ಮುಖಪುಟ ಭಾರತದ ಪ್ರಧಾನಿ ಮೋದಿಯವರು ಪೋಪ್ ಅವರನ್ನು ಭೇಟಿ ಮಾಡಿದ ಹಳೆಯ ವೀಡಿಯೋವನ್ನು ಇಟಲಿಯಲ್ಲಿ ಇತ್ತೀಚೆಗೆ ನಡೆದ ಜಿ೭ ಶೃಂಗಸಭೆಗೆ ಲಿಂಕ್ ಮಾಡಲಾಗಿದೆ

ಭಾರತದ ಪ್ರಧಾನಿ ಮೋದಿಯವರು ಪೋಪ್ ಅವರನ್ನು ಭೇಟಿ ಮಾಡಿದ ಹಳೆಯ ವೀಡಿಯೋವನ್ನು ಇಟಲಿಯಲ್ಲಿ ಇತ್ತೀಚೆಗೆ ನಡೆದ ಜಿ೭ ಶೃಂಗಸಭೆಗೆ ಲಿಂಕ್ ಮಾಡಲಾಗಿದೆ

ಮೂಲಕ: ಉಮ್ಮೆ ಕುಲ್ಸುಮ್

ಜೂನ್ 24 2024

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಭಾರತದ ಪ್ರಧಾನಿ ಮೋದಿಯವರು ಪೋಪ್ ಅವರನ್ನು ಭೇಟಿ ಮಾಡಿದ ಹಳೆಯ ವೀಡಿಯೋವನ್ನು ಇಟಲಿಯಲ್ಲಿ ಇತ್ತೀಚೆಗೆ ನಡೆದ ಜಿ೭ ಶೃಂಗಸಭೆಗೆ ಲಿಂಕ್ ಮಾಡಲಾಗಿದೆ ಇಟಲಿಯಲ್ಲಿ ಜಿ೭ ಶೃಂಗಸಭೆಯ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯನ್ನು ಬಿಂಬಿಸುವ ಪೋಷ್ಟ್‌ನ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ವೀಡಿಯೋ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ ೨೦೨೧ ರಲ್ಲಿ ವ್ಯಾಟಿಕನ್‌ನಲ್ಲಿ ಪೋಪ್ ಫ್ರಾನ್ಸಿಸ್ ಅವರ ಭೇಟಿಯನ್ನು ಚಿತ್ರಿಸುತ್ತದೆ, ಇಟಲಿಯ ಇತ್ತೀಚಿನ ಜಿ೭ ಶೃಂಗಸಭೆಯನಲ್ಲ

ಹೇಳಿಕೆ ಏನು?

ಇಟಲಿಯಲ್ಲಿ ನಡೆದ ಜಿ೭ ಶೃಂಗಸಭೆಯ ಕೆಲವು ದಿನಗಳ ನಂತರ, ವ್ಯಾಟಿಕನ್ ಸಿಟಿಯ ಮುಖ್ಯಸ್ಥ ಪೋಪ್ ಫ್ರಾನ್ಸಿಸ್ ಅವರನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡುತ್ತಿರುವುದನ್ನು ಬಿಂಬಿಸುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಶೃಂಗಸಭೆಯ ಸಮಯದಲ್ಲಿ ಇತ್ತೀಚಿನ ಸೈಡ್‌ಲೈನ್ ಸಭೆಯನ್ನು ಸೆರೆಹಿಡಿಯಲಾಗಿದೆ ಎಂದು ಸೂಚಿಸುವ ಹೇಳಿಕೆಗಳೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಕಾರ್ಯಕ್ರಮದ ಸಮಯದಲ್ಲಿ ಪೋಪ್ ಆಹ್ವಾನಿಸಿದ ಏಕೈಕ ನಾಯಕ ಮೋದಿ ಎಂದು ಕೆಲವು ಪೋಷ್ಟ್ ಗಳು ಹೇಳಿಕೊಂಡಿವೆ, ಇದನ್ನು ರಾಷ್ಟ್ರೀಯ ಮಾಧ್ಯಮಗಳು ನಿರ್ಲಕ್ಷಿಸಿವೆ.

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಕ್ಲಿಪ್ ಅನ್ನು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, “ಮಾಧ್ಯಮವು ಈ ಪ್ರಭಾವವನ್ನು ತೋರಿಸುವುದಿಲ್ಲ. ಇಟಲಿಯಲ್ಲಿ ಜಿ೭ ಸಭೆಯಲ್ಲಿ ಭಾಗವಹಿಸುವ ಎಲ್ಲಾ ರಾಜ್ಯಗಳ ಮುಖ್ಯಸ್ಥರ ಪೈಕಿ ಕೇವಲ ಮೋದಿ ಜಿ ಅವರನ್ನು ಪೋಪ್ ಆಹ್ವಾನಿಸಿದ್ದಾರೆ. ಇದು ಇಂದಿನ ಭಾರತದ ಶಕ್ತಿ. ಭಾರತೀಯ ಸೆಕ್ಯುಲರ್‌ಗಳು (sic) ಮೋದಿ ಜಿಗೆ ಯಾವುದೇ ಕ್ರೆಡಿಟ್ ನೀಡಿಲ್ಲ." ಬರೆಯುವ ಸಮಯದಲ್ಲಿ, ಪೋಷ್ಟ್ ೩೭,೦೦೦ ವೀಕ್ಷಣೆಗಳನ್ನು ಗಳಿಸಿದೆ. ಎಕ್ಸ್ ನಲ್ಲಿ ಇದೇ ರೀತಿಯ ಪೋಷ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯು ಇಲ್ಲಿ ಕಾಣಬಹುದು.

ಈ ವೀಡಿಯೋ ತ್ವರಿತವಾಗಿ ವಾಟ್ಸ್ಆಪ್ ಮತ್ತು ಫೇಸ್‌ಬುಕ್ ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಡಿತು, ಪ್ರತಿಯೊಂದೂ ಒಂದೇ ರೀತಿಯ ಹೇಳಿಕೆಗಳನ್ನು ಪ್ರತಿಧ್ವನಿಸುತ್ತದೆ. ಆರ್ಕೈವ್ ಮಾಡಿದ ಫೇಸ್‌ಬುಕ್ ಪೋಷ್ಟ್‌ಗಳನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.


ಆನ್‌ಲೈನ್‌ನಲ್ಲಿ ಮಾಡಿದ ವೈರಲ್ ಕ್ಲೈಮ್‌ಗಳ ಸ್ಕ್ರೀನ್‌ಶಾಟ್. (ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ವೀಡಿಯೋ ಕುರಿತು ನಾವು ಕಂಡುಕೊಂಡದ್ದು

ವೈರಲ್ ಕ್ಲಿಪ್‌ನಿಂದ ವಿವಿಧ ಕೀಫ್ರೇಮ್‌ಗಳನ್ನು ಬಳಸಿಕೊಂಡು, ನಾವು ರಿವರ್ಸ್ ಇಮೇಜ್ ಸರ್ಚ್ ಅನ್ನು ನಡೆಸಿದ್ದೇವೆ ಮತ್ತು ಮೋದಿ ಅವರ ಅಧಿಕೃತ ಯೂಟ್ಯೂಬ್ ಚಾನಲ್‌ ನಲ್ಲಿ ಮೂಲ ವೀಡಿಯೋವನ್ನು ಪತ್ತೆಹಚ್ಚಿದ್ದೇವೆ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಅಲ್ಲಿ ಅದನ್ನು ಅಕ್ಟೋಬರ್ ೩೦, ೨೦೨೧ ರಂದು ಅಪ್‌ಲೋಡ್ ಮಾಡಲಾಗಿದೆ. "ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ" (ಇಂಗ್ಲಿಷ್‌ನಿಂದ ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯಡಿ ವೀಡಿಯೋವನ್ನು ಅಪ್ಲೋಡ್ ಮಾಡಲಾಗಿದೆ.

ಹೆಚ್ಚಿನ ತನಿಖೆಯು ಅಕ್ಟೋಬರ್ ೨೦೨೧ ರಿಂದ ವೈರಲ್ ಕ್ಲಿಪ್‌ನಲ್ಲಿರುವ ದೃಶ್ಯಗಳನ್ನು ಒಳಗೊಂಡಿರುವ ಬಹು ಮುಖ್ಯವಾಹಿನಿಯ ಸುದ್ದಿ ವರದಿಗಳನ್ನು ಬಹಿರಂಗಪಡಿಸಿದೆ. ಅಕ್ಟೋಬರ್ ೩೦, ೨೦೨೧ ರ ಅಸೋಸಿಯೇಟೆಡ್ ಪ್ರೆಸ್ ವರದಿಯ ಪ್ರಕಾರ, ಮೋದಿ ವ್ಯಾಟಿಕನ್ ನಗರಕ್ಕೆ ಭೇಟಿ ನೀಡಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾದರು. ರೋಮ್‌ನಲ್ಲಿ ಜಿ೨೦ ಶೃಂಗಸಭೆಯ ಮೊದಲು ಸಂಭವಿಸಿದ ಈ ಮುಖಾಮುಖಿಯು ಅವರ ಮೊದಲ ಸಭೆಯನ್ನು ಗುರುತಿಸಿತು. ಭೇಟಿಯ ವೇಳೆ ಪೋಪ್ ಫ್ರಾನ್ಸಿಸ್ ಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ ಮೋದಿ ಅವರಿಗೆ ಬೆಳ್ಳಿಯ ಕ್ಯಾಂಡಲಬ್ರಾ ಮತ್ತು ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು.

ಇದರ ಜೊತೆಗೆ, ಮೋದಿ ಅವರು ಅಕ್ಟೋಬರ್ ೨೦೨೧ ರ ಪೋಪ್ ಫ್ರಾನ್ಸಿಸ್ ಅವರೊಂದಿಗಿನ ಸಭೆಯ ಹಲವಾರು ಫೋಟೋಗಳನ್ನು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ (ಇಲ್ಲಿ ಆರ್ಕೈವ್ ಮಾಡಲಾಗಿದೆ), ಅದರ ಶೀರ್ಷಿಕೆ ಹೀಗಿದೆ: “ಪೋಪ್ ಫ್ರಾನ್ಸಿಸ್ ಅವರೊಂದಿಗೆ ನಾನು ಉತ್ತಮ ಭೇಟಿಯನ್ನು ಹೊಂದಿದ್ದೆ. ಅವರೊಂದಿಗೆ ಹಲವಾರು ವಿಷಯಗಳ ಬಗ್ಗೆ ಚರ್ಚಿಸಲು ನನಗೆ ಅವಕಾಶ ಸಿಕ್ಕಿತು ಮತ್ತು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದೆ."

ಇಟಲಿಯಲ್ಲಿ ೨೦೨೪ ರ ಜಿ೭ ಶೃಂಗಸಭೆಯ ಸಮಯದಲ್ಲಿ ಮೋದಿ ಅವರು ಇತರ ವಿಶ್ವ ನಾಯಕರೊಂದಿಗೆ ಪೋಪ್ ಫ್ರಾನ್ಸಿಸ್ ಅವರನ್ನು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೋ ವಾಸ್ತವವಾಗಿ ಅಕ್ಟೋಬರ್ ೨೦೨೧ ರ ಅವರ ಹಿಂದಿನ ಸಭೆಯ ತುಣುಕಾಗಿದೆ ಎಂದು ಸ್ಪಷ್ಟಪಡಿಸುವುದು ನಿರ್ಣಾಯಕವಾಗಿದೆ. ಈ ಹಳೆಯ ವೀಡಿಯೋವನ್ನು ಇತ್ತೀಚಿನ ಮೋದಿಯವರ ಪೋಪ್ ಜೊತೆಗಿನ 'ವಿಶೇಷ' ಭೇಟಿಯನ್ನು ಚಿತ್ರಿಸುವ  ತುಣುಕೆಂದು ತಪ್ಪಾಗಿ ಪ್ರಸ್ತುತಪಡಿಸಲಾಗಿದೆ.

ತೀರ್ಪು

ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗುವುದನ್ನು ಚಿತ್ರಿಸುವ ವೀಡಿಯೋ ಅಕ್ಟೋಬರ್ ೨೦೨೧ ರದ್ದಾಗಿದೆ ಮತ್ತು ಇಟಲಿಯಲ್ಲಿ ಇತ್ತೀಚಿನ ಜಿ೭ ಶೃಂಗಸಭೆಯ ಸಂದರ್ಭದಲ್ಲಿ ವಿಶೇಷ ಸಂವಾದ ಎಂದು ತಪ್ಪಾಗಿ ಚಿತ್ರಿಸಲಾಗಿದೆ.

(ಅನುವಾದಿಸಿದವರು: ರಜಿನಿ ಕೆ.ಜಿ)

Read this fact-check in English here

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ