ಮೂಲಕ: ಅಜ್ರಾ ಅಲಿ
ಜನವರಿ 10 2024
ಲಾಜಿಕಲಿ ಫ್ಯಾಕ್ಟ್ಸ್ ರಣಹದ್ದುಗಳ ವೀಡಿಯೋ ಇತ್ತೀಚಿನದಲ್ಲ ಮತ್ತು ಕನಿಷ್ಠ ೨೦೨೧ ರಿಂದ ಇಂಟರ್ನೆಟ್‌ನಲ್ಲಿದೆ ಎಂದು ಕಂಡುಹಿಡಿದಿದೆ.
ಹೇಳಿಕೆ ಏನು?
ಹೊಸದಾಗಿ ನಿರ್ಮಿಸಲಾದ ರಾಮಮಂದಿರದ (ಜನವರಿ ೨೨ ರಂದು ನಿಗದಿಪಡಿಸಲಾಗಿದೆ) ಉತ್ತರ ಪ್ರದೇಶದ ಅಯೋಧ್ಯೆ ನಗರದಲ್ಲಿ ರಾಪ್ಟರ್‌ಗಳು ಬಂದಿದ್ದಾವೆ ಎಂಬ ಹೇಳಿಕೆಯೊಂದಿಗೆ ರಣಹದ್ದುಗಳ ಹಿಂಡುಗಳ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ರಸ್ತೆ ಬದಿಯಲ್ಲಿ ರಣಹದ್ದುಗಳ ಗುಂಪನ್ನು ತೋರಿಸುವ ವೈರಲ್ ವೀಡಿಯೋವನ್ನು ಹಿಂದೂ ಮಹಾಕಾವ್ಯ ರಾಮಾಯಣದ ಪೌರಾಣಿಕ ಪಕ್ಷಿ ಜಟಾಯುಗೆ ಲಿಂಕ್ ಮಾಡಲಾಗಿದೆ ಮತ್ತು ರಾಮನ ಭಕ್ತರು ಅಯೋಧ್ಯೆಗೆ ಬರಲು ಪ್ರಾರಂಭಿಸಿದ್ದಾರೆ ಎಂದು ಹೇಳಲು ಹಂಚಿಕೊಳ್ಳಲಾಗುತ್ತಿದೆ. (ರಾಮಾಯಣದ ಪ್ರಕಾರ, ರಾಮನ ಹೆಂಡತಿ ಸೀತೆಯನ್ನು ರಾವಣನಿಂದ ಅಪಹರಿಸುವಾಗ, ಜಟಾಯು ಎಂಬ ರಣಹದ್ದು ಅವಳನ್ನು ಉಳಿಸಲು ಪ್ರಯತ್ನಿಸುತ್ತಿರುವಾಗ ತನ್ನನ್ನು ತಾನೇ ಬಲಿ ತೆಗೆದುಕೊಂಡಿತು.)
ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ವೀಡಿಯೋವನ್ನು ಹಿಂದಿಯಲ್ಲಿ ಸುದೀರ್ಘ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, ಅದನ್ನು ಹೀಗೆ ಅನುವಾದಿಸುತ್ತದೆ: “ಅಯೋಧ್ಯೆಯಲ್ಲಿ ಗೋಚರಿಸುವ ಜಟಾಯುವಿನ ಹಿಂಡು... ಅಯೋಧ್ಯೆಯಲ್ಲಿ ಕಾಣುವ ರಣಹದ್ದುಗಳ ಹಿಂಡು. ರಾಮಮಂದಿರದ ಶಂಕುಸ್ಥಾಪನೆಗೂ ಮುನ್ನವೇ ರಾಮಭಕ್ತರು ಅಯೋಧ್ಯೆಗೆ ಬರಲು ಆರಂಭಿಸಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ.” ಪೋಷ್ಟ್ (ಇಲ್ಲಿ ಆರ್ಕೈವ್ ಮಾಡಲಾಗಿದೆ) ಬರೆಯುವ ಸಮಯದಲ್ಲಿ ೧೩೦,೦೦೦ ವೀಕ್ಷಣೆಗಳನ್ನು ಸ್ವೀಕರಿಸಿದೆ.
ಇದೇ ರೀತಿಯ ನಿರೂಪಣೆಗಳೊಂದಿಗೆ ಸಾಮಾಜಿಕ ಮಾಧ್ಯಮ ಮಾಧ್ಯಮದಾದಂತ್ಯ ಬಳಕೆದಾರರಿಂದ ಈ ವೀಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಮತ್ತು ಅಂತಹ ಪೋಷ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.(ಮೂಲ: ಎಕ್ಸ್ /ಯೂಟ್ಯೂಬ್/ಸ್ಕ್ರೀನ್‌ಶಾಟ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಆದರೆ, ಈ ವೀಡಿಯೋ ಇತ್ತೀಚಿನದಲ್ಲ ಮತ್ತು ಕನಿಷ್ಠ ೨೦೨೧ ರ ಹಿಂದಿನದು.
ನಾವು ಇದನ್ನು ಹೇಗೆ ಪರಿಶೀಲಿಸಿದ್ದೇವೆ?
ವೈರಲ್ ವೀಡಿಯೋದಿಂದ ಕೀಫ್ರೇಮ್ ಅನ್ನು ಬಳಸಿಕೊಂಡು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಕನಿಷ್ಠ ಅಕ್ಟೋಬರ್ ೨೦೨೧ ರಿಂದ ವೀಡಿಯೋ ಆನ್‌ಲೈನ್‌ನಲ್ಲಿದೆ ಎಂದು ನಮಗೆ ತೋರಿಸಿದೆ. ಅಕ್ಟೋಬರ್ ೮, ೨೦೨೧ ರಂದು ಫೇಸ್‌ಬುಕ್ ಪುಟ ‘ಡೂಜ್ دوز’ ಮೂಲಕ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ, ಅರೇಬಿಕ್‌ನಿಂದ ಶೀರ್ಷಿಕೆಯನ್ನು ಅನುವಾದಿಸಿದಾಗ: “ಈ ಹಕ್ಕಿಯ ಹೆಸರು ನಿಮಗೆ ತಿಳಿದಿದೆಯೇ?” ಡೂಜ್ ತನ್ನ ಫೇಸ್‌ಬುಕ್ ಬಯೋದಲ್ಲಿ ಸುದ್ದಿ ಮತ್ತು ಮಾಧ್ಯಮ ವೆಬ್‌ಸೈಟ್ ಎಂದು ನಮೂದಿಸಿದೆ ಮತ್ತು ಪ್ಯಾಲೇಸ್ಟಿನಿಯನ್ ISD ಕೋಡ್‌ನೊಂದಿಗೆ ಫೋನ್ ಸಂಖ್ಯೆಯನ್ನು ಹಂಚಿಕೊಂಡಿದೆ.
೨೦೨೧ ರಲ್ಲಿ ಫೇಸ್‌ಬುಕ್ ನಲ್ಲಿ ‘ಡೂಜ್ دوز' ಅವರು ಹಂಚಿಕೊಂಡ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್. (ಮೂಲ: ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)
ಮಾರ್ಚ್ ೨೦೨೨ ರಲ್ಲೂ ವೀಡಿಯೋ ವೈರಲ್ ಆಗಿತ್ತು ಎಂದು ನಮ್ಮ ಸಂಶೋಧನೆಯು ತೋರಿಸಿದೆ. ಟಿವಿ೯ ಮರಾಠಿ, ಸ್ಥಳೀಯ ಸುದ್ದಿ ವೆಬ್‌ಸೈಟ್, ಮಾರ್ಚ್ ೨೪, ೨೦೨೨ ರಂದು ಪ್ರಕಟವಾದ ಲೇಖನದಲ್ಲಿ ಈ ವೀಡಿಯೋದ ಸ್ಕ್ರೀನ್‌ಶಾಟ್ ಅನ್ನು ಪ್ರಕಟಿಸಿದೆ.ಲೇಖನವು "ಗಂಭೀರ ವಿಷಯದ ಕುರಿತು ತುರ್ತು ಸಭೆ ನಡೆಸಲಾಗಿದೆ, ರಣಹದ್ದುಗಳ ವೈರಲ್ ವೀಡಿಯೋವನ್ನು ನೋಡಿ (ಮರಾಠಿಯಿಂದ ಅನುವಾದಿಸಲಾಗಿದೆ)". ಭಾರತೀಯ ಪೊಲೀಸ್ ಸೇವೆಯ (IPS) ಅಧಿಕಾರಿಯಾದ ದೀಪಾಂಶು ಕಬ್ರಾ ಅವರು ಮಾರ್ಚ್ ೨೩, ೨೦೨೨ ರಂದು ಎಕ್ಸ್ (ಆಗ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ನಲ್ಲಿ ಈಗ ವೈರಲ್ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಎಂದು ವರದಿ ಹೇಳಿದೆ, “ಖಂಡಿತವಾಗಿಯೂ ತುರ್ತು ಸಭೆಯನ್ನು ಕರೆಯಲಾಗಿದೆ. ಕೆಲವು ಗಂಭೀರ ವಿಷಯ (ಹಿಂದಿಯಿಂದ ಅನುವಾದಿಸಲಾಗಿದೆ)."
ಸುದ್ದಿ ವರದಿಯ ಸ್ಕ್ರೀನ್‌ಶಾಟ್ ಮತ್ತು ೨೦೨೨ ರಲ್ಲಿ IPS ಕಚೇರಿಯ ಪೋಷ್ಟ್. (ಮೂಲ: ಸ್ಕ್ರೀನ್‌ಶಾಟ್/ TV9marathi.com/ಎಕ್ಸ್)
ವೀಡಿಯೋ ಎಲ್ಲಿಂದ ಬಂದಿದೆ ಎಂದು ನಮಗೆ ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಮೇಲಿನ ಪುರಾವೆಗಳು ಕನಿಷ್ಠ ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಆನ್‌ಲೈನ್‌ನಲ್ಲಿದೆ ಎಂದು ತೋರಿಸುತ್ತದೆ. ರಾಮಮಂದಿರ ಉದ್ಘಾಟನೆಗೂ ಮುನ್ನ ಅಯೋಧ್ಯೆಯಲ್ಲಿ ರಣಹದ್ದುಗಳು ಸೇರುತ್ತಿರುವ ಇತ್ತೀಚಿನ ದೃಶ್ಯಗಳನ್ನು ವೀಡಿಯೋ ತೋರಿಸಲು ಸಾಧ್ಯವಿಲ್ಲ.
ತೀರ್ಪು
ಕನಿಷ್ಠ ೨೦೨೧ ರಿಂದ ಆನ್‌ಲೈನ್‌ನಲ್ಲಿರುವ ಹಳೆಯ ವೀಡಿಯೋವನ್ನು ರಣಹದ್ದುಗಳು, ಪೌರಾಣಿಕ ಪಕ್ಷಿ ಜಟಾಯು ಸೇರಿರುವ ಜಾತಿಗಳು, ರಾಮ ಮಂದಿರದ ಪ್ರತಿಷ್ಠಾಪನೆಯ ಮೊದಲು ಅಯೋಧ್ಯೆಗೆ ಭೇಟಿ ನೀಡುವುದನ್ನು ತೋರಿಸುತ್ತದೆ ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.
(ಅನುವಾದಿಸಿವರು: ರಜಿನಿ ಕೆ.ಜಿ)
Read the fact-check in English here.