ಮುಖಪುಟ ಮೆಕ್ಸಿಕನ್ ಶಾಸಕರೊಬ್ಬರು ಪಾರ್ಲಿಮೆಂಟ್ ನಲ್ಲಿ ಬಟ್ಟೆ ಬಿಚ್ಚಿರುವ ಚಿತ್ರಗಳನ್ನು ತಪ್ಪಾದ ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗಿದೆ

ಮೆಕ್ಸಿಕನ್ ಶಾಸಕರೊಬ್ಬರು ಪಾರ್ಲಿಮೆಂಟ್ ನಲ್ಲಿ ಬಟ್ಟೆ ಬಿಚ್ಚಿರುವ ಚಿತ್ರಗಳನ್ನು ತಪ್ಪಾದ ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗಿದೆ

ಮೂಲಕ: ವಿವೇಕ್ ಜೆ

ಜುಲೈ 21 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಮೆಕ್ಸಿಕನ್ ಶಾಸಕರೊಬ್ಬರು ಪಾರ್ಲಿಮೆಂಟ್ ನಲ್ಲಿ ಬಟ್ಟೆ ಬಿಚ್ಚಿರುವ ಚಿತ್ರಗಳನ್ನು ತಪ್ಪಾದ ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗಿದೆ

ಫ್ಯಾಕ್ಟ್ ಚೆಕ್ಸ್

ತೀರ್ಪು ಸಂದರ್ಭದಿಂದ ಹೊರಗಿಡಲಾಗಿದೆ

ಮೆಕ್ಸಿಕನ್ ಸಂಸದ ಆಂಟೋನಿಯೊ ಗಾರ್ಸಿಯಾ ಕೊನೆಜೊ ಅವರು ೨೦೧೩ ರಲ್ಲಿ ಇಂಧನ ಮಸೂದೆಯನ್ನು ಸಂಸತ್ತಿನಲ್ಲಿ ಪ್ರತಿಭಟಿಸಿದರು. ಬಡತನ ಮತ್ತು ನಿರುದ್ಯೋಗದ ವಿರುದ್ಧ ಅಲ್ಲ.

ಸಂದರ್ಭ
ಮೆಕ್ಸಿಕನ್ ಶಾಸಕರೊಬ್ಬರು ತಮ್ಮ ಬಟ್ಟೆಗಳನ್ನು ಕಿತ್ತೆಸೆದಿರುವ ಚಿತ್ರವನ್ನು ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಈ ಪೋಷ್ಟ್ ಗಳ ಶೀರ್ಷಿಕೆಯ ಪ್ರಕಾರ, ಈ ಶಾಸಕರು ಬಡತನ, ನಿರುದ್ಯೋಗ ಮತ್ತು ಮೆಕ್ಸಿಕೋದ ಜನರ ಜೀವನ ಪರಿಸ್ಥಿತಿಗಳನ್ನು ಪ್ರತಿಭಟಿಸುತ್ತಿದ್ದಾರೆ. ಈ ಪೋಷ್ಟ್ ಗಳು "ವಿದೇಶಗಳಲ್ಲಿ ಶಾಸಕರು ತಮ್ಮನ್ನು ಆಯ್ಕೆ ಮಾಡಿದ ಜನರಿಗಾಗಿ ಪ್ರತಿಭಟನೆ ಮತ್ತು ಹೋರಾಟ ನಡೆಸುತ್ತಿರುವಾಗ, ಭಾರತೀಯ ಶಾಸಕರು ಏನು ಮಾಡುತ್ತಿದ್ದಾರೆ?"

ಕನ್ನಡದಲ್ಲಿ ಕಂಡುಬಂದ ಅಂತಹ ಒಂದು ಪೋಷ್ಟ್ ಹೀಗೆ ಹೇಳುತ್ತದೆ, “ಮೆಕ್ಸಿಕೋದ ಸಂಸತ್ತಿನ ಚರ್ಚೆಯ ಸಂದರ್ಭದಲ್ಲಿ, ಸಂಸತ್ ಸದಸ್ಯನೊಬ್ಬ ತನ್ನ ಎಲ್ಲಾ ಬಟ್ಟೆಗಳನ್ನು ಕಳಚಿ ಹಾಕಿ ಸಂಸತ್ ನಲ್ಲಿ ಮಾತನಾಡುತ್ತಾನೆ. ಆಗ ಅಲ್ಲಿನ ಅಧ್ಯಕ್ಷ , ನಿನಗೆ ನಾಚಿಕೆಯಾಗುವುದಿಲ್ಲವೇ ಎಂದು ಕೇಳುತ್ತಾನೆ. ನನ್ನನ್ನು ಬೆತ್ತಲೆ ನೋಡಿದಾಗ ನಿನಗೆ ನಾಚಿಕೆಯಾಗುತ್ತಿದೆಯೇ.? ದೇಶದ ಕೆಟ್ಟ ಆರ್ಥಿಕ ಸ್ಥಿತಿ, ನಿರುದ್ಯೋಗ, ಉಚಿತವಾಗಿ ಕೊಟ್ಟು ಜನರನ್ನೂ ಭ್ರಷ್ಟರನ್ನಾಗಿಸಿ, ತಾವೂ ಭ್ರಷ್ಟರಾಗಿರುವ ರಾಜಕಾರಣಿಗಳು, ಭ್ರಷ್ಟ ಅಧಿಕಾರಿಗಳು ಈ ದೇಶವನ್ನು ಲೂಟಿ ಮಾಡಿ , ಜನರನ್ನು ಗುಲಾಮಗಿರಿಗೆ ತಳ್ಳುತ್ತಿರುವುದನ್ನು ನೋಡಿ ನಿನಗೆ ನಾಚಿಕೆಯಾಗುವುದಿಲ್ಲವೇ.? ಇಡೀ ದೇಶ ಈಗ ಬೆತ್ತಲೆಯಾಗಿರುವುದು ನಿನಗೆ ಕಾಣುತ್ತಿಲ್ಲವೇ.‌? ಎಂದು ಕೇಳುತ್ತಾನೆ. ಪರದೇಶದಲ್ಲಿ MP, MLA ಗಳು ಪ್ರಶ್ನೆ ಕೇಳುತ್ತಾರೆ. ನಮ್ಮ ದೇಶದಲ್ಲಿ ಆಯ್ಕೆಯಾಗಿರುವ ರಾಜಕಾರಣಿಗಳು ಈ ರೀತಿ ಪ್ರಶ್ನೆ ಕೇಳುತ್ತಾರೆಯೇ?"

ಆದರೆ, ಮೆಕ್ಸಿಕನ್ ಶಾಸಕರೊಬ್ಬರು ಸಂಸತ್ತಿನಲ್ಲಿ ತಮ್ಮ ಬಟ್ಟೆಗಳನ್ನು ಕಿತ್ತೊಗೆಯಲು ಕಾರಣವಾದ ಘಟನೆಯನ್ನು ಈ ಪೋಷ್ಟ್ ಗಳಲ್ಲಿ ತಪ್ಪಾಗಿ ನಿರೂಪಿಸಲಾಗಿದೆ.

ವಾಸ್ತವವಾಗಿ

ಮೆಕ್ಸಿಕನ್ ಶಾಸಕರೊಬ್ಬರು ಸಂಸತ್ತಿನಲ್ಲಿ ತಮ್ಮ ಬಟ್ಟೆಗಳನ್ನು ಕಿತ್ತೆಸೆದ ಘಟನೆಗಾಗಿ ನಾವು ಕೀವರ್ಡ್ ಸರ್ಚ್ ನಡೆಸಿದಾಗ ನಮಗೆ ೨೦೧೩ ರ ಹಲವಾರು ಸುದ್ದಿ ವರದಿಗಳು ಕಂಡುಬಂದವು. ಡಿಸೆಂಬರ್ ೧೩, ೨೦೧೩ ರಲ್ಲಿ ಪ್ರಕಟವಾದ ಬಿಬಿಸಿಯ ಅಂತಹ ಒಂದು ವರದಿಯು "ಎನರ್ಜಿ ಬಿಲ್ ವಿಷಯದಲ್ಲಿ ಮೆಕ್ಸಿಕನ್ ಸಂಸದರು ಬಟ್ಟೆ ಬಿಚ್ಚಿ ಪ್ರತಿಭಟಿಸಿದ್ದಾರೆ" ಎಂಬ ಅರ್ಥವನ್ನು ಕೊಡುವ ಶೀರ್ಷಿಕೆಯನ್ನು ಹೊಂದಿತ್ತು. ವರದಿಯು ಸಂಸತ್ತಿನ ಸದಸ್ಯ (ಎಂಪಿ) ಅನ್ನು ಆಂಟೋನಿಯೊ ಗಾರ್ಸಿಯಾ ಕೊನೆಜೊ ಎಂದು ಗುರುತಿಸಿದೆ ಮತ್ತು ಅವರು ಮೆಕ್ಸಿಕನ್ ಸಂಸತ್ತು ಅಂಗೀಕರಿಸಿದ ಹೊಸ ಇಂಧನ ಮಸೂದೆಯನ್ನು ಪ್ರತಿಭಟಿಸುತ್ತಿದ್ದಾರೆ ಎಂದು ಗಮನಿಸಿದೆ.

ಈ ಶಾಸನವನ್ನು ಅನುಮೋದಿಸುವ ಮೂಲಕ ಮೆಕ್ಸಿಕನ್ ಸರ್ಕಾರವು ದೇಶದ ತೈಲ ಸಂಪನ್ಮೂಲಗಳ ಮೇಲೆ ರಾಜ್ಯದ ಎಪ್ಪತ್ತೈದು ವರ್ಷಗಳ ಹಿಂದಿನ ಏಕಸ್ವಾಮ್ಯವನ್ನು ಕೊನೆಗೊಳಿಸಿತು ಎಂದು ಬಿಬಿಸಿ ಪ್ರಕಟಿಸಿದ ಇದೆ ವೀಡಿಯೋವಿನ ಸುದ್ದಿ ವರದಿಯ ಹಿನ್ನಲೆಯಲ್ಲಿ ಹೇಳುವುದನ್ನು ಕೇಳಬಹುದು. ಸಂಸದರ ವೀಡಿಯೋವನ್ನು ಸಹ ಬಿಬಿಸಿ ವರದಿ ಒಳಗೊಂಡಿದೆ. ಹೊಸ ಮಸೂದೆಯು ವಿದೇಶಿ ತೈಲ ಕಂಪನಿಗಳಿಗೆ ಮೆಕ್ಸಿಕೊದಲ್ಲಿ ತೈಲವನ್ನು ಡ್ರಿಲ್ ಮಾಡಿ ತೆಗೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಈ ವರದಿಯು ಗಮನಿಸಿದೆ.

ವೀಡಿಯೋದ ವಿಸ್ತೃತ ಆವೃತ್ತಿಗಾಗಿ ಹುಡುಕಿದಾಗ, ನಾವು ಡಿಸೆಂಬರ್ ೧೨, ೨೦೧೩ ರಂದು ಮೆಕ್ಸಿಕನ್ ಚೇಂಬರ್ ಆಫ್ ಡೆಪ್ಯೂಟೀಸ್ (Cámara de Diputados) ನ ಅಧಿಕೃತ ಯೂಟ್ಯೂಬ್ ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಹದಿನೇಳು ನಿಮಿಷಗಳ-ಉದ್ದದ ವೀಡಿಯೋವನ್ನು ಕಂಡುಕೊಂಡಿದ್ದೇವೆ. ವೀಡಿಯೋದ ಶೀರ್ಷಿಕೆಯು "ಡಿಪ್. ಆಂಟೋನಿಯೊ ಗಾರ್ಸಿಯಾ (ಪಿಆರ್‌ಡಿ) - ಎನರ್ಜಿ ರಿಫಾರ್ಮ್ (ಮೀಸಲು)” ಹೀಗಿದ್ದು- ಗಾರ್ಸಿಯಾ ಮೆಕ್ಸಿಕೊದ ಡೆಮಾಕ್ರಟಿಕ್ ರೆವಲ್ಯೂಷನ್ ಪಾರ್ಟಿಯಿಂದ ಮೆಕ್ಸಿಕನ್ ರಾಜ್ಯವಾದ ಮೈಕೋಕಾನ್‌ನಿಂದ ಬಂದವರು ಎಂದು ವೀಡಿಯೋ ತೋರಿಸುತ್ತದೆ.

ಭಾರತದಲ್ಲಿನ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇತ್ತೀಚೆಗೆ ಹಂಚಿಕೊಂಡ ಪೋಷ್ಟ್‌ ಗಳಲ್ಲಿ ಬಳಸಲಾದ ಚಿತ್ರಗಳು ಈ ವೀಡಿಯೋದಿಂದಾ ಬಂದಿವೆ ಎಂಬುದು ಸ್ಪಷ್ಟವಾಗಿದೆ. ಸಾಮಾಜಿಕ ಮಾಧ್ಯಮದ ಪೋಷ್ಟ್ ಗಳಲ್ಲಿ ಹೇಳಿಕೊಳ್ಳುವುದಕ್ಕಿಂತ ಭಿನ್ನವಾಗಿ, ಗಾರ್ಸಿಯಾ ಇಂಧನ ಬಿಲ್ ವಿರುದ್ಧ ಪ್ರತಿಭಟಿಸುತ್ತಿದ್ದರು ಮತ್ತು ಅವರ ಚಿತ್ರವನ್ನು ತಪ್ಪಾದ ಸಂದರ್ಭದಲ್ಲಿ ಬಳಸಲಾಗುತ್ತಿದೆ.  

ಇದೇ ರೀತಿಯ ಪೋಷ್ಟ್ ಗಳು ಹಿಂದಿನ ವರ್ಷಗಳಲ್ಲಿ ವಿವಿಧ ಭಾರತೀಯ ಭಾಷೆಗಳಲ್ಲಿ ಕಾಣಿಸಿಕೊಂಡಿವೆ ಮತ್ತು ಇತರ ಫ್ಯಾಕ್ಟ್ ಚೆಕ್ ಗಳು ೨೦೨೧ ರಿಂದಲೇ ಅಂತಹ ಪೋಷ್ಟ್ ಗಳನ್ನೂ ತಪು ಎಂದು ಸಾಬೀತು ಮಾಡಿದ್ದಾರೆ.

ತೀರ್ಪು
ವಿದೇಶಿ ಕಂಪನಿಗಳಿಗೆ ದೇಶದಲ್ಲಿ ತೈಲವನ್ನು ಕೊರೆಯಲು ಅನುಮತಿ ನೀಡುವ ಮೆಕ್ಸಿಕೊದ ಇಂಧನ ಮಸೂದೆಯನ್ನು ಪ್ರತಿಭಟಿಸಿ ಕೊನೆಜೊ ತನ್ನ ಬಟ್ಟೆಗಳನ್ನು ಬಿಚ್ಚಿ ಹಾಕಿದರು. ಈ ಘಟನೆ ಡಿಸೆಂಬರ್ ೨೦೧೩ ರಲ್ಲಿ ಸಂಭವಿಸಿದ್ದು. ಈ ಘಟನೆಯ ಚಿತ್ರಗಳನ್ನು ಕೆಲವು ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ವಿಭಿನ್ನ ಸಂದರ್ಭದೊಂದಿಗೆ ಹೋಲಿಸಿ ಹಂಚಿಕೊಳ್ಳುತ್ತಿದ್ದಾರೆ. ಆದ್ದರಿಂದ, ನಾವು ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ