ಲಾಜಿಕಲಿ ಫ್ಯಾಕ್ಟ್ಸ್ ಐರ್ಲೆಂಡ್ ನೋಂದಾಯಿತ ಕಂಪನಿಯಾಗಿದ್ದು, ಇದು ಯು.ಕೆ. ಆಧಾರಿತ, ದಿ ಲಾಜಿಕಲಿಕಂಪನಿಯ ಒಂದು ಅಂಶವಾಗಿದೆ. ತಪ್ಪು ಮಾಹಿತಿಗಳಿಂದ ಮತ್ತು ಆನ್ ಲೈನ್ ನಲ್ಲಿ ಹರಿದಾಡುವ ವಂಚಿಕ ಚರ್ಚೆಗಳಿಂದ ಉಂಟಾಗುವ ವೈಯಕ್ತಿಕ, ಸಾಂಸ್ಥಿಕ ಮತ್ತು ಸಾಮಾಜಿಕ ಹಾನಿಯನ್ನು ಕಡಿಮೆ ಮಾಡುವುದು ನಮ್ಮ ಉದ್ದೇಶ ಮತ್ತು ಆದ್ಯತೆಯಾಗಿದೆ.
ಇಂತಹ ತಪ್ಪು ಮಾಹಿತಿಗಳಿಂದ, ಆರೋಗ್ಯ, ಸಾರ್ವಜನಿಕ ಸುರಕ್ಷತೆ, ಚುನಾವಣಾ ಸಮಗ್ರತೆ ಮತ್ತು ರಾಷ್ಟ್ರೀಯ ಭದ್ರತೆಗೆ ಆಗಬಹುದಾದ ಹಾನಿಗಳನ್ನು ಗುರುತಿಸಿ ಹಲವಾರು ವೇದಿಕೆಗಳಿಗೆ ಮಾರುಕಟ್ಟೆಯಲ್ಲಿ ಸುರಕ್ಷಿತವಾಗಿ, ಜವಾಬ್ದಾರಿಯುತವಾಗಿ ಮತ್ತು ಅನುಸರಣೆಯಿಂದ ಕಾರ್ಯನಿರ್ವಹಿಸಲು ನೆರವಾಗಿದ್ದೇವೆ . ಲಾಜಿಕಲಿ ಫ್ಯಾಕ್ಟ್ಸ್, ಮೆಟಾ ಮತ್ತು ಟಿಕ್ ಟಾಕ್ ನ ಥರ್ಡ್ ಪಾರ್ಟಿ ಫ್ಯಾಕ್ಟ್ ಚೆಕಿಂಗ್ ಪ್ರೋಗ್ರಾಮ್ ನಲ್ಲಿಯೂ ಸಹ ಭಾಗಿಯಾಗಿದೆ. ಅದಲ್ಲದೆ, ನಾವು ೨೦೨೦ ರಿಂದ ಇಂಟರ್ನ್ಯಾಷನಲ್ ಫ್ಯಾಕ್ಟ್-ಚೆಕಿಂಗ್ ನೆಟ್‌ವರ್ಕ್ (IFCN) ನ ಪರಿಶೀಲಿಸಿದ ಸಹಿದಾರರಾಗಿದ್ದೇವೆ ಮತ್ತು ಭಾರತದಲ್ಲಿ ತಪ್ಪು ಮಾಹಿತಿಯ ಕಾಂಬ್ಯಾಟ್ ಅಲೈಯನ್ಸ್ (MCA) ನ ಸದಸ್ಯರಾಗಿದ್ದೇವೆ, ಹಾಗು ಯುರೋಪ್‌ನಲ್ಲಿ ಯುರೋಪಿಯನ್ ಡಿಜಿಟಲ್ ಮೀಡಿಯಾ ಅಬ್ಸರ್ವೇಟರಿಯ (EDMO) ಭಾಗಿಯಾಗಿದ್ದೇವೆ.