಲೆಬನಾನ್ ಮೂಲದ ಗುಂಪು ಹೆಜ್ಬೊಲ್ಲಾ ಕಳೆದ ವರ್ಷದಲ್ಲಿ ಗಡಿಯಾಚೆಗಿನ ಗುಂಡಿನ ವಿನಿಮಯ ಮಾಡಿಕೊಂಡಿದೆ. ಸೆಪ್ಟೆಂಬರ್‌ನಲ್ಲಿ ೨೭, ೨೦೨೪, ಇಸ್ರೇಲ್ ಹೆಜ್ಬೊಲ್ಲಾ ನಾಯಕ ಹಸನ್ ನಸ್ರಲ್ಲಾ ಅವರನ್ನು ಹತ್ಯೆ ಮಾಡಿದಾಗ ಸಂಘರ್ಷವು ಉಲ್ಬಣಗೊಂಡಿತು.

ಆದರೆ, ಬೈರುತ್‌ನಲ್ಲಿ ಇಸ್ರೇಲಿ ದಾಳಿಯನ್ನು ತೋರಿಸಲು ಈಗ ವೈರಲ್ ವೀಡಿಯೋವನ್ನು ಕೃತಕ ಬುದ್ಧಿಮತ್ತೆ (AI) ಬಳಸಿ ಡಿಜಿಟಲ್ ಆಗಿ ರಚಿಸಲಾಗಿದೆ ಎಂದು ನಾವು ನಿರ್ಧರಿಸಿದ್ದೇವೆ.

ನಾವು ಕಂಡುಕೊಂಡದ್ದು

ವೀಡಿಯೋದ ವಿವರವಾದ ಪರೀಕ್ಷೆಯು ವ್ಯತ್ಯಾಸಗಳು ಮತ್ತು ಅಕ್ರಮಗಳನ್ನು ಬಹಿರಂಗಪಡಿಸಿತು. ಉದಾಹರಣೆಗೆ, ಕಟ್ಟಡಗಳ ಮೇಲಿನ ಜ್ವಾಲೆಗಳು ಅಸ್ವಾಭಾವಿಕವಾಗಿ ಕಂಡುಬರುತ್ತವೆ. ನಾವು ಮೂಲ ವೀಡಿಯೋವನ್ನು ನಿಧಾನಗೊಳಿಸಿದಾಗ, ಫ್ರೇಮ್‌ನಲ್ಲಿ ಗೋಚರಿಸುವ ದಟ್ಟಣೆಯು ಜ್ವಾಲೆಯ ಫ್ರೇಮ್ ದರಕ್ಕಿಂತ ಹೆಚ್ಚು ವೇಗವಾಗಿ ಚಲಿಸುವಂತೆ ತೋರುತ್ತಿದೆ ಎಂದು ನಾವು ಗಮನಿಸಿದ್ದೇವೆ; ದಟ್ಟಣೆಯು ಟೈಮ್‌ಲ್ಯಾಪ್ಸ್ ಅನ್ನು ಹೋಲುತ್ತದೆ, ಆದರೆ ಜ್ವಾಲೆಗಳು ನೈಜ ಸಮಯದಲ್ಲಿ ಚಲಿಸುತ್ತಿರುವಂತೆ ಕಂಡುಬರುತ್ತವೆ. ಸ್ವಾಭಾವಿಕವಾಗಿ ಸೆರೆಹಿಡಿಯಲಾದ ವೀಡಿಯೋದಲ್ಲಿ ಈ ವಿಭಿನ್ನ ವೇಗಗಳು ಕಂಡುಬರುವುದಿಲ್ಲ.

ಹೆಚ್ಚುವರಿಯಾಗಿ, ಜ್ವಾಲೆಯಿಂದ ಹೊರಹೊಮ್ಮುವ ಹೊಗೆ ಅಸಮಂಜಸವಾಗಿದೆ ಎಂದು ನಾವು ಗಮನಿಸಿದ್ದೇವೆ, ಇದು ಕೃತಕ ಉತ್ಪಾದನೆಯನ್ನು ಸೂಚಿಸುತ್ತದೆ. ಯಾವುದೇ ಸ್ಪಷ್ಟ ಮಾನವ ವ್ಯಕ್ತಿಗಳು ಅಥವಾ ಕಾರುಗಳಿಲ್ಲ; ಬದಲಾಗಿ, ಅವು ಅನಿಯಮಿತ ಸಿಲೂಯೆಟ್‌ಗಳು ಮತ್ತು ಬೆಳಕಿನ ಕಿರಣಗಳಾಗಿ ಕಂಡುಬರುತ್ತವೆ.


ವೀಡಿಯೋದ ನಿಧಾನಗತಿಯ ಆವೃತ್ತಿಯು ಹಲವಾರು ಅಸಂಗತತೆಗಳನ್ನು ಬಹಿರಂಗಪಡಿಸುತ್ತದೆ. (ಮೂಲ: ಇನಸ್ಟಾಗ್ರಾಮ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವು, ಅಕ್ಟೋಬರ್ ೧, ೨೦೨೪ ರಂದು "ಡಿಜಿಟಲ್ ನೊಮ್ಯಾಡ್" ಎಂಬ ಬಳಕೆದಾರರಿಂದ ಟಿಕ್‌ಟಾಕ್‌ನಲ್ಲಿ ಹಂಚಿಕೊಂಡಿರುವ ಮೂಲ ತುಣುಕಿಗೆ ನಮ್ಮನ್ನು ಕರೆದೊಯ್ಯಿತು. ಈ ವೀಡಿಯೋವನ್ನು "ಎಐ-ರಚಿಸಲಾಗಿದೆ" ಎಂದು ಲೇಬಲ್ ಮಾಡಲಾಗಿದೆ.

ಟಿಕ್‌ಟಾಕ್‌ನಲ್ಲಿನ ವೀಡಿಯೋದ ಸ್ಕ್ರೀನ್‌ಶಾಟ್ ರಚನೆಕಾರರಿಂದ 'ಎಐ-ರಚಿಸಲಾಗಿದೆ' ಎಂದು ಲೇಬಲ್ ಮಾಡಲಾಗಿದೆ. (ಮೂಲ: ಟಿಕ್‌ಟಾಕ್)

ಈ ಬಳಕೆದಾರರ ಪ್ರೊಫೈಲ್‌ನಲ್ಲಿರುವ ಬಯೋ (ಇಲ್ಲಿ ಆರ್ಕೈವ್ ಮಾಡಲಾಗಿದೆ) "ಅಸಾಮಾನ್ಯ ಎಐ ಕಲಾವಿದ" ಎಂದು ಹೇಳುತ್ತದೆ ಮತ್ತು ಮಾಸ್ಕೋದಲ್ಲಿನ ರಷ್ಯಾದ ಸ್ಟೇಟ್ ಹಿಸ್ಟಾರಿಕಲ್ ಮ್ಯೂಸಿಯಂ ಮತ್ತು ನ್ಯೂಯಾರ್ಕ್ ನಗರದ ಸ್ಕೈಲೈನ್ ಸೇರಿದಂತೆ ಬೆಂಕಿಯಲ್ಲಿರುವ ಗಮನಾರ್ಹ ಕಟ್ಟಡಗಳು ಮತ್ತು ನಗರಗಳ ಇತರ ಎಐ- ರಚಿತ ವೀಡಿಯೋಗಳನ್ನು ಒಳಗೊಂಡಿದೆ.

ಎಐ- ರಚಿತವಾದ ವಿಷಯವನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾದ ಆನ್‌ಲೈನ್ ಪರಿಕರಗಳನ್ನು ಬಳಸಿಕೊಂಡು ನಾವು ವೀಡಿಯೋದಿಂದ ಫ್ರೇಮ್ ಅನ್ನು ವಿಶ್ಲೇಷಿಸಿದ್ದೇವೆ. ಹೈವ್ ಮಾಡರೇಶನ್ ಚಿತ್ರವು ಎಐ- ರಚಿತ ಅಥವಾ ಡೀಪ್‌ಫೇಕ್ ವಿಷಯವನ್ನು ಒಳಗೊಂಡಿರುವ ೯೯.೬ ಪ್ರತಿಶತ ಸಂಭವನೀಯತೆಯನ್ನು ಗುರುತಿಸಿದೆ. ಕೀಫ್ರೇಮ್ ಎಐ- ರಚಿತವಾಗಿರುವ ೯೬ ಪ್ರತಿಶತ ಸಾಧ್ಯತೆಯನ್ನು ಹಗ್ಗಿಂಗ್‌ಫೇಸ್‌ ನಿರ್ಣಯಿಸಿದೆ.

ವೀಡಿಯೊದಿಂದ ಫ್ರೇಮ್ ಅನ್ನು ವಿಶ್ಲೇಷಿಸಿದ ಹೈವ್ ಮಾಡರೇಶನ್ ಮತ್ತು ಹಗ್ಗಿಂಗ್‌ಫೇಸ್‌ನ ಫಲಿತಾಂಶಗಳ ಸ್ಕ್ರೀನ್‌ಶಾಟ್. (ಮೂಲ: ಹೈವ್ ಮಾಡರೇಶನ್)

ಐಐಟಿ ಜೋಧ್‌ಪುರದ ಕಂಪ್ಯೂಟರ್ ವಿಜ್ಞಾನದ ಪ್ರಾಧ್ಯಾಪಕ ಮಯಾಂಕ್ ವತ್ಸಾ ನೇತೃತ್ವದ ತಂಡವು ಅಭಿವೃದ್ಧಿಪಡಿಸಿದ ಇಟಿಸಾರ್ ಎಂಬ ಡೀಪ್‌ಫೇಕ್ ಪತ್ತೆ ಸಾಧನಕ್ಕೆ ಲಾಜಿಕಲಿ ಫ್ಯಾಕ್ಟ್ಸ್ ವೀಡಿಯೊವನ್ನು ಅಪ್‌ಲೋaಡ್ ಮಾಡಿದೆ. ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸಿದ ನಂತರ ನಾವು ಈ ಚೆಕ್ ಅನ್ನು ನವೀಕರಿಸುತ್ತೇವೆ.

ವೀಡಿಯೋದ ಅಕ್ರಮಗಳು ಮತ್ತು ಎಐ-ಪತ್ತೆಹಚ್ಚುವಿಕೆಯ ಪರಿಕರಗಳ ಸಂಶೋಧನೆಗಳು ಅದು ನಿಜವಲ್ಲ ಬದಲಿಗೆ ಡಿಜಿಟಲ್ ಆಗಿ ರಚಿಸಲಾಗಿದೆ ಎಂದು ಸೂಚಿಸುತ್ತದೆ.

ತೀರ್ಪು 

ವೈಮಾನಿಕ ದಾಳಿಯ ನಂತರ ಬೈರುತ್‌ನಲ್ಲಿ ಕಟ್ಟಡಗಳು ಬೆಂಕಿಗೆ ಆಹುತಿಯಾಗಿರುವುದನ್ನು ತೋರಿಸುವ ವೀಡಿಯೋ ಅಧಿಕೃತವಲ್ಲ. ಕೃತಕ ಬುದ್ಧಿಮತ್ತೆ ಬಳಸಿ ಇದನ್ನು ರಚಿಸಲಾಗಿದೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ