ಮುಖಪುಟ ಟರ್ಕಿಯ ಮಾರ್ಪಡಿಸಿದ ಟ್ರಾಕ್ಟರ್‌ನ ವೀಡಿಯೋವನ್ನು ಭಾರತದಲ್ಲಿ ರೈತರ ಪ್ರತಿಭಟನೆಗಳಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಟರ್ಕಿಯ ಮಾರ್ಪಡಿಸಿದ ಟ್ರಾಕ್ಟರ್‌ನ ವೀಡಿಯೋವನ್ನು ಭಾರತದಲ್ಲಿ ರೈತರ ಪ್ರತಿಭಟನೆಗಳಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ

ಮೂಲಕ: ಉಮ್ಮೆ ಕುಲ್ಸುಮ್

ಫೆಬ್ರವರಿ 19 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಟರ್ಕಿಯ ಮಾರ್ಪಡಿಸಿದ ಟ್ರಾಕ್ಟರ್‌ನ ವೀಡಿಯೋವನ್ನು ಭಾರತದಲ್ಲಿ ರೈತರ ಪ್ರತಿಭಟನೆಗಳಿಗೆ ತಪ್ಪಾಗಿ ಲಿಂಕ್ ಮಾಡಲಾಗಿದೆ ೨೦೨೪ ರ ರೈತರ ಪ್ರತಿಭಟನೆಗಾಗಿ ಮಾರ್ಪಡಿಸಿದ ಟ್ರಾಕ್ಟರ್ ಸಿದ್ಧವಾಗಿದೆ ಎಂದು ತೋರಿಸುವ ಪೋಷ್ಟ್‌ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

ಈ ವೀಡಿಯೋವನ್ನು ತೆಗೆದ ವ್ಯಕ್ತಿ ಇದನ್ನು ಟರ್ಕಿಯ ಸ್ಯಾಮ್ಸನ್ ನಲ್ಲಿ ಸೆರೆಹಿಡಿಯಲಾಗಿದೆ ಎಂದು ಲಾಜಿಕಲಿ ಫ್ಯಾಕ್ಟ್ಸ್ ಗೆ ತಿಳಿಸಿದ್ದಾರೆ. ಭಾರತದ ರೈತರ ಪ್ರತಿಭಟನೆಗೆ ಸಂಬಂಧವಿಲ್ಲ.

ಹೇಳಿಕೆ ಏನು?

ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳ ಸಂದರ್ಭದಲ್ಲಿ, ಮುಂಭಾಗದಲ್ಲಿ ಲೋಹದ ಚೌಕಟ್ಟನ್ನು ಹೊಂದಿದ ಮಾರ್ಪಡಿಸಿದ ಟ್ರಾಕ್ಟರ್‌ನ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ ಮತ್ತು ರೈತರು ಈ ಟ್ರಾಕ್ಟರ್ ಅನ್ನು ದೆಹಲಿಗೆ ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಲು ತರುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವ್ಯಾಪಕವಾಗಿ ಹರಿದಾಡುತ್ತಿದೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರು ಈ ವೀಡಿಯೋವನ್ನು ಹಂಚಿಕೊಂಡಿದ್ದು ಅದರ ಶೀರ್ಷಿಕೆ, "ಇದು ಕಿಸಾನ್ ಆಂದೋಲನದ ತಯಾರಿಯಂತೆ ತೋರುತ್ತಿದೆಯೇ...? ಇದು ಯುದ್ಧಕ್ಕೆ ಲಜ್ಜೆಗೆಟ್ಟ ಸಿದ್ಧತೆಯಾಗಿದೆ. ಮತ್ತು, ಈ ಎಲ್ಲಾ ದುಬಾರಿ ಎದೆಗಾರಿಕೆ/ಕೋಟೆ/ಪ್ಯಾರಪೆಟ್ ಅನ್ನು ಯಾರು ಪಾವತಿಸುತ್ತಿದ್ದಾರೆ ..??? ಖಲಿಸ್ತಾನಿಗಳು ಮತ್ತೆ ಕಾರ್ಯಪ್ರವೃತ್ತರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ, ರೈತರಲ್ಲ...!"

ಪೋಷ್ಟ್ ಅನ್ನು ೧,೦೦,೦೦೦ ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ ಮತ್ತು ಈ ಕಥೆಯನ್ನು ಬರೆಯುವ ಸಮಯದಲ್ಲಿ ೧,೦೦೦ ಕ್ಕೂ ಹೆಚ್ಚು ಬಾರಿ ಮರುಹಂಚಿಕೊಳ್ಳಲಾಗಿದೆ. ಅಂತಹ ಪೋಷ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ಈ ವೀಡಿಯೋವನ್ನು ಭಾರತದ ಹಿರಿಯ ಪತ್ರಕರ್ತೆ ಪಲ್ಲವಿ ಘೋಷ್ ಕೂಡ ಹಂಚಿಕೊಂಡಿದ್ದು, ನಂತರ ಅವರು ಪೋಷ್ಟ್ ಅನ್ನು ಅಳಿಸಿದ್ದಾರೆ. ಪೋಷ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಕಾಣಬಹುದು.


ಆನ್‌ಲೈನ್‌ನಲ್ಲಿ ಮಾಡಿದ ಹೇಳಿಕೆಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್ /ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ನಾವು ಕಂಡುಕೊಂಡದ್ದು

ಲಾಜಿಕಲಿ ಫ್ಯಾಕ್ಟ್ಸ್ ವ್ಯಾಪಕವಾಗಿ ಹಂಚಿಕೊಂಡ ವೀಡಿಯೋ ಭಾರತದಿಂದಲ್ಲ, ಆದರೆ ಟರ್ಕಿಯಿಂದ ಬಂದಿದೆ ಎಂದು ಕಂಡುಕೊಂಡಿದೆ. 

ನಾವು ವೀಡಿಯೋದ ಕೀಫ್ರೇಮ್‌ಗಳಲ್ಲಿ ರಿವರ್ಸ್ ಇಮೇಜ್ ಸರ್ಚ್ ಅನ್ನು ನಡೆಸಿದ್ದೇವೆ ಮತ್ತು ಈ ವೀಡಿಯೋವನ್ನು ಜನವರಿ ೩೦, ೨೦೨೪ ರಂದು ಯೂಟ್ಯೂಬ್ ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಕಂಡುಬಂದಿದೆ. ವೀಡಿಯೋದಲ್ಲಿ ನಾವು ಟಿಕ್ ಟಾಕ್ ವಾಟರ್‌ಮಾರ್ಕ್ ಅನ್ನು ಗಮನಿಸಿದ್ದೇವೆ: cengizler_tarim_55.

ನಾವು ಬಳಕೆದಾರರ ಇನ್ಸ್ಟಾಗ್ರಾಮ್ ಮತ್ತು ಟಿಕ್ ಟಾಕ್ ಖಾತೆಗಳನ್ನು ಕಂಡುಕೊಂಡಿದ್ದೇವೆ ಮತ್ತು ಅವರು ಜನವರಿ ೩೦, ೨೦೨೪ ರಂದು ಎರಡೂ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದೇ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಎಂದು ಕಂಡುಬಂದಿದೆ. 

ಇನ್ಸ್ಟಾಗ್ರಾಮ್ ನಲ್ಲಿ, ವೀಡಿಯೋ ಪೋಷ್ಟ್‌ನ ಶೀರ್ಷಿಕೆಯು ಬಳಕೆದಾರರು ಅದನ್ನು ಚಿತ್ರೀಕರಿಸಿದ್ದಾರೆ ಮತ್ತು ಅವರು ಕ್ಲಿಪ್ ಅನ್ನು ಹೊಂದಿದ್ದಾರೆಂದು ಸೂಚಿಸಿದ್ದಾರೆ. ಟರ್ಕಿಶ್ ಭಾಷೆಯಲ್ಲಿ ಬರೆಯಲಾದ ಶೀರ್ಷಿಕೆಯನ್ನು ಇಂಗ್ಲಿಷ್ ಗೆ ಅನುವಾದಿಸಿದಾಗ - "ಮೂಲ ವೀಡಿಯೋ ಮತ್ತು ನನ್ನ ಮಾಲೀಕತ್ವದಲ್ಲಿದೆ."

ಲಾಜಿಕಲಿ ಫ್ಯಾಕ್ಟ್ಸ್ cengizler_tarim_55 ಅವರನ್ನು ಇನ್ಸ್ಟಾಗ್ರಾಮ್ ನಲ್ಲಿ ಸಂಪರ್ಕಿಸಿದರು, ಅವರು ವೀಡಿಯೋವನ್ನು ಚಿತ್ರಿಸಿದ್ದಾರೆ ಮತ್ತು ಉತ್ತರ ಟರ್ಕಿಯ ಸ್ಯಾಮ್ಸನ್ ನಗರದಲ್ಲಿ ಸೆರೆಹಿಡಿಯಲಾಗಿದೆ ಎಂದು ಅವರು ದೃಢಪಡಿಸಿದರು.

ಬಳಕೆದಾರರು ಹಂಚಿಕೊಂಡಿರುವ ಈ ವೀಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, "Celik" ಎಂಬ ಪಠ್ಯದೊಂದಿಗೆ ಹಳದಿ ಬೋರ್ಡ್ ಅನ್ನು ನಾವು ಗಮನಿಸಿದ್ದೇವೆ. ನಮ್ಮ ಹುಡುಕಾಟವು ಸೆಲಿಕ್ ಟರ್ಕಿಯಲ್ಲಿರುವ ಬ್ಯಾಟರಿ ಉತ್ಪಾದನಾ ಕಂಪನಿಯಾಗಿದೆ ಎಂದು ತಿಳಿದುಬಂದಿದೆ.

ಅಂಗಡಿಯ ಹೆಸರನ್ನು ತೋರಿಸುವ ಚಿತ್ರ. (ಮೂಲ: ಎಕ್ಸ್/ಸೆಲಿಕ್ ಬ್ಯಾಟರಿ)

ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧವಿಲ್ಲದ ವೀಡಿಯೋವನ್ನು ಲಿಂಕ್ ಮಾಡಲಾಗುತ್ತಿದೆ ಎಂದು ಈ ಸಾಕ್ಷ್ಯವು ನಮಗೆ ಸೂಚಿಸುತ್ತದೆ.

ತೀರ್ಪು

ಭಾರತದಲ್ಲಿ ಪ್ರಸ್ತುತ ೨.೦ ರೈತರ ಪ್ರತಿಭಟನೆಗಳಿಂದ ವೀಡಿಯೋ ಹುಟ್ಟಿಕೊಂಡಿಲ್ಲ; ಇದು ಟರ್ಕಿಯಿಂದ ಬಂದಿದೆ. ವೀಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿ ನಮಗೆ ಅದನ್ನು ಖಚಿತಪಡಿಸಿದ್ದಾರೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.

(ಅನುವಾದಿಸಿದವರು: ರಜಿನಿ ಕೆ ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ