ಮುಖಪುಟ ಅಲ್ಜೀರಿಯಾದ ಜನರು ಫುಟ್ಬಾಲ್ ಕ್ಲಬ್ ನ ಗೆಲುವನ್ನು ಆಚರಿಸುತ್ತಿರುವ ವೀಡಿಯೋವನ್ನು ಇಸ್ರೇಲ್ ಗಾಜಾ ಮೇಲೆ ದಾಳಿ ನಡೆಸಿದ್ದನ್ನು ತೋರಿಸುತ್ತದೆ ಎಂದು ಹಂಚಿಕೊಳ್ಳಲಾಗಿದೆ

ಅಲ್ಜೀರಿಯಾದ ಜನರು ಫುಟ್ಬಾಲ್ ಕ್ಲಬ್ ನ ಗೆಲುವನ್ನು ಆಚರಿಸುತ್ತಿರುವ ವೀಡಿಯೋವನ್ನು ಇಸ್ರೇಲ್ ಗಾಜಾ ಮೇಲೆ ದಾಳಿ ನಡೆಸಿದ್ದನ್ನು ತೋರಿಸುತ್ತದೆ ಎಂದು ಹಂಚಿಕೊಳ್ಳಲಾಗಿದೆ

ಮೂಲಕ: ರಜಿನಿ ಕೆ.ಜಿ

ಅಕ್ಟೋಬರ್ 13 2023

ಲೇಖನ ಹಂಚಿಕೊಳ್ಳಿ: facebook logo twitter logo linkedin logo
ಅಲ್ಜೀರಿಯಾದ ಜನರು ಫುಟ್ಬಾಲ್ ಕ್ಲಬ್ ನ ಗೆಲುವನ್ನು ಆಚರಿಸುತ್ತಿರುವ ವೀಡಿಯೋವನ್ನು ಇಸ್ರೇಲ್ ಗಾಜಾ ಮೇಲೆ ದಾಳಿ ನಡೆಸಿದ್ದನ್ನು ತೋರಿಸುತ್ತದೆ ಎಂದು ಹಂಚಿಕೊಳ್ಳಲಾಗಿದೆ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್‌ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಫ್ಯಾಕ್ಟ್ ಚೆಕ್ಸ್

ತೀರ್ಪು ತಪ್ಪು

೨೦೨೨-೨೩ ಅಲ್ಜೀರಿಯನ್ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಸಿಆರ್ ಬೆಲೌಯಿಜ್‌ದಾದ್ ತಂಡದ ವಿಜಯವನ್ನು ಆಚರಿಸಲು ಪಟಾಕಿಗಳನ್ನು ಹಚ್ಚಿದನ್ನು ವೀಡಿಯೋ ತೋರಿಸುತ್ತದೆ.

ಸಂದರ್ಭ

ಗಾಜಾಕ್ಕೆ ಇಸ್ರೇಲಿ ಸೇನಾಪಡೆಯ ಪ್ರತಿಕ್ರಿಯೆಯನ್ನು ಈ ವೀಡಿಯೋ ತೋರಿಸುತ್ತದೆ ಎಂಬ ತಪ್ಪಾದ ಹೇಳಿಕೆಯೊಂದಿಗೆ ಎಕ್ಸ್‌ ನಲ್ಲಿ (ಇಲ್ಲಿ ಆರ್ಕೈವ್) ಹಂಚಿಕೊಳ್ಳಲಾಗುತ್ತಿದೆ. ಅದಕ್ಕೆ ನೀಡಿದ  ಶೀರ್ಷಿಕೆ ಹೀಗಿದೆ, "ಇದು ದೀಪಾವಳಿ ಪಟಾಕಿ ಅಲ್ಲ. ಇದು ಹಮಾಸ್ ಗೆ ಇಸ್ರೇಲ್‌ನ ಪ್ರತಿಕ್ರಿಯೆಯಾಗಿದೆ. ವೆಲ್ ಡನ್....ಗ್ರೇಟ್ ರಿಟೇಲೇಷನ್ #ಇಸ್ರೇಲ್ ಅಂಡರ್ ಅಟ್ಯಾಕ್ #ಇಂಡಿಯಾ ವಿತ್ ಇಸ್ರೇಲ್.” ಅನೇಕ ಬಳಕೆದಾರರು ಈ ಪೋಷ್ಟ್ ಅನ್ನು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿಯೂ ಹಂಚಿಕೊಂಡಿದ್ದಾರೆ. ಪೋಷ್ಟ್ ಗಳ ಆರ್ಕೈವ್ ಅನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್‌ಗಳು.
(ಮೂಲ: ಎಕ್ಸ್/ಫೇಸ್‌ಬುಕ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ಆದರೆ, ಅಲ್ಜೀರಿಯಾದ ಫುಟ್‌ಬಾಲ್ ಅಭಿಮಾನಿಗಳು ೨೦೨೩ ರಲ್ಲಿ ಅಲ್ಜೀರ್ಸ್‌ನ ಬೀದಿಗಳಲ್ಲಿ ಪಟಾಕಿಗಳನ್ನು ಬೆಳಗಿಸುವ ಮೂಲಕ ಆಚರಿಸುತ್ತಿರುವುದನ್ನು ವೀಡಿಯೋ ತೋರಿಸುತ್ತದೆ. 

ವಾಸ್ತವಾಂಶಗಳೇನು?

ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ, ಜುಲೈ ೧೬, ೨೦೨೩ ರಂದು @tnslm9829 ಎಂಬ ಯೂಟ್ಯೂಬ್ ಬಳಕೆದಾರರಿಂದ ಕಿರು ವೀಡಿಯೋವಾಗಿ ಹಂಚಿಕೊಳ್ಳಲಾದ ಅದೇ ಕ್ಲಿಪ್ ಅನ್ನು ಯೂಟ್ಯೂಬ್ ನಲ್ಲಿ ನಾವು ಕಂಡುಕೊಂಡೆವು. ಈ ಕಿರು ಕ್ಲಿಪ್ ವೈರಲ್ ವೀಡಿಯೋವನ್ನು ಹೋಲುತ್ತದೆ, ಏಕೆಂದರೆ ನಾವು ಅದೇ ನೀಲಿ ಮತ್ತು ಹಸಿರು ಹೋರ್ಡಿಂಗ್ ಅನ್ನು ಕಾಣಬಹುದು. ಇಸ್ರೇಲ್ ಮೇಲೆ ಹಮಾಸ್ ದಾಳಿಗೂ ಮುನ್ನವೇ ವೀಡಿಯೋ ಆನ್ ಲೈನ್ನಲ್ಲಿತ್ತು ಎಂಬುದನ್ನು ಇದು ಸೂಚಿಸುತ್ತದೆ.

ವೈರಲ್ ವೀಡಿಯೋ ಮತ್ತು ಯೂಟ್ಯೂಬ್ ವೀಡಿಯೋ ಹೋಲಿಕೆ. (ಮೂಲ: ಎಕ್ಸ್‌/ಯೂಟ್ಯೂಬ್/ಸ್ಕ್ರೀನ್‌ಶಾಟ್‌ಗಳು)

ವೀಡಿಯೋದ ವಿವರಣೆಯು 'CRB' ಅಕ್ಷರಗಳನ್ನು ಹೊಂದಿತ್ತು. ಸಿ ಆರ್ ಬಿ ಅಲ್ಜೀರಿಯನ್ ಅಸೋಸಿಯೇಶನ್ ಫುಟ್‌ಬಾಲ್ ಕ್ಲಬ್ ಎಂದು ನಮ್ಮ ಸಂಶೋಧನೆಯು ನಮಗೆ ತೋರಿಸಿದೆ. ಅದು ಚಬಾಬ್ ರಿಯಾದಿ ಡಿ ಬೆಲೌಯಿಜ್‌ದಾದ್ ಅಥವಾ  ಸಿ ಆರ್ ಬೆಲೌಯಿಜ್‌ದಾದ್  ಅನ್ನು ಪ್ರತಿನಿಧಿಸುತ್ತದೆ.

ಸಿ ಆರ್ ಬೆಲೌಯಿಜ್‌ದಾದ್ ವಿಜಯದ ನಂತರ ಜುಲೈ ೨೦೨೩ ರಲ್ಲಿ ಎಕ್ಸ್‌ ಪೋಷ್ಟ್ ನಲ್ಲಿ ಇದೇ ರೀತಿಯ ವೀಡಿಯೋವನ್ನು ಹಂಚಿಕೊಳ್ಳಲಾಗಿತ್ತು ಎಂದು ನಮ್ಮ ಸಂಶೋಧನೆಯಲ್ಲಿ ಕಂಡುಬಂದಿದೆ. ಒಂದೇ ರೀತಿಯ ದೃಶ್ಯಗಳನ್ನು ಹಂಚಿಕೊಂಡ ಅಂತಹ ಒಂದು ಪೋಷ್ಟ್ ನಲ್ಲಿ ನಾವು ಶಂಕುವಿನಾಕಾರದ ರಚನೆಯನ್ನು ನೋಡಬಹುದು ಮತ್ತು ಕೀವರ್ಡ್ ಸರ್ಚ್ ಹಾಗು ಗೂಗಲ್ ಸ್ಟ್ರೀಟ್ ವ್ಯೂ ಅನ್ನು ಬಳಸಿಕೊಂಡು ಗೂಗಲ್ ಅರ್ಥ್ ಪ್ರೊ ನಲ್ಲಿ, ಅದು ಆಲ್ಜೀರಿಯಾದ ಹುತಾತ್ಮರ ಸ್ಮಾರಕ ಎಂದು ನಾವು  ಜಿಯೊಲೊಕೇಷನ್ ಮೂಲಕ ಕಂಡುಹಿಡಿದಿದ್ದೇವೆ.

ಸಿ ಆರ್ ಬೆಲೌಯಿಜ್‌ದಾದ್ ನ ಅಧಿಕೃತ ಯೂಟ್ಯೂಬ್ ಚಾನೆಲ್ ಆದ  'ಅಲ್ಟ್ರಾಸ್ ಫ್ಯಾನಾಟಿಕ್ ರೆಡ್ಸ್' ನಲ್ಲಿ, ಜುಲೈ ೧೯, ೨೦೨೩ ರಂದು ಅಲ್ಜೀರಿಯನ್ ಅಭಿಮಾನಿಗಳು ಕೆಂಪು ಪಟಾಕಿಗಳನ್ನು ಸುಡುವುದರ ವೀಡಿಯೋವನ್ನು ಪ್ರಕಟಿಸಿದೆ. ಅದರ ವಿವರಣೆಯು, "ಸಿ ಆರ್ ಬೆಲೌಯಿಜ್‌ದಾದ್ ನ ೬೧ ನೇ ವಾರ್ಷಿಕೋತ್ಸವ ಮತ್ತು ೧೦ ನೇ ಅಲ್ಜೀರಿಯನ್ ಚಾಂಪಿಯನ್‌ಶಿಪ್‌ನ ಆಚರಣೆ" ಎಂದು ಹೇಳುತ್ತದೆ. ಅಲ್ ಅರಾಬಿ, ಕತಾರ್ ಮೂಲದ ಸುದ್ದಿ ವೆಬ್‌ಸೈಟ್ ಪ್ರಕಾರ, ಅಲ್ಜೀರಿಯನ್ ತಂಡ ಸಿ ಆರ್ ಬೆಲೌಯಿಜಾದ್ ೨೦೨೩ ರಲ್ಲಿ ೨೦೨೨ -೨೩ ಅಲ್ಜೀರಿಯನ್ ಲೀಗ್ ಪ್ರೊಫೆಷನೆಲ್ಲೆ ೧ ಚಾಂಪಿಯನ್‌ಶಿಪ್ ಅನ್ನು ಗೆದ್ದುಕೊಂಡಿತು. ಕ್ಲಬ್ ಸತತವಾಗಿ ನಾಲ್ಕನೇ ಬಾರಿ ಚಾಂಪಿಯನ್‌ಶಿಪ್ ಗೆದ್ದಿತು ಮತ್ತು ಒಟ್ಟಾರೆಯಾಗಿ ಇದು ಅವರ ಹತ್ತನೇ ಗೆಲುವು. ಈ ಗೆಲುವು ಅಲ್ಜೀರಿಯಾದಲ್ಲಿ ಸಂಭ್ರಮಾಚರಣೆಗೆ ಪ್ರೇರೇಪಿಸಿತು ಎಂದು ವರದಿ ವಿವರಿಸಿದೆ. 

೨೦೧೮ ರ ಯಾಹೂ ಸ್ಪೋರ್ಟ್ಸ್ ವರದಿಯಲ್ಲಿ ಗಮನಿಸಿದಂತೆ ಕೆಂಪು ಪಟಾಕಿಗಳನ್ನು ಸುಡುವುದು ಹಿಂದಿನ ಸಂದರ್ಭಗಳಲ್ಲಿ ಅಲರ್ಜಿಯ ಅಭಿಮಾನಿಗಳು ಗಮನಿಸಿದ ಒಂದು  ಪದ್ದತಿಯ ಅಂಶ ಎಂದು ಇದು ದೃಢೀಕರಿಸುತ್ತದೆ - ಇದು ಅಲ್ಜೀರಿಯಾದ ಅಭಿಮಾನಿಗಳು ಗೆಲುವಿನ ನಂತರ ಕ್ರೀಡಾಂಗಣವನ್ನು ಕೆಂಪು ಪಕತಿ ಮತ್ತು ಹೊಗೆಯಿಂದ ತುಂಬುವ ಬಗ್ಗೆ ಮಾತನಾಡುತ್ತದೆ.

ಯಲ್ಲಾಕೋರಾ (ಈಜಿಪ್ಟ್ ಮೂಲದ ಅರೇಬಿಕ್ ಕ್ರೀಡಾ ಪೋರ್ಟಲ್), ಅಲ್ಜೀರಿಯಾ ಟುಡೆ - ಅಲ್ಜಜೈರಲಿಯೂಮ್ (ಅಲ್ಜೀರಿಯನ್ ಪತ್ರಿಕೆ), ಮತ್ತು dzayerNewsالآنية و المصداقية (ಅಲ್ಜೀರಿಯಾದ ಸ್ಥಳೀಯ ಸುದ್ದಿ ನೆಟ್‌ವರ್ಕ್) ನಂತಹ ಮಧ್ಯಪ್ರಾಚ್ಯ ಸುದ್ದಿ ನೆಟ್‌ವರ್ಕ್‌ಗಳಿಂದ ಈ ಆಚರಣೆಗಳ ಇದೇ ರೀತಿಯ ವೀಡಿಯೋಗಳನ್ನು  ಯೂಟ್ಯೂಬಿನಲ್ಲಿ ಪ್ರಕಟಿಸಲಾಗಿದೆ. 

ವೈರಲ್ ವೀಡಿಯೋದ ಜಿಯೊಲೊಕೇಷನ್ 

ವೈರಲ್ ವೀಡಿಯೋದಲ್ಲಿ ಟಿಕ್‌ಟಾಕ್ ವಾಟರ್‌ಮಾರ್ಕ್ ಅನ್ನು ನಾವು  ಗಮನಿಸಬಹುದು ಮತ್ತು ಅದರಲ್ಲಿ '@ramiguerfi41'  ಎಂಬ ಬಳಕೆದಾರಹೆಸರನ್ನು ಕಾಣಬಹುದು. ಹೆಚ್ಚಿನ ಸಂಶೋಧನೆಯಿಂದ ಈ ನಿರ್ದಿಷ್ಟ ಬಳಕೆದಾರರು ವೀಡಿಯೋವನ್ನು ಡಿಲೀಟ್ ಮಾದಿದ್ದಾರೆ ಎಂದು ತಿಳಿದುಬಂದಿದೆ.. ಆದರೆ ವೆಬ್ ಸಂಗ್ರಹದ ಮೂಲಕ ಇದು ವೈರಲ್ ವೀಡಿಯೋದ ಸ್ಪಷ್ಟ ಆವೃತ್ತಿಯಾಗಿದೆ ಎಂದು ಕಂಡುಬಂದಿದೆ.

ವೈರಲ್ ವೀಡಿಯೋದ ಆರಂಭದಲ್ಲಿ, ನಾವು ಸುತ್ತಲೂ ಪಾದಚಾರಿ ಮಾರ್ಗದಲ್ಲಿ ಕೆಲವು ಕಾರುಗಳನ್ನು ನಿಲ್ಲಿಸಿದ ಸಣ್ಣ ವೃತ್ತವನ್ನು ನೋಡಬಹುದು. ಲಾಜಿಕಲಿ ಫ್ಯಾಕ್ಟ್ಸ್ ಈ ಸ್ಥಳವನ್ನು ಜಿಯೋಲೊಕೇಟ್ ಮಾಡಿದಾಗ ಅಲ್ಜೀರಿಯಾದ ಅಲ್ಜಿಯರ್ಸ್‌ನಲ್ಲಿರುವ ಅಲ್ ಮೊಕ್ರಾನಿ, ಸಿಡಿ ಎಮ್'ಹಮೆದ್ ಪ್ಲೇಸ್ ಎಂದು ಕಂಡುಕೊಂಡಿತು. ಗೂಗಲ್ ಅರ್ತ್ ಪ್ರೋ ಅನ್ನು ಬಳಸಿಕೊಂಡು, ವೈರಲ್  ವೀಡಿಯೋದಲ್ಲಿ ತೋರಿಸಿರುವ ಸ್ಥಳವನ್ನು ಗುರುತಿಸಲು ನಮಗೆ ಸಾಧ್ಯವಾಯಿತು.

ವೈರಲ್ ವೀಡಿಯೋದಲ್ಲಿ ಕಂಡುಬರುವ ಕಟ್ಟಡಗಳು ಮತ್ತು ವೃತ್ತವನ್ನು ಗೂಗಲ್ ಅರ್ಥ್‌ನಲ್ಲಿ ಅಲ್ಜೀರಿಯಾಕ್ಕೆ ಜಿಯೋಲೊಕೇಟ್ ಮಾಡಲಾಗಿದೆ (ಮೂಲ: ಎಕ್ಸ್/ಗೂಗಲ್ ಅರ್ಥ್/ಸ್ಕ್ರೀನ್‌ಶಾಟ್‌ಗಳು)

ಆಚರಣೆಯ ವೀಡಿಯೋಗಳನ್ನು ಅಲ್ಜೀರಿಯಾದಲ್ಲಿ ತೆಗೆದುಕೊಳ್ಳಲಾಗಿದೆ ಮತ್ತು ಇಸ್ರೇಲ್ ನಲ್ಲಿ ಅಲ್ಲ ಎಂದು ಇದು ಸ್ಥಾಪಿಸುತ್ತದೆ.

ತೀರ್ಪು

ಅಲ್ಜೀರಿಯಾದಲ್ಲಿ ಕೆಂಪು ಪಟಾಕಿಗಳನ್ನು ಸುಡುವ ಮೂಲಕ ತಮ್ಮ ತಂಡದ ಗೆಲುವನ್ನು ಆಚರಿಸುತ್ತಿರುವ ಸಿಆರ್ ಬೆಲೌಯಿಜ್‌ದಾದ್ ಅಭಿಮಾನಿಗಳ ವೀಡಿಯೋವನ್ನು ಗಾಜಾದ ಮೇಲೆ ಇಸ್ರೇಲ್‌ನ ವೈಮಾನಿಕ ದಾಳಿ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಇದು ನಡೆಯುತ್ತಿರುವ ಇಸ್ರೇಲ್-ಗಾಜಾ ಸಂಘರ್ಷಕ್ಕೆ ಸಂಬಂಧಿಸಿಲ್ಲ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ) 

ನೀವು ಫ್ಯಾಕ್ಟ್-ಚೆಕ್ ಗಾಗಿ ಕ್ಲೈಮ್ ಸಲ್ಲಿಸಲು ಬಯಸುವಿರಾ ಅಥವಾ ನಮ್ಮ ಸಂಪಾದಕೀಯ ತಂಡವನ್ನು ಸಂಪರ್ಕಿಸಲು ಬಯಸುವಿರಾ?

0 ಗ್ಲೋಬಲ್ ಫ್ಯಾಕ್ಟ್ ಚೆಕ್ಸ್ ಪೂರ್ಣಗೊಂಡಿದೆ

ನಮ್ಮ ಜೀವನದ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ, ಅರ್ಥಪೂರ್ಣವಾದ ನಿರ್ಧಾರವನ್ನು ತೆಗೆದುಕೊಳ್ಳಲು ನಾವು ವಿಶ್ವಾಸನಾರ್ಹ ಮಾಹಿತಿಯ ಮೇಲೆ ಅವಲಂಬಿತರಾಗಿದ್ದೇ, ಆದರೆ ಈಗ ಇಂಟರ್‌ನೆಟ್ ನ ಸ್ವರೂಪವು ಹೇಗಿದೆ ಎಂದರೆ ತಪ್ಪು ಮಾಹಿತಿಗಳು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಜನರನ್ನು ತಲಪುತ್ತಿದೆ